ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೯

ಈ ಪುಟವನ್ನು ಪ್ರಕಟಿಸಲಾಗಿದೆ
೩೪೮
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ನನಗೆ ಆ ಪಟ್ಟಣಕ್ಕೆ ಹೋಗುವದಕ್ಕೆ ತಮ್ಮಿಂದ ಅನುಮತಿಯು ದೊರೆತರೆ ನಾನು ಅಲ್ಲಿಗೆ ಹೋಗಿ ಆ ಜನರ ದುಃಖಗಳನ್ನು ಯಾವದಾದರೊಂದುವಾಯ ದಿಂದ ದೂರೀಕರಿಸಿ ಬರುತ್ತೇನೆ ಎಂದು ಬಿನ್ನಹ ಮಾಡಿಕೊಂಡನು. ಬಾದಶಹನು ಪ್ರಸನ್ನತೆಯಿಂದ ಅಪ್ಪಣೆಕೊಟ್ಟನು.
ಬೀರಬಲನು ವೈದ್ಯನ ವೇಷವನ್ನು ಪರಿಧಾನ ಮಾಡಿಕೊಂಡು ತನ್ನ ಉದ್ಯೋಗಕ್ಕೆ ಬೇಕಾಗುವ ಪರಿಕರಗಳನ್ನೆಲ್ಲ ಸಿದ್ಧಪಡಿಸಿಕೊಂಡು ಬಲಕ್ ಪಟ್ಟಣಕ್ಕೆ ಪ್ರಯಾಣಮಾಡಿ ಕೆಲವುದಿವಸಗಳಲ್ಲಿ ತಲುಪಿದನು ಮತ್ತು ತನ್ನ ಉದ್ಯೋಗವನ್ನು ಆರಂಭಿಸಿದನು. ಆ ದೇಶದಲ್ಲಿ ಇವನ ಹೊರತು ಅನ್ಯವೈದ್ಯರು ಇಲ್ಲದ್ದರಿಂದ ಇವನ ಪ್ರಶಂಸೆಯು ಬಹುಬೇಗ ನಾಲ್ಕೂ ಕಡೆಗೆ ಪಸರಿ ಸಿತು, ಆ ಪಟ್ಟಣದೊಳಗಿನ ಪ್ರತಿಷ್ಟಿತರಾದ ನಾಲ್ಕು ಜನರು ಈ ವೈದ್ಯಕಿಯ ಉದ್ಯೋಗವನ್ನು ಬಿಟ್ಟುಬಿಡು, ಇಲ್ಲವಾದರೆ ಇಲ್ಲಿಯ ಬಾದಶಹನ ಕೋಪಕ್ಕೆ ಪಾತ್ರನಾದಿ ಎಂದು ಬೋಧಿಸಿ ತಮ್ಮಲ್ಲಿ ನಡೆದ ಅನಾಹುತವನ್ನೆಲ್ಲಾ ವಿಶದವಾಗಿ ಬಣ್ಣಿಸಿದರು, ಆದರೂ ಬೀರಬಲನು ಅವರಮೂತಿಗೆ ಎಳ್ಳಷ್ಟಾದರೂ ಭೀತನಾಗಲಿಲ್ಲ ತನ್ನ ಉದ್ಯೋಗವನ್ನು ಸಾಗಿಸಹತ್ತಿದನು, ಈ ವರ್ತಮಾನವು ಬಲದ ಬಾದಶಹನಿಗೂ ತಲುಪಿತು,
ಮರುದಿವಸವೇ ಬೀರಬಲನನ್ನು ಓಲಗಕ್ಕೆ ಕರೆಯಿಸಿ, ಹಕೀಮನಾ ಹೇಬ ನಿಮ್ಮ ಪ್ರಶಂಸೆಯು ನನ್ನ ಕಿವಿಯವರೆಗೂ ಬಂದು ತಲುಪಿದೆ, ನೀವು ನಿಮ್ಮ ಚಾತುರ್ಯದ ಬಲದಿಂದ ನನ್ನ ಅಂಗುಲಿಯ ನಖವನ್ನು ಪೂರ್ವವತ್ ಮಾಡಿ ಕೊಟ್ಟರೆ ನಾನು ನಿಮ್ಮ ಗುಣಾನುವಾದವನ್ನು ಆಜನ್ಮ ಪರಿಯಂತರ ಮರೆಯಲಿಕ್ಕಿಲ್ಲ ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಬೀರಬಲನು"ಜೀಹಾ ನನಗೆ ಈ ರೋಗದಮೇಲೆ ರಾಮಬಾಣದಂತಿರುವ ಒಂದು ಔಷಧವು ವಿದಿತವದೆ ಅದನ್ನು ಹಚ್ಚಿದ ಐದು ದಿವಸಗಳಲ್ಲಿಯೇ ಪೂರ್ವದಂತೆ ಉಗುರು ಬರುತ್ತದೆ ಈ ಔಷಧದಿಂದ ಗುಣವಾಗದೆ ಇರದು ಎಂದು ನಮ್ಮಗುರುಗಳು ಸಹ ಪ್ರತಿಜ್ಞೆಯ ಮೇಲಿಂದ ಹೇಳಿದ್ದಾರೆ, ಆದರೆ ನಾನು ಔಷಧಕ್ಕೆ ಹೇಳುವ ಪದಾರ್ಥಗಳನ್ನು ಮಾತ್ರ ತರಿಸಿಕೊಡಬೇಕು, ಅದರಮೇಲೆ ನಿಮ್ಮ ಉಗುರು ಪೂರ್ವದಂತಾಗದಿದ್ದರೆ ನನ್ನ ತಿರಸ್ಸನ್ನು ಖಂಡಿಸಿಬಿಡಬೇಕು ಎಂದನು ಆಗ ಪುನಃ ಬಾದಶಹನು ಇಂಥ ದೃಢಪ್ರತಿಜ್ಞೆಯಿಂದ ಹೇಳುವ ಒಬ್ಬ ವೈದ್ಯನಾದರೂ ಬೆಟ್ಟಿಯಾಗಿದ್ದಿಲ್ಲ ಎಂದನು. ಈ ಮಾತಿಗೆ ಬೀರಬಲನು ಪರಮೇಶನು ಬೆಂಬಲವಿದ್ದರೆ ಯಾವಕಾರ್ಯವೂ ಅಸಾಧ್ಯವಲ್ಲ ಆದರೆ ಔಷಧದ ಜೀನಸುಗಳು ದೊರೆಯುವದೇ ಪರಮ ಪ್ರಯಾಸವು ಎಂದು ಉತ್ಕರಕೊಟ್ಟನು. 堂