ಪಾದಾರವಿಂದವನ್ನು ನೆನೆಯುತ್ತಿರುವನು. ಇವನಿಗೆ ಒಂದು ದಿವಸ ಹೊಟ್ಟೆಗೆ
ಸಾಕಾಗುವಷ್ಟು ಆಹಾರ ಸಾಮಗ್ರಿಯು ದೊರೆದರೆ ದೊರೆಯಿತು, ಇಲ್ಲವಾದರೆ ಇಲ್ಲ ಈ ಪ್ರಕಾರ ವಿರುವದರಿಂದ ಇಹಲೋಕದಲ್ಲಿ ಇವನಿಗೆ ಸೌಖ್ಯವು ದೊರಿಯುವದಿಲ್ಲ. ಪರಲೋಕದಲ್ಲಿ ಯಥೇಚ್ಛವಾದ ಸುಖವು ಲಭಿಸುವದು ಅದರಿಂದ ಇವನಿಗೆ ಇಹದಲ್ಲಿ ಸುಖವಿಲ್ಲ ಪರದಲ್ಲಿ ಸುಖವುಂಟು ಇನ್ನು
ಈ ಭಿಕ್ಷುಕನು ಇವನು ತನ್ನ ಉದರ ಪೋಷಣೆಯ ಸಲುವಾಗಿ ದಿನಾಲು
ಭಿಕ್ಷೆಬೇಡುವದಕ್ಕೆ ಹೋಗಿ ಅನೇಕ ಪ್ರಕಾರದ ಅಸತ್ಯ ಭಾಷಣಗಳನ್ನಾಡುತ್ತಾನೆ. ಇವನು ಅಹರ್ನಿಕ ಕಷ್ಟಪಡುವದರಿಂದ ಜಗನ್ನಿಯಂತನನ್ನು ಸ್ತುತಿಸಲಿಕ್ಕೆ ಒಂದರಕ್ಷಣವಾದರೂ ಕಾಲವು ದೊರೆಯುವದಿಲ್ಲ ಅದರಿಂದ ಇವನಿಗೆ ಇಹಪರಗಳೆರಡಲ್ಲಿಯೂ ಸುಖವು ದೊರೆಯಲಾರದು ಇನ್ನು ಈ ಧರ್ಮಾತ್ಮನಾದ ಧನಾಡ್ಯನು ನಾಲ್ಕನೇ ಪ್ರಕಾರದ ಮನುಷ್ಯನು ಹ್ಯಾಗಂದರೆ,
ಇವನ ಹತ್ತಿರ ಅಸಂಖ್ಯಾಕವಾದ ಸಂಪತ್ತಿಯಿರುವದು ಆ ಸಂಪತ್ತಿನ ಬಲದಿಂದ ಅನೇಕ ಪ್ರಕಾರದ ಪುಣ್ಯಸಾಧನೆಗಳನ್ನು ಮಾಡಿಕೊಂಡು ತಾನು
ಉಂಡುಟ್ಟು ಪರರಿಗೂ ಸುಖಕೊಡುತ್ತಾನೆ. ಇದರಿಂದ ಇವನಿಗೆ ಇಹಪರಗ
ಳೆರಡರಲ್ಲಿಯೂ ಸುಖವುಂಟು. ಎಂದು ವಿಸ್ತರಿಸಿ ಹೇಳಿದನು.
ಬೀರಬಲನ ಈ ಪ್ರಕಾರದ ಚಾತುರ್ಯಯುಕ್ತವಾದ ಬಾಷಣಗಳನ್ನು ಕೇಳಿ ಬಾದಶಹನಿಗೂ ತದಿತರ ಸಭಾಸದರಿಗೂ ಹರುಷವೂ ಆಶ್ಚರ್ಯವೂ ಉಂಟಾಯಿತು. ಆಗ ಬಾದಶಹನು ಬೀರಬಲನು ಕರೆತಂದ ಆನಾಲ್ಕೂ
ಜನರಿಗೆ ಅವರವರ ಯೋಗ್ಯತೆಯ ಪ್ರಕಾರ ಬಹುಮಾನವನ್ನಿತ್ತು ಕಳಿಸಿ
ಕೊಟ್ಟನು ಮತ್ತು ಆ ಧನಾಡ್ಯನಿಗೆ ಪ್ರತಿದಿವಸ ರಾಜಸಭೆಯಲ್ಲಿ ಬಂದು ಕುಳಿತು ಕೊಳ್ಳುವ ಬಹುಮಾನವನ್ನಿತ್ತನು.
- ೧೮೨, ಚಂಚಲ ನೈನ ಛಿನೈನ ಛಿವಾಯೇ )-
ಒಂದು ದಿವಸ ಅಕಬರ ಬಾದಶಹನು ಸಾಯಂಕಾಲದಲ್ಲಿ ವಾಯು
ಸೇವನಾರ್ಥವಾಗಿ ಹೊರಟನು ಆಗ ಅವನ ದೃಷ್ಟಿಯು ಒಬ್ಬ ತನ್ವಂಗಿಯ ಮೇಲೆಬಿತ್ತು ಬಾದಶಹನು ಬಂದದ್ದನ್ನು ಕಂಡು ಆ ಪ್ರಮದೆಯು ದ್ವಾರದ ಮರೆಗೆ ನಿಂತುಕೊಂಡಳು ಆ ಕೂಡಲೆ ಹಿಂದಿರುಗಿಬಂದು ಬೀರಬಲನನ್ನು
ಕರೆಯಿಸಿ, ಚಂಚಲ ನೈನ ಛಿನೈನ ಛಿವಾಯೇ ಈ ಸಮಸ್ಯೆಯನ್ನು ಪೂರ್ತಿ
ಗೋಳಿಸು ! ಎಂದು ಹೇಳಿದನು. ಆಗ ಬೀರಬಲನು.
ಸೂರ್ಯಛಿವೈ ಅದರೀ ಬದರೀ ಅರು ಚಂದ ಛಿವೈ ಹೈ ಅಮಾವಸ
ಆಯೇ ವಾನೀಕೀ ಬೂನ ಪತಂಗ ಛಿವೈ ಅರು ಮೀನ ಛಿವೈ ಇ
|