ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೦

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೯



ಯು ನಿನ್ನ ಲಕ್ಷ್ಯದಲ್ಲಿ ಇದ್ದಂತೆ ಕಂಡುಬರುವದಿಲ್ಲ ಅದು ನಿನ್ನ ಸ್ಮ ರಣೆಯಲ್ಲಿ ಇರದಿದ್ದರೆ; ನಾನು ಸ್ಮರಣೆಗೆ ತಂದು ಕೊಡುತ್ತೇನೆ ಸುಮ್ಮನೆ ಇಲ್ಲಿಂದ ಹೊರಟು ಹೋಗು ! ಇಲ್ಲವಾದರೆ ನಿನ್ನ ಗತಿಯು ನೆಟ್ಟಗಾಗಲಿಕ್ಕಿಲ್ಲ.
ಬೀರಬಲನು ಹೇಳಿದ ಈ ಬುದ್ಧಿವಾದದಿಂದ ಆ ಮದಾಂಧನಿಗೆ ಕೋಪವು ತಲೆಗೇರಿತು ಆ ಕೂಡಲೆ ಅವನು ನೀನು ಬಹಳೇ ಮೋಸಗಾರನು ನನ್ನನ್ನು ದೂರದಲ್ಲಿನಿಲ್ಲಿಸಿ, ಇವಳಿಗೆ ಉಪದೇಶ ಮಾಡಿ ಇವಳನ್ನು ಹರಣ ಮಾಡಿಕೊಂಡು ಹೋಗಬೇಕೆಂಬ ಕಾರ್ಯ ಸಾಧನೆಯಲ್ಲಿದ್ದಂತೆ ಕಂಡು ಬರುತ್ತದೆ ಇದರ ಪ್ರತಿಫಲವನ್ನು ಅನುಭವಿಸಲಿಕ್ಕೆ ಸಿದ್ಧನಾಗು ! ಇವಳ ನಿನ್ನ ಸ್ವಾಧೀನಕ್ಕೆ ಎಂದಿಗೂ ಕೊಡಲಾರೆನು ” ಎಂದು ನುಡಿದು ಒರೆಯಿಂದ ಖಡ್ಗವನ್ನು ಹಿಡಿದನು ಆಕೂಡಲೆ ಬೀರಬಲನು ತನ್ನ ಪ್ರಚ್ಛನ್ನ ವೇಪವನ್ನು ತೆಗೆದು ಚಲ್ಲಿ, ಎದುರಿಗೆ ನಿಂತುಕೊಂಡನು ಆಗ ಸರದಾರಖಾನನ ಕೈಕಾಲುಗಳು ತಣ್ಣಗಾದವು ನಾಲಿಗೆಯು ತೊದಲಿಸ ಹತ್ತಿತು ಆಗ ಬೀರ ಬಲನು " ಸರದಾರಖಾ ! ಈಗ ನೀನು ನನ್ನ ಸೆರೆಯಾಳಾದಿ ! ನನ್ನ ಸಂಗಡ ಸುಮ್ಮನೆ ಬಾ ! ಪ್ರಜೆಗಳ ಧನಮಾನಗಳನ್ನು ರಕ್ಷಿಸುವ ಕೆಲಸವನ್ನು ಬಿಟ್ಟುಕೊಟ್ಟು ಇಂಥ ಕುಕರ್ಮ ಪ್ರವೃತ್ತನಾಗುವಿಯಾ? ಧಿಕ್ಕಾರ ! ಧಿಕ್ಕಾರ" ಎಂದನು ಆಗ ಸರದಾರಖಾನನು ಏನೊಂದು ಪ್ರತ್ಯುತ್ತರವನ್ನು ಕೊಡದೆ ಬೀರಬಲನ ಬೆನ್ನು ಹತ್ತಿದನು ಬೀರಬಲನು ಆ ಕುಮಾರಿಕೆಯನ್ನು ಕುರಿತು - ನೀನೂ ನನ್ನೊಡನೆ ಬಾ ! ನಾಳೆ ಪ್ರಾತಃಕಾಲದಲ್ಲಿ ನಿನ್ನ ಪಿತನನ್ನು ಕರೆಯಿಸಿ, ಯಾವತ್ತೂ ಸಮಾಚಾರವನ್ನು ತಿಳುಹಿ ನಿನ್ನನ್ನು ಅವನ ಸ್ವಾಧೀನ ಪಡಿಸುತ್ತೇನೆ ” ಎಂದು ಹೇಳಲು ಆ ಕುಮಾರಿಕೆಯು ಪ್ರಸನ್ನ ಹೃದಯದಿಂದ ಬೀರಬಲನೊಡನೆ ಸಾಗಿದಳು, ಅವರೀರ್ವರನ್ನೂ ಕರೆದು ಕೊಂಡು ಮನೆಗೆ ಬಂದು ಆ ಸರದಾರನನ್ನು ಅಂರ್ತಗೃಹದಲ್ಲಿ ಬಂದಿಯಾಗಿಟ್ಟು ಆ ಕುಮಾರಿಕೆಯನ್ನು ತನ್ನ ಪತ್ನಿಯ ವಶಕ್ಕೆ ಕೊಟ್ಟು ನಿದ್ರಾವಶನಾದನು ಮರುದಿವಸ ಪ್ರಾತಃಕಾಲದಲ್ಲಿ ಎದ್ದು ಆ ಸರದಾರಖನನ್ನು ಕರೆದುಕೊಂಡು ಬಾದಶಹನ ಬಳಿಗೆ ಬಂದನು ಅಮ್ಯಾನ ಮುಖದಿಂದ ಬೀರಬಲನ ಹಿಂದೆ ಔತುಕೊಂಡು ನಿಂತಿರುವ ಸರದಾರಖಾನನನ್ನು ಕಂಡು ಬಾದಶಹನಿಗೂ ಅ ಸಭಾಸದರಿಗೂ ಪರಮಾಶ್ಚರ್ಯವಾಯಿತು ಬಾದಶಹನು ಈ ವಿಷೆಯವೇನೆಂದು ಪ್ರಸ್ತಾಪಿಸಲು, ಬೀರಬಲನು ಆದ್ಯೋಪಾಂತ ವೃತ್ತಾಂತವನೆಲ್ಲ ಕಥನ ಮಾಡಿದನು ಅದನ್ನು ಕೇಳಿ ಬಾದಶಹನಿಗೆ ಮಿತಿಮೀರಿ ಕೋಪವುಬಂ