ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೮

ಈ ಪುಟವನ್ನು ಪರಿಶೀಲಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೧೭


ಮೂರ್ಖನೊಡನೆ ಕೆಸವು ಉಂಟಾದರೆ ಏನು

೧೭೨.ಮಾಡಬೇಕು? ಸುಮ್ಮ ನಿರಬೇಕು.

ಅಕಬರ ಬೀರಬಲ್ಲರ ನಡುವೆ ದಿವಸ ದಿವಸಕ್ಕೆ ಮೈತಿಯು ಹೆಚ್ಚು ತ್ತ ನಡೆದಿತ್ತು ಪರಸ್ಪರರಲ್ಲಿ ಯಾವಾಗಲೂ ವಿನೋದಗಳು ನಡೆದೇ ಇರುತ್ತಿ ದ್ದವು, ಹೀಗಿರಲು ಒಂದಾನೊಂದು ದಿವಸ ಮಕ್ಕಾಯಾತ್ರೆಗೆ ಹೋಗಿದ್ದ ಬಾದಶಹನ ಗುರುವು ದಿಲ್ಲಿಗೆ ಬಂದನು ಬಾದಶಹನು ಅವನ ಆದರ ಸತ್ಕಾರ ವನ್ನು ಮಾಡಿ, ಅಪ್ಪಣೆಕೊಡುವ ಸಮಯದಲ್ಲಿ ಗುರುವಿಗೆ ಅನೇಕ ವಿಧವಾ ದ ವಸ್ತ್ರಗಳನ್ನು ಧನ, ಕನಕ, ವಸ್ತು ವಾಹನಗಳನ್ನೂ ಇತ್ತು, ಸನ್ಮಾನ ಮಾಡಿದನು ಗುರುವು ಹೋಗಿ ಕೆಲವುದಿವಸಗಳಾದ ಮೇಲೆ ಬಾದಶಹನು ಬೀರಬಲ್ಲ ! ನಮ್ಮ ಗುರುಗಳು ಬಂದಿದ್ದರಲ್ಲಾ ! ಅದರಂತೆ ನಿನ್ನ ಗುರುಗ ಳು ಬಂದದ್ದನ್ನು ನಾನು ಕಂಡಿಯೇ ಇಲ್ಲವಲ್ಲಾ! ನಿನಗೆ ಗುರುಗಳು ಇರು ವರೇನು? ಇದ್ದರೆ ಅವರ ವಾಸಸ್ಥಳವು ಎಲ್ಲಿ ? ಎಂದು ಪ್ರಶ್ನೆ ಮಾಡಿದನು.
ಬೀರಬಲ - ಪೃಥ್ವಿನಾಥ ನನಗೆ ಅನೇಕಮಂದಿ ಗುರುಗಳಿರುವರು ಆದರೆ ಅವರ ವಾಸಸ್ಥಳಗಳು ಈ ನಮ್ಮ ದಿಲ್ಲಿಯಿಂದ ಬಹು ದೂರದಲ್ಲಿರುವ ವು ಅದರಿಂದ ಅವರು ನಿಮ್ಮ ದೃಷ್ಟಿಗೆ ಬಿದ್ದಿಲ್ಲ; ಇನ್ನು ಕಿಂಚಿತ್ ಕಾಲದೊಳಗಾಗಿ, ಒಬ್ಬ ಗುರುಗಳು ಬರತಕ್ಕವ ದಿದ್ದಾರೆಂದು ಕೇಳಿ ದ್ದೇನೆ ಅವರು ಈಗ ಸದ್ಯಕ್ಕೆ ಎಲ್ಲಿರುವರೋ ವಿದಿತವಿಲ್ಲ; ಅವರು ಒ ಳ್ಳೇ ನಿಸ್ಪೃಹಿಗಳಾಗಿರುವರೆಂಬ ವಾರ್ತೆಯೂ ಇರುವದು ಬಡವನಾ ದ ನನ್ನ ಮನೆಗೆ ದಯಮಾಡಿಸುವರೋ ಇಲ್ಲವೋ, ಯಾರಿಗೆ ಗೊ ತ್ತು ! ಒಂದುವೇಳೆ ಬಂದರೆ, ತಮಗೆ ಅವರ ದರ್ಶನ ಮಾಡಿಸುತ್ತೇನೆ.
ಬಾದಶಹ-ಹೀಗಿದ್ದ ಮೇಲೆ ಅವರ ದರ್ಶನವನ್ನು ಅತ್ಯಗತ್ಯವಾಗಿ ತೆಗೆದು ಕೊಳ್ಳಬೇಕು. ಆದಷ್ಟು ತೀವ್ರವಾಗಿ ಅವರು ಇಲ್ಲಿಗೆ ಬರುವಂತೆ ಮಾಡು.
ಬೀರಬಲ-ನಿಮ್ಮ ಮನಸಿನಲ್ಲಿ ಅಷ್ಟು ಆತುರವಿದ್ದರೆ, ಶೋಧಮಾಡಿ ಕರೆಕ ಳುಹುತ್ತೇನೆ.
ಬಾದಶಹ— ನಿನ್ನಿಂದ ಸಾಧ್ಯವಾದಷ್ಟು ತ್ವರೆ ಮಾಡು, ಬಾದಶಹನ ಆಜ್ಞೆಯನ್ನು ಸಿರಸಾವಹಿಸಿ, ಬೀರಬಲನು ತನ್ನ ಗೃಹ ಕೈ ನಡೆದನು. ಮಾರ್ಗದಲ್ಲಿ ಒಬ್ಬ ಕಾಷ್ಟವಿಕ್ರಯಿಯು ಅವನಿಗೆ ಬೆಟ್ಟಿ ಯಾದನು. ಅವನ ತಲೆಯಮೇಲೆ ಕಾಷ್ಟ ಭಾರವಿತ್ತು ಯಾರೂ ತೆಗೆದು ಕೊಂಡಿಲ್ಲ ತಿರುಗಿ ತಿರುಗಿ ಬೇಸತ್ತು ಹೋಗಿದ್ದನು ಬೀರಬಲನು ಅವನ