ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೮

ಈ ಪುಟವನ್ನು ಪ್ರಕಟಿಸಲಾಗಿದೆ
(೪೩)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೩೯



ಣಕ್ಕೆ ಪೆಟ್ಟಿಗೆ ಯೊಳಗಿಂದ ಎರಡುನೂರು ರೂಪಾಯಿಗಳನ್ನು ವೇ ಶ್ಯೆಯ ಮುಂದೆ ಸುರುವಿದನು. ಅದನ್ನು ಕಂಡು ಅವಳು ವರ್ತಕ ಮಹ ಯ ನಾನು ನಿಮ್ಮಂಥ ದಾನ ಶೂರರನ್ನು ಇಂದಿನವರೆಗೂ ನೋಡಿದ್ದಿಲ್ಲವು ನಾನು ನಿಮ್ಮ ಪಾಪಗಳನ್ನು ಬಿಟ್ಟು ಎಲ್ಲಿಯೂ ಚಲಿಸುವದಿಲ್ಲ ಕೃಪಾಳುಗ ಲಾಗಿ ನನ್ನ ವಾಂಛಿತವನ್ನು ಪೂರ್ಣಮಾಡಬೇಕು ಎಂದು ವಿಜ್ಞಾಪನೆಮಾ ಡಿಕೊಂಡಳು ಧನಾಡ್ಯನು ಅವಳ ಮಾತಿಗೆ ಒಪ್ಪಿಕೊಂಡು ಅವಳ ಗೃಹಕ್ಕೆ ತೆರಳಿ ಅನೇಕ ಪ್ರಕಾರದ ಸುಖವಿಲಾಸಗಳಲ್ಲಿ ರಾತ್ರಿಯನ್ನು ಒಂದು ಕ್ಷಣ ದಂತೆ ಕಳೆದು ಪ್ರಾತಃಕಾಲದಲ್ಲಿ ತನ್ನ ಮನೆಗೆ ಬಂದನು.
ಮುಂದೆ ಕಿಂಚಿತ್ಕಾಲದ ಮೇಲೆ ಕೊತವಾಲನು ಈ ಸಾವುಕಾರನಿಗೆ ವಿವಾಹ ಮಾಡಿಕೊಳ್ಳುವದು ಯುಕ್ತವೆಂದುಬೋಧಿಸಹತ್ತಿದನು ಆಗ ಸಾವು ಕಾರನು ನನಗೆ ಯಾವದಾದರೊಂದು ಕುಲೀನ ಮನೆತನದ ಕನ್ಯೆಯು ದೊ ರೆತರೆ, ವಿವಾಹ ಮಾಡಿಕೊಳ್ಳುತ್ತೇನೆಂದು ಹೇಳಿದನು ಅದಕ್ಕೆ ಕೊತವಾಲನು ನಿನ್ನ ಸಲುವಾಗಿ ನಾನು ಕನ್ಯೆಯನ್ನು ಶೋಧಿಸುವ ಪ್ರಯತ್ನ ಮಾಡುತ್ತೇನೆ, ಸಾವುಕಾರ - ಒಳ್ಳೇದು, ಅಂಥಕನ್ಯೆಯು ದೊರೆತರೆ, ಬಹಳೇ ಉತ್ತಮವು.
ಕೊತವಾಲನು ಕನ್ಯಾಶೋಧವನ್ನು ನಡೆಯಿಸಿದನು ದೈವವಶಾತ್ ಕುಲೀನ ಮನೆತನದ ರೂಪವತಿಯಾದ ಬಬ್ಬ ಕನ್ಯೆ ಯು ದೊರೆತಳು ಅವಳ ಕರೆತಂದು ಸಾವು ಕಾರನಿಗೆ ತೋರಿಸಿದನು. ಅವನು ಒಪ್ಪಿಕೊಂಡನು ಯಥಾವಿಧಿಯಾಗಿ ವಿವಾಹ ಸಮಾರಂಭವು ಜರಗಿತು, ವಧುವು ಮನೆಗೆ ಬಂದಳು.

ಯಾವಾಗ ಹೆಂಡತಿಯು ಗೃಹದಲ್ಲಿ ಬಂದು ವಾಸಮಾಡಿದಳೋ ಆದಿನ ಮೊದಲ್ಗೊಂಡು ಪ್ರತಿದಿವಸದಲ್ಲಿ ಬಲವಾದ ಒಂದು ಪೆಟ್ಟನ್ನು ಕೊಟ್ಟು ಹೊರಗೆ ಹೋಗುವ ಪರಿಪಾಠವಿಟ್ಟನು. ಮುಂದೆ ಒಂದುದಿವಸ ಆ ಸಾವುಕಾ ರನು ಪೇಟೆಯೊಳಗಿಂದ ಒಂದು ಪಕ್ವವಾಗಿದ್ದ ಕರಬೂಜೀ ಹಣ್ಣನ್ನು ತಂದು ಸಮನಾದ ಎರಡು ಭಾಗಗಳನ್ನು ಮಾಡಿ ಅವುಗಳ ಮೇಲೆ ಸುಭ್ರವಾದ ಒಂದು ಬಟ್ಟೆಯನ್ನು ಪರಿವೇಷ್ಟನವಾಡಿ ಕೆಲವು ಹೊತ್ತು ಇಟ್ಟನು. ಆಮೇ ಲೆ ಅದರೊಳಗಿಂದ ರಕ್ತವರ್ಣದ ನೀರು ಪ್ರವಿಸಹತ್ತಲು ಅದನ್ನು ತೆಗೆದು ಕೊಂಡು ಧಾವಿಸಿ ಮನೆಗೆಬಂದು ಒಂದು ಪೆಟ್ಟಿಗೆಯಲ್ಲಿಟ್ಟು, ಬೀಗವನ್ನು ಹಾಕಿ ಆ ಪೆಟ್ಟಿಗೆಯನ್ನು ತನ್ನ ಹೆಂಡತಿಯ ಸ್ವಾಧೀನಕ್ಕೆ ಕೊಟ್ಟು ಒಂದು ಬಲವಾದ ಪೆಟ್ಟನ್ನು ಕೊಟ್ಟು, ರಾಜತನಯನ ಶಿರವನ್ನು ಕೊಯ್ದುಕೊಂ ಡುಬಂದು ಈ ಪೆಟ್ಟಿಗೆಯಲ್ಲಿಟ್ಟಿದ್ದೇನೆ ಅನ್ಯರಿಗೆ ಈ ವರ್ತಮಾನವು ತಿಳಿಯ