ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೦

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೭೩೯



ಇದನ್ನು ಕಂಡು ಸಾವುಕಾರನ ಸೇವಕರು ಈ ವರ್ತಮಾನವನ್ನು ತಮ್ಮ ಒಡೆಯನ ಆಜ್ಞೆಯಪ್ರಕಾರ ಒಡತಿಗೆ ತಿಳಿಸಿದರು. ಅದನ್ನು ಕೇಳಿ ಕ್ರೋ ಧಾವಿಷ್ಟಳಾಗಿದ್ದ ಆ ಸಾವುಕಾರನ ಸ್ತ್ರೀಯು- " ಅರಿಷ್ಟವು ಕಳೆದುಹೋ ಯಿತು ನಾನು ಪರಿಪರಿಯಿಂದ ಅವನಸೇವೆಯನ್ನು ಮಾಡುತ್ತಿದ್ದರೂ ಸಹ ದಿನಾಲು ನನಗೆ ಪೆಟ್ಟುಗಳೇನು ತಪ್ಪುತ್ತಿದ್ದಿಲ್ಲ ಆದದ್ದು ಒಳಿತೇ ಆಯಿತು ” ಎಂದು ಗುಣುಗುಟ್ಟಿದಳು, ಸೇವಕರು ಈ ಮಾತನ್ನು ತಮ್ಮ ಯಜಮಾನ ನಿಗೆ ತಿಳಿಸಿದರು. ಆಗ ಸಾವುಕಾರನು ವೇಶ್ಯಾಸ್ತ್ರೀ ಯಳಿಗೆ ಹೇಳಿ ಕಳುಹಿಸಿ ದನು, ಮತ್ತು ಕೊತವಾಲನನ್ನು ಕುರಿತು “ ಕೊತವಾಲಸಾಹೇಬ ! ನನ್ನ ನ್ನು ಆ ವೇಶ್ಯಯ ಗೃಹದವಾರ್ಗವಾಗಿ ಕರೆದುಕೊಂಡು ಹೋಗಿರಿ ” ಎಂ ದು ಬಿನ್ನಹ ಮಾಡಿಕೊಂಡನು. ಈ ಮಾತಿಗೆ ಕೊತವಾಲನು ಸಮ್ಮತಿಸಿ ಆ ಮಾರ್ಗದಿಂದಲೇ ಸಾಗಿದನು, ಆ ವೇಶೈಯ ಗೃಹವು ಸಮೀಪಿಸಿದ ಕೂಡಲೆ ಸಾವುಕಾರನು ಗಟ್ಟಿಯಾಗಿ ಕೂಗಿಕೊಂಡನು ಆ ಧ್ವನಿಯನ್ನು ಗುರುತಿಸಿ, ಆ ವೇಶೈಯು ಗೃಹದ ಮುಂಬಾಗಿಲ ಹತ್ತರಬಂದು ಸಾವುಕಾರನ ದುರವ ಸ್ಥೆಯನ್ನು ಕಂಡು ಶೋಕಾಕುಲ ಹೃದಯಲಾಗಿ, ಆ ಕೊತವಾಲನಹತ್ತರ ಬಂದು.. " ಜಮಾದಾರಸಾಹೇಬ ! ಈ ಸಾವುಕಾರನಿಗೆ ಇನ್ನು ಎರಡುಘಳಿ ಗೆ ಅವಧಿಯನ್ನು ಕೊಡಿರಿ ನಾನು ಮಹಾರಾಜರ ಬಳಿಗೆ ಹೋಗಿ ಇವನಾ ಣರಕ್ಷಣೆಯ ಬಗ್ಗೆ ಸಾಹಸಮಾಡಿ ನೋಡುತ್ತೇನೆ ತಮ್ಮಶ್ರ ಮದಬಗ್ಗೆ ಕಿಂ ಚಿತ್ ಈ ದ್ರವ್ಯದಾನವನ್ನು ಸ್ವೀಕರಿಸಬೇಕು ” ಎಂದು ವಿಜ್ಞಾಪನೆಮಾಡಿ ಕೊಂಡು ಎರಡುನೂರು ರೂಪಾಯಿಗಳನ್ನು ಕೊತವಾಲನ ಪದರಿನಲ್ಲಿ ಸು ರುವಿದಳು. ಕೊತವಾಲನು ಆ ದ್ರವ್ಯವನ್ನು ಸ್ವೀಕರಿಸಿ ನಿನ್ನ ಮಾರ್ಗಪ್ರತೀ ಕ್ಷೆಯನ್ನು ಎರಡು ಘಳಿಗೆಯವರೆಗೆ ಮಾಡುತ್ತೇನೆಂದು ಹೇಳಿದನು.
ಆಗ ಆ ಕಲಾವಂತಿನಿಯು ರಾಜಸಭೆಯನ್ನು ಪ್ರವೇಶಿಸಿ, ತನ್ನ ನೃತ್ಯ ಗಾಯನಗಳಿಂದ ರಾಜರ ಮನಸ್ಸನ್ನು ಪ್ರಸನ್ನೀಕರಿಸಿ ಕೊಂಡಳು. ರಾಜ- ನಾನು ನಿನ್ನ ವಿದ್ವತ್ತತೆಯನ್ನು ಕಂಡು ಪ್ರಸನ್ನನಾಗಿದ್ದೇನೆ, ನಿನ್ನ ಇಚ್ಛೆಯೇನಿರುವದು ಕಥನಮಾಡು.

ವೇಶ್ಯಾ -ಪೃಥ್ವಿಕ ! ತಾವು ನನ್ನ ಮೇಲೆ ಪ್ರಸನ್ನರಾಗಿದ್ದರೆ ಆ ಸಾವುಕಾ ರನಿಗೆ ಪ್ರಾಣದಾನವನ್ನೀಯಬೇಕು. ರಾಜಾ ಅವನು ಇದ್ದ ಹೊತ್ತಿಗೆ ಮೃತ್ಯು ಮುಖವನ್ನು ಪ್ರವೇಶಿಸಿರಬಹುದು
ವೇಶ್ಯಾ- ಹೀಗೆ ನಡಿಯದೆ ಇದ್ದ ಪಕ್ಷದಲ್ಲಿ ಅವನಿಗೆ ಪ್ರಾಣದಾನವನ್ನೀಯ ಬೇಕು. .