ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೯೯

ಈ ಪುಟವನ್ನು ಪ್ರಕಟಿಸಲಾಗಿದೆ
೩೨೮
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ತ್ತೇವೆ, ಬಾದಶಹನು ನಮ್ಮ ಮೇಲೆ ಕೃದ್ಧನಾಗುವದು ನಿಜ ? ಎಂದು ಅತಿಶಯ ಹಾನಿಯಾದವನಂತೆ ಚಡಪಡಿಸುತ್ತ ಮಹಾರಾಜನ ಅಪ್ಪಣೆಯನ್ನು ಪಡೆದು ಪ್ರಯಾಣ ಸನ್ನದ್ಧರಾದರು. ಈ ಪ್ರಕಾರ ಅವರಿಬ್ಬರು ಪಯಣ ಗತಿಯಿಂದ ದಿಲ್ಲಿಗೆ ಬಂದು ತಲುಪಿದರು.
ಮರುದಿವಸ ರಾಜಾಜ್ಞೆಯನ್ನು ಪಡೆದು ಇಬ್ಬರೂ ಸಭಾಸ್ಥಾನವನ್ನು ಪ್ರವೇಶಿಸಿದರು ಅಕಬರ ಬಾದಶಹನು ಇವರ ಸಮಾಚಾರವನ್ನು ಕೇಳಿದನು ಆಗ ತಾನಸೇನನು " ಹುಜೂರ್ ಬೀರಬಲನು ನನ್ನ ಜೊತೆಯಲ್ಲಿ ಇಲ್ಲದಿದ್ದರೆ, ನಿಮ್ಮ ದರುಶನವು ನನಗೆ ಈ ಜನ್ಮದಲ್ಲಿಯಂತೂ ಆಗುತ್ತಿದ್ದಿಲ್ಲ, ಬೀರಬಲನ ಚಾತುರ್ಯದಿಂದಲೇ ಈ ಸುದಿನವು ಪ್ರಾಪ್ತವಾಯಿತು ಎಂದು ಹೇಳಿ ಬ್ರಹ್ಮದೇಶದಲ್ಲಿ ನಡೆದ ಯಾವತ್ತು ಸಮಾಚಾರವನ್ನು ಕಥನ ಮಾಡಿದನು. ಆಗ ಬಾದಶಹನು ಯಾವತ್ತೂ ಮುಸಲ್ಮಾನ ಮುತ್ಸದ್ದಿಗಳನ್ನುದ್ದೇಶಿಸಿ “ ನಾನು ಹಿಂದಕ್ಕೆ ತಾನಸೇನ ಮತ್ತು ಬೀರಬಲ್ಲ ಈ ಉಭಯತರಲ್ಲಿ ಯಾರು ಚತುರರೆಂಬದನ್ನು ಪ್ರತ್ಯಕ್ಷ ಮಾಡಿ ತೋರಿಸುತ್ತೇನೆಂದು ಹೇಳಿದ್ದಿಲ್ಲವೇ ? ನೀವು ಯಾವನಿಗೆ ಬೀರಬಲನ ಪದವಿಯನ್ನು ಕೊಡಿಸ ಬೇಕೆಂದು ನೀವೆಲ್ಲರೂ ಬಯಸುತ್ತಿದ್ದಿರೋ ! ಆ ತಾನಸೇನನು ಯಾವನ ಸಹಾಯದಿಂದ ಪ್ರಾಣದಿಂದ ಉಳಿದುಕೊಂಡು ಬಂದಿರುವನೆಂಬ ಸಂಗತಿಯು ಅವನ ಮುಖದಿಂದಲೇ ನಿಮಗೆ ವಿದಿತವಾಯಿತಷ್ಟೇ ? ಈಗಲಾದರೂ ನಿಮ್ಮ ಕುರುಕುರಿಯು ತೀರಿತೇ ? ಇನ್ನು ಮೇಲೆ ನಿಮ್ಮಲ್ಲಿ ಯಾರಾದರೂ, ಹಿಂದೂಜನರ ಮೇಲೆ ದ್ರೋಹವನ್ನೆಸಗಿದ ಪಕ್ಷದಲ್ಲಿ ಅವರಿಗೆ ಕಠಿಣವಾದ ಶೀಕ್ಷೆಯನ್ನು ವಿಧಿಸಲಾದೀತು ? ನನ್ನ ರಾಜ್ಯದಲ್ಲಿ ಹಿಂದೂ ಮುಸಲ್ಮಾನರ ನಡುವೆ ಎಂದೂ ಕಲಹವಿರಲಿಕ್ಕಾಗದು ಹಿಂದೂ ಜನರೂ ನನ್ನ ಪ್ರಜೆಗಳು ಮುಸಲ್ಮಾನರೂ ನನ್ನ ಪ್ರಜೆಗಳು ಇನ್ನು ಮೇಲೆ ಈ ಪ್ರಕಾರ ಭೇದ ಬುದ್ಧಿಯನ್ನು ಮನಸ್ಸಿನಲ್ಲಿ ಹಿಡಿಯ ಬೇಡಿರಿ ” ಎಂದು ಅಪ್ಪಣೆಮಾಡಿದನು ಈ ಮಾತುಗಳನ್ನು ಶ್ರವಣಮಾಡಿ ಅಮೀರ ಖಾನನು ಜಹಾಂಪನಾದ ! ಈಗ ನಮಗೆ ಮನವರಿಕೆ ಯಾಯಿತು ಅವರವರ ಯೋಗ್ಯತೆಯ ಪ್ರಕಾರ ಅವರ ವರಿಗೆ ಕೆಲಸಗಳನ್ನು ನಿಯಮಿಸಬೇಕು ಹಿಂದೂ ಜನರೂ ಮತ್ತು ನಾವು ಒಂದೇ ಎಂದು ಹೇಳೋಣವಾಯಿತು ! ಅವರು ಅನೇಕ ಮೂರ್ತಿಗಳನ್ನು ಪೂಜಿಸುತ್ತಾರೆ ನಮ್ಮ ಕುರಾನ ಕರೀಫದಲ್ಲಿ " ಜಗನ್ನಿಯಂತನು ಓರ್ವನೇ ಇರುವನೆಂದೂ ಆನೇಕ ದೇವತೆಗಳನ್ನು ಪೂಜಿಸುವವರು ಕೇವಲ ಕಾಪುರು ಷರೆಂದೂ ಹೇಳಲ್ಪಟ್ಟದೆ ಹೀಗಿದ್ದು ಅವರು ನಮ್ಮ ಸಮಾನತ್ವವನ್ನು ಹೊಂ "