ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೭

ಈ ಪುಟವನ್ನು ಪ್ರಕಟಿಸಲಾಗಿದೆ
೩೨೬
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ರಕಾರಣವನ್ನು ಪ್ರಕಟೀಕರಿಸದಿದ್ದ ಪಕ್ಷದಲ್ಲಿ ಆ ಜನ್ಮ ಪರಿಯಂತರವಾಗಿ ಕಾರಾಗೃಹದಲ್ಲಿ ಇರಿಸಿ ಬಿಡುತ್ತೇವೆ, ಎಂದನು ಅದನ್ನು ಕೇಳಿ ಬೀರಬಲನು ಅಂತರಂಗದಲ್ಲಿ ಆನಂದಿತನಾಗಿ ಬಹಿರಂಗದಲ್ಲಿ ದುಃಖಪ್ರದರ್ಶನ ಮಾಡುತ್ತ- ಮಹಾರಾಜ ! ನೀವು ಅದರ ಕಾರಣವನ್ನು ಕೇಳಿಕೊಳ್ಳಲಿಕ್ಕೆ, ಈಪರಿ ಅತ್ಯಾಗ್ರಹ ಮಾಡಹತ್ತಿದ್ದರಿಂದ ಉಪಾಯಾಂತರವಿಲ್ಲದೆ ಹೇಳಬೇಕಾಗಿದೆ ಆದರೆ ಅದರ ಕಾರಣವನ್ನು ನಾವು ಬಹಿರಂಗಪಡಿಸಿದರೆ ನಮ್ಮ ಹಾನಿಯು ಎಷ್ಟಾಗವದೆಂಬದು ಪರಮೇಶ್ವರನಿಗೇ ಗೊತ್ತು ಅನ್ತು ನಮ್ಮ ದೈವದಲ್ಲಿಯೇ ಆ ಸುಖವನ್ನನುಭವಿಸಬೇಕೆಂದು ಸೃಷ್ಟಿಕರ್ತನು ಲೇಖಿಸಿದಂತೆ ತೋರುವದಿಲ್ಲ ಕೇಳಬೇಕು ! ನಮ್ಮ ಅಕಬರ ಬಾದಶಹನು ನಿಮ್ಮ ಈ ರಾಜ್ಯವನ್ನು ಕೈವಶ ಮಾಡಿಕೊಳ್ಳಬೇಕೆಂದು ಬಹು ದಿವಸದಿಂದ ಹೊಂಚು ಹಾಕಿ ಕೊಂಡು ಕುಳಿತಿದ್ದಾನೆ ಆದರೆ ನೀವು ಅವನಿಗಿಂತಲೂ ಬಲಾಡ್ಯರಾಗಿರು ವದರಿಂದ ನಿಮ್ಮನ್ನು ಸಂಗ್ರಾಮದಲ್ಲಿ ಪರಾಜಿತರನ್ನಾಗಿ ಮಾಡಿ ರಾಜ್ಯವ ನ್ನು ಕೈವಶ ಮಾಡಿಕೊಳ್ಳುವದು ಅಸಂಭವವೆಂದು ತಿಳಿದು ಸುಮ್ಮನೇ ಕುಳಿತು ಕೊಂಡಿದ್ದಾನೆ ಒಂದು ದಿವಸ ನಮ್ಮ ಆ ದಿಲ್ಲಿಯಲ್ಲಿ ಮಹಾಸಭೆಯು ನೆರೆದಿರಲು ಕಾಶ್ಮೀರ ದೇಶ ನಿವಾಸಿಯಾದ ಒಬ್ಬ ಪ್ರಸಿದ್ಧ ಜ್ಯೋತಿರ್ವಿದನು ಬಂದು ಬಾದಶಹನಿಗೆ ಈ ಸಂಗತಿಯನ್ನು ಅರಿಕೆ ಮಾಡಿದನು ಏನಂದರೆ "ದಿಲ್ಲಿಯ, ಸಭಾಸದರಲ್ಲಿ ಇಬ್ಬರನ್ನು ಬ್ರಹ್ಮ ದೇಶದ ರಾಜನು ಕೊಲ್ಲಿಸಿದರೆ ಪ್ರಥಮದಲ್ಲಿ ಮರಣ ಹೊಂದಿದವನು ಈ ದೇಶದಧಿವನಾಗುವ ನೆಂತಲೂ, ಹಿಂದುಗಡೆಯಲ್ಲಿ ಮರಣಹೊಂದಿದವನು ಅವನ ಅಮಾತ್ಯನಾಗು ವನೆಂತಲೂ ಅವರನ್ನು ಕೊಲ್ಲಿಸಿದ ಭೂಪಾಲನು ಅವರಿಬ್ಬರ ಸೇವಕನಾಗು ವನೆಂತಲೂ ಭವಿಷ್ಯವನ್ನು ಹೇಳಿದನು. ಈ ನೆವದಿಂದಲಾದರೂ ನಿಮ್ಮ ರಾಜ್ಯವು ತನ್ನ ಹಸ್ತಗತವಾಗಲೆಂದು ತಿಳಿದು ಅಕಬರ ಬಾದಶಹನು ನಮ್ಮನ್ನು ಇಲ್ಲಿಗೆ ಕಳುಹಿಸಿಕೊಟ್ಟನು. ಆದರಿಂದ ಬೇಗನೇ ನಮ್ಮ ತಲೆಹೊಡೆಯುವಂತೆ ಅಪ್ಪಣೆಮಾಡಿರಿ ! ” ಎಂದು ಅಂಗಲಾಜ ಪ್ರಾರ್ಥಿಸಿಕೊಂಡನು. ಬೀರಬಲನ ಮಾತು ಕಿವಿಗೆ ಬಿದ್ದ ಕೂಡಲೆ, ಬ್ರಹ್ಮದೇಶದ ಅರಸನು ಅತ್ಯಾ ಶ್ಚರ್ಯವುಳ್ಳವನಾಗಿ, ತನ್ನ ಅಮಾತ್ಯನನ್ನು ಈ ವಿಷಯದಲ್ಲಿ ವಿಚಾರಿಸಿದನು ಅಮಾತ್ಯನು ಬುದ್ಧಿವಂತನಾಗಿ ಇದ್ದದರಿಂದ ಈ ಸಂಗತಿಯು ಬೀರಬಲನ ಕ್ಲಪ್ತಿಯೆಂದು ತಿಳಿದುಕೊಂಡು; “ ಪೃಥ್ವಿನಾಥ ! ಈ ಉಭಯತರವಾದ ವಿವಾದದ ಮೇಲಿಂದ ಕಂಡುಬರುವದೇನಂದರೆ, ಈ ಸಂಗತಿಯು ಅ ಸಂಭವವೆಂಬದಾಗಿ ಕಂಡು ಬರುವದಿಲ್ಲ. ಇವರ ಅಭಿಪ್ರಾಯದಂತೆ ಇವರ