ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೦

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೫೯



ಯ ಬೀಜವಾವುದು ? ಹೇಳಿರಿ! ಎಂದು ಅಪ್ಪಣೆ ಮಾಡಿದನು ಅವರು ಒಂದು ಮಾಸ ಪರಿಯಂತರ ಶೋಧಮಾಡಿದರೂ ಸಹ ಗೊತ್ತಾಗಲಿಲ್ಲ ಆಗ ಬಾದಶ ಹನು ಬೀರಬಲನಿಗೆ ಅದೇ ಪ್ರಶ್ನೆಯನ್ನು ಮಾಡಿದನು ಕೂಡಲೆ ಬೀರಬಲನು ಗಂಗಾಜಲವನ್ನು ತೆಗೆದುಕೊಂಡು ಭೂಮಿಯಮೇಲೆ ಹಾಕಿ ಖಾವುದ ! ಇ ದೇ ವನಸ್ಪತಿಗಳ ಬೀಜವು ! ಎಂದು ಉತ್ತರ ಕೊಟ್ಟನು ಅದನ್ನು ಕೇಳಿ, ಅವರೆಲ್ಲರೂ ಲಜ್ಜೆಯಿಂದ ಅಧೋವದನ ರಾದರು.

೨೨. ಪ್ರಜೆಗಳಲ್ಲಿ ಕೆಲವರು ರಾಜರು ಕೆಲವರು ದರಿದ್ರರು ಯಾಕೆ ಇರುವರು ?

ಒಂದು ಸಾರೆ ಬಾದಶಹನು ಬೀರಬಲನೊಡನೆ ಗೃಹಕೃತ್ಯದ ಸಂಬ ಧದ ಮಾತು ಕಥೆಗಳನ್ನಾಡುತ್ತ ಕುಳಿತು ಕೊಂಡಿದ್ದನು ಒಮ್ಮಿಂದೊಮ್ಮೆ ಬಾದಶಹನ ಮನಸ್ಸಿನಲ್ಲಿ ಈ ಮೇಲೆ ಬರೆದ ಪ್ರಶ್ನೆಯು ಉದ್ಭವಿಸಿತು ಆಕೂ ಡಲೆ ಬೀರಬಲ್ಲ ಜಗತ್ತಿನಲ್ಲಿ ಕೆಲವು ಜನರು ರಾಜರು ಯಾಕೆ ಆಗುವರು ? ಕೆಲವರು ದರಿದ್ರರು ಆಗುವ ಕಾರಣವೇನು ? ಎಂದು ಪ್ರಶ್ನೆ ಮಾಡಿದನು ಆಗ ಬೀರಬಲನು ಕಿಂಚಿತ್ತಾದರೂ ಯೋಚಿಸದೆ
"ರಾಮ ಝರೋಖೆ ಬೈಠಕರ ಸಬಕಾಮುಜರಾಲೇತ !
ಜಾಕೀಜೈಸೀ ಚಾಕರೀ ವಾಕೋ ವೈ ಸೋದೇತ |
ಎಂಬ ಪದ್ಯವನ್ನು ಹೇಳಿದನು ಇದರ ಅಭಿಪ್ರಾಯವೇನಂದರೆ “ ಕರ್ತನು ಎಲ್ಲ ಮನುಷ್ಯ ಪ್ರಾಣಿಗಳನ್ನು ನಿರ್ಮಿಸಿ ತನ್ನ ಪ್ರಾಸಾದದ ಅಗ್ರಭಾಗದಲ್ಲಿ ಕುಳಿತುಕೊಂಡು ಎಲ್ಲರ ಕಡೆಯಿಂದ ಮುಜರೆಯನ್ನು ತಕ್ಕೊ ಳ್ಳಹತ್ತಿದನು ಯಾರು ಉದ್ದತತ ನದಿಂದ ಮುಜರೆ ಮಾಡಿದರು ಕೆಲವರು ಅತಿನಮ್ರತೆಯಿಂದ ಮಾಡಿದರು ಅದರಿಂದ ಅವರವರ ಕರ್ಮಾನು ಸಾರವಾ ಗಿ ಅವರವರಸ್ಥಿತಿಯನ್ನುಂಟು ಮಾಡಿದನು.

-೨೨೩. ಬೀರಬಲನು ಶುನಕನ ವೈದ್ಯನು.)-

ಒಂದು ದಿವಸ ಬಾದಶಹನು ತನ್ನ ಮುಖ್ಯ ಮುಖ್ಯಸಭಾಸದರೊಡನೆ ಕುಳಿತುಕೊಂಡು ವಿನೋದದಿಂದ ಮಾತು ಕಥೆಗಳನ್ನು ಆಡುತ್ತಿದ್ದನು. ಆಗ ಅಬುಲ್ ಫಜಲನು ಬೀರಬಲನಿಗೆ ವಿನೋದಮಾಡಬೇಕೆಂದು ಯೋಚಿ ಸಿ “ ಬೀರಬಲ್ಲ ? ಈಹೊತ್ತಿನಿಂದ ತಮ್ಮನ್ನು ಶುನಕಗಳ ರೋಗ ನಿವಾರ ಣೆಯಗೃಹಗಳ ಮೇಲೆ ಮುಖ್ಯಸ್ಥರನ್ನಾಗಿ ನಿಯಮಿಸಿದೆ?” ಎಂದನು ಆ ಕೂ ಡಲೆ ಬೀರಬಲನು ಹಾಗಾದರೆ ನೀವೆಲ್ಲರೂ ನನ್ನ ಆಜ್ಞೆಯನ್ನು ಪಾಲಿಸಬೇ ಕಾಯಿತು? ಎಂದುನು ಅಬುಲಫಜಲನು ಬೀರಬಲನ ಮಾತನ್ನು ಕೇಳಿ ಲಜ್ಜಿ