ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೧

ಈ ಪುಟವನ್ನು ಪ್ರಕಟಿಸಲಾಗಿದೆ
೩೩೦
ಅಕಬರಬೀರಬಲ ಚಾತುರ್ಯವಾದ ವಿನೋದ ಕಥೆಗಳು.


ಎಂಬ ಸೊಲ್ಲೇ ತಪ್ಪಲಿಲ್ಲ ಇದಕ್ಕೆ ಕಾರಣವೇನು ! ನಿನ್ನ ಮನೆಯಲ್ಲಿ ಇದ್ದ ಕೆಲಸವಾದರೂ ಯಾವದು.
ಬೀರಬಲ-ಖುದಾವಂದ ? ಚಿಕ್ಕಮಗುವು ಅಳುತ್ತಿತ್ತು, ಅವನನ್ನು ಸಮಾಧಾನ ಪಡಿಸಿ ಬರಬೇಕಾದರೆ ಇಷ್ಟು ವಿಲಂಬವಾಯಿತು.
ಬಾದಶಹ— ಛೇ ? ನೀನು ಸುಳ್ಳಾಡುತ್ತಿ, ಬಾಲಕರು ಇಚ್ಛಿತ ವಸ್ತುವು ಸಿಕ್ಕ ಕೂಡಲೇ ಸುಮ್ಮನಾಗಿ ಹೋಗುವರು. ಹೀಗಿದ್ದು ಇಷ್ಟು ವಿಲಂಬ ವನ್ನೇಕೆ ಮಾಡಿದೆ,
ಬೀರಬಲ-ಖುದಾವಂದ ? ಬಾಲಕರನ್ನು ಸಮಾಧಾನಪಡಿಸುವದಕ್ಕೆ ಏನು ಉಪಾಯವನ್ನು ಮಾಡಬೇಕೆಂಬದು ನನಗೆ ತಿಳಿದಿಲ್ಲ.
ಬಾದಶಹ-ನಾನು ನಿನ್ನ ಸ್ಥಳದಲ್ಲಿದ್ದರೆ ಆ ಕೂಡಲೆ ಆ ಬಾಲಕನನ್ನು ಸಮಾಧಾನ ಪಡಿಸುತ್ತಿದ್ದೆನು.
ಬೀರಬಲ -ಪೃಥ್ವಿನಾಥ! ದೇಶದ ಪ್ರಜೆಗಳೆಲ್ಲರಿಗೂ ರಾಜನು ತಾಯಿತಂದೆ ಯಾಗಿರುವನು, ನಾನು ಬಾಲಕನಾಗುತ್ತೇನೆ ನೀವು ನನ್ನನ್ನು ಸಮಾಧಾನ ಪಡಿಸಿರಿ.
ಈ ಮಾತಿಗೆ ಬಾದಶಹನು ಒಪ್ಪಿಕೊಂಡನು, ಬೀರಬಲನು ಬಾಲಕನಂತೆ ಬಟ್ಟೆಗಳನ್ನು ಧಾರಣಮಾಡಿಕೊಂಡು ನೆಲದಮೇಲೆ ಕುಳಿತುಕೊಂಡು ರೋದಿಸಹತ್ತಿದನು. ಬಾದಶಹನು ಸಿಂಹಾಸನದಿಂದ ಇಳಿದು ಬಾಲಕನಾದ ಬೀರಬಲನ ಹತ್ತಿರಬಂದನು.
ಬಾದಶಹ— (ಬಾಲಕನಾಗಿದ್ದ ಬೀರಬಲನ ಬೆನ್ನ ಮೇಲೆ ಕೈಯಾಡಿಸಿ, ) ಮಗೂ ? ಯಾಕೆ ರೋದಿಸುತ್ತಿ.
ಬೀರಬಲನು ದೀರ್ಘವಾಗಿ ಉಸಿರನ್ನು ಬಿಡುತ್ತ ಹೆಚ್ಚು ಹೆಚ್ಚು ಅಳುತ್ತ ಏನೊಂದು ಉತ್ತರವನ್ನೂ ಕೊಡದೆ ಬಾದಶಹನ ಕೊರಳಿಗೆ ಅಟ್ಟೀ ಮಿಟ್ಟಿ ಹಾಕಿದನು.
ಬಾದಶಹ (ಅವನನ್ನು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು) ಮಗೂ ಯಾಕೆ ಆಳುತ್ತೀ ! ನಿನಗೆ ಬೇಕಾದದ್ದೇನು ಹೇಳು, ಅದನ್ನು ತರಿಸಿ ಕೊಡುತ್ತೇನೆ.
ಬೀರಬಲ- [ಬಹಳ ಹೊತ್ತು ಗಟ್ಟಿಯಾಗಿ ರೋದಿಸಿ, ] ನನಗೆ ಕಬ್ಬನ್ನು ಕೊಡಿಸು. ಬಾದಶಹ— (ಆ ಕೂಡಲೆ ಒಂದು ಕಬ್ಬಿನ ಹೊರೆಯನ್ನು ಆ ಬಾಲಕನಮುಂದೆ ಚಲ್ಲಿಸಿ) ನಿನ್ನ ಮನಸ್ಸಿಗೆ ಬಂದದ್ದನ್ನು ತೆಗೆದುಕೊ