ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೫

ಈ ಪುಟವನ್ನು ಪರಿಶೀಲಿಸಲಾಗಿದೆ
೩೧೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ಸಾಹೇಬರೇ ! ನನ್ನ ಕೆಲಸವನ್ನಂತೂ ನಾನು ಪೂರಯಿಸಿದೆನು ಇನ್ನು ತಮ್ಮ ಕಡೆಗೆ ಉಳಿಯಿತು ನನ್ನ ಪಾರಿತೋಷಕವನ್ನು ಕೊಟ್ಟು ನಿಮ್ಮ ವಚನ ದಿಂದ ಮುಕ್ತರಾಗಿರಿ ಆ ಅಪ್ರಬುದ್ಧಿಯ ಬೀರಬಲನು ಇಷ್ಟು ಹೊತ್ತಿಗೆ ಭಸ್ಮಿ ಭೂತವಾಗಿ ಹೋಗಿ ಬಿಟ್ಟಿರಬಹುದು ಎಂದು ಆತ್ಮಸ್ತುತಿಯನ್ನು ಮಾ ಡಿಕೊಳ್ಳಹತ್ತಿದನು. ಅದನ್ನು ಕೇಳಿ ಬೀರಬಲನು ಮನಸಿನೊಳಗೇ ಹಲ್ಲುಕ ಡಿಯುತ್ತ ಅಪ್ರಬುದ್ಧನೇ ! ಇನ್ನು ನಿನ್ನ ಸರತಿಯುಬಂತು ಜಾಗ್ರ ತೆಯಿಂದ ಇರು ಎಂದು ಮನಸ್ಸಿನಲ್ಲಿ ನುಡಿದು, ತನ್ನ ಮನೆಗೆ ಬಂದು ಗುಪ್ತವಾಗಿ ಇರ ಹತ್ತಿದನು. ಪ್ರತಿದಿವಸ ರಾತ್ರಿಯಲ್ಲಿ ಪ್ರಚ್ಛನ್ನ ವೇಷದಿಂದ ಸಂಚರಿಸಹತ್ತಿ ದನು, ಈಪ್ರಕಾರ ಷಣ್ಮಾಸಗಳು ಕಳೆದು ಹೋದಮೇಲೆ ಪ್ರಕಟನಾದನು ಆ ಆರುತಿಂಗಳಲ್ಲಿ ಆಯುಷ್ಕರ್ಮ ವನ್ನೇ ಮಾಡಿಸದೆ ಇದ್ದದರಿಂದ ಗಡ್ಡಮೀಸೆ ಗಳು ಬೆಳೆದು ಹೋದದ್ದರಿಂದ ಅವನ ಪರಿಚಯವು ಬೇಗನೆಹತ್ತದಂತೆ ಆಗಿ ತು, ಒಂದುದಿವಸ ಸಭೆಗೆ ಉಚಿತವಾದ ಉಡಿಗೆ ತೊಡಿಗೆಗಳನ್ನು ಧರಿಸಿ ಕೊಂಡು ಅರಿಮನೆಗೆ ಹೋಗಿ ಬಾದಶಹನ ಎದುರಿಗೆ ನಿಂತುಕೊಂಡನು ಬಾ ದಶಹನಿಗೂ ಅವನ ಪರಿಚಯವು ಹತ್ತದೆ ಹೋಯಿತು.
ಬೀರಬಲ-ಪ್ರಭುವರ ! ನಾನು ನಿಮ್ಮ ಅಮಾತ್ಯನಾದ ಬೀರಬಲನು ನಿಮ್ಮ ಮಾತಾಪಿತೃಗಳ ದರುಶನ ತೆಗೆದುಕೊಂಡು ಈ ದಿವಸ ಹಿಂದಿರುಗಿ ಬಂದಿದ್ದೇನೆ.
ಬಾದಶಹ —(ಅವನ ಧ್ವನಿಯಮೇಲಿಂದ ಗುರುತಿಸಿ) ಓಹೋ ! ಬೀರಬಲನು ಮರಳಿಬಂದನು, ಬೀರಬಲನೇ ! ನನ್ನ ಮಾತಾಪಿತೃಗಳು ಸುಖವಾ ಗಿರುವರೇ.
ಬೀರಬಲ-ಅವರು ಆ ಲೋಕದಲ್ಲಿ ಇಷ್ಟು ಸುಖಸಂಪತ್ತಿಗಳನ್ನು ಅನುಭ ವಿಸುತ್ತಿರುವರಲ್ಲಾ ! ಅದನ್ನು ಬಣ್ಣಿಸುವದು ನನ್ನಿಂದ ಅಸಾಧ್ಯವು ನಾನು ಅವರಿಗೆ ನಿಮ್ಮ ಕುಶಲವಾರ್ತೆಯನ್ನೆಲ್ಲ ತಿಳಿಸಿದೆನು, ಅವರು ಬಹಳ ಸಂತೋಷಪಟ್ಟರು, ನಾನು ನಿಮ್ಮ ಅಮಾತ್ಯನಿರುವೆನೆಂಬ ಸಂಗತಿಯು ಅವರಿಗೆ ತಿಳಿದಕೂಡಲೆ ನನ್ನನ್ನೂ ಬಹುವರಿಯಾಗಿ ಸ ತ್ಕರಿಸಿದರು ಅವರ ವೈಭವವು ದೇವೇಂದ್ರನಿಗಿಂತಲೂ ಅಧಿಕವಾಗಿದೆ ಇಂದ್ರನಂತೆ ಸ್ವತಂತ್ರವಾಗಿ ರಾಜ್ಯಭಾರ ಮಾಡುತ್ತಾರೆ, ಇಷ್ಟೆಲ್ಲ ಸುಖಗಳಿದ್ದರೂ ಸಹ ಅಲ್ಲಿ ಒಂದುಕೊರತೆಯು ಅದೆ; ಅದು ಯಾವ ದೆಂದರೆ ಅಲ್ಲಿ ಚತುರನಾದ ನಾವಲಿಗನೊಬ್ಬನು ಇಲ್ಲ ಈ ಕಾರಣದಿಂ ದ ಅವರ ಗಡ್ಡಮೀಸೆಯ ಕೂದಲುಗಳು ಭೂಮಿಯನ್ನು ಸ್ಪರ್ಶಮಾ