ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೩

ಈ ಪುಟವನ್ನು ಪ್ರಕಟಿಸಲಾಗಿದೆ
೩೧೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೩



ಅವರ ಅವಮಾನಮಾಡಿದಂತಾಗಲಿಕ್ಕಿಲ್ಲವೇ ? ಬೀರಬಲನನ್ನು ಕಳುಹಿಸಿಕೊಟ್ಟರೆ ನಿಮ್ಮ ಪ್ರತಿಷ್ಠೆಗೂ ನಿಮ್ಮ ಹಿರಿಯರ ಮರ್ಯಾದೆಗೂ ಕುಂದು ಬರಲಿಕ್ಕಿಲ್ಲ ಇದರಮೇಲೆ ಖಾವಂದರವರ ಚಿತ್ತ.

ಬಾದಶಹ:- ಒಳ್ಳೇದು ಬೀರಬಲನನ್ನೇ ಕಳುಹಿಕೊಡುತ್ತೇನೆ. ಈ ಪ್ರಕಾರ ಮಾತುಕಥೆ ನಡೆಯುವದರೊಳಗೆ ಬಾದಶಹನ ಆಯುಷ್ಕರ್ಮವು ಸಂಪೂರ್ಣವಾಯಿತು ನಾವಲಿಗಳು ಹೊರಟು ಹೋದನು ಬಾದಶಹನು ಉಡಿಗೆ ತೊಡಿಗೆಗಳನ್ನು ಹಾಕಿಕೊಂಡು ಸಭಾಸ್ಥಾನಕ್ಕೆ ಬಂದನು ಮುತ್ಸದ್ದಿಗಳೆಲ್ಲರೂ ಮಿಲಿತರಾಗಿದ್ದರು. ಬಾದಶಹನು ಬಂದು ಸಿಂಹಾಸ ನದಮೇಲೆ ಕುಳಿತುಕೊಂಡು ಯಾವತ್ತು ವೃತ್ತಾಂತವನ್ನು ಹೇಳಿ ಆ ಮೇಲೆ ಬೀರಬಲನನ್ನು ಕುರಿತು, - ಬೀರಬಲ್ಲ : ನನ್ನ ಮಾತಾಪಿತೃಗಳು ಮರಣ ಹೊಂದಿ ಎರಡು ವರುಷಗಳು ಕಳೆದು ಹೋದವು ಅವರ ಕ್ಷೇಮಸಮಾಚಾರವೇ ತಿಳಿದಿಲ್ಲ ಆದರಿಂದ ನೀನು ಸ್ವತಃ ಹೋಗಿ ಅವರ ಕುಶಲ ವಾರ್ತೆಯನ್ನು ತಿಳಿದು ಕೊಂಡು ಬಾ! ಎಂದು ಅಪ್ಪಣೆ ಮಾಡಿದನು, ಆಗ ಬೀರಬಲನು ತನ್ನ ಮನಸ್ಸಿನಲ್ಲಿ - ಯಾವನೋ ಬಾದಶಹನ ಕಿವಿಯನ್ನು ಪುನಃ ತುಂಬಿದಂತೆ ಕಾಣುತ್ತದೆ, ಏನುಚಿಂತೆ ಇಲ್ಲ ; ” ಎಂದು ಯೋಚಿಸಿ ಬಾದಶಹನನ್ನು ಕುರಿತು. "ಪೃಥ್ವಿನಾಥ ? ನಾನು ಹೋಗಲಿಕ್ಕೆ ಸಿದ್ಧನಿದ್ದೇನೆ ಆದರೆ ಆ ಲೋಕಕ್ಕೆ ಹೋಗುವ ಮಾರ್ಗವು ನನಗೆ ವಿದಿತ ವಿಲ್ಲವಲ್ಲಾ ! ಆ ಮಾರ್ಗವನ್ನು ಗೊತ್ತು ಹಚ್ಚಿಸಿ ಕೊಟ್ಟರೆ ಪ್ರಸನ್ನ ಚಿತ್ತನಾಗಿ ಹೋಗಿಬರುತ್ತೇನೆ ಎಂದನು.

ಬಾದಶಹ :- ಸ್ವರ್ಗಕ್ಕೆ ಹೋಗಿಬರುವ ಮಾರ್ಗವು ಈ ಕ್ಷೌರಕನಿಗೆ ಚೆನ್ನಾಗಿ ತಿಳಿದಿದೆ, ಅವನು ನನ್ನ ಮುಂದೆ ತಿಳಿಸಿದ್ದಾನೆ ! ಅದು ಹ್ಯಾಗಂದರೆ, ಸ್ವರ್ಗಕ್ಕೆ ಹೋಗಲು, ಸಿದ್ಧನಾಗಿದ್ದ ಮನುಷ್ಯನನ್ನು ಸ್ಮಶಾನ ಭೂಮಿಯಲ್ಲಿ ಕುಳ್ಳಿರಿಸಿ, ಅವನ ಸುತ್ತು ಮುತ್ತು ಉರುವಲಗಳನ್ನು ಗೋಪುರಾಕೃತಿಯಾಗಿ ರಚನೆ ಮಾಡಬೇಕು. ಆ ಮೇಲೆ ಅದಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಅದರಿಂದ ಹೊರಡುವ ಧೂಮವು ಆಕಾಶಕ್ಕೆ ಮುಟ್ಟಲು ಅದರ ಸಂಗಡ ಮನುಷ್ಯನಿಗೆ ನಿರಾಯಾಸವಾಗಿ ಹೋಗಲಿಕ್ಕೆ ಬರುತ್ತದೆಂದು ಹೇಳಿದ್ದಾನೆ. ಆದ್ದರಿಂದ ನೀನು ಬೇಗನೇ ಸಿದ್ಧನಾಗು ?
ಈ ವೃತ್ತಾಂತವನ್ನು ಶ್ರವಣಮಾಡಿ, ಬೀರಬಲನು ತನ್ನ ಮನಸ್ಸಿನಲ್ಲಿ " ಈ ಕಪಟ ಪ್ರಂಬಧದ ಸೂತ್ರದಾರನು ಈ ಕ್ಷೌರಕನೇ ಆಗಿರುವನು.