ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೬

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು
೩೬೫

ವರ್ತಕರೆಂದು ಹೇಳಿಕೊಳ್ಳುತ್ತಿಲ್ಲ ಎಂದು ವಿಜ್ಞಾಪನೆ ಮಾಡಿಕೊಂಡರು. ಮರುದಿವಸವೇ ಅವರಿಗೆ ಆಕೆಲಸವನ್ನು ತಪ್ಪಿಸಿದನು.

-(೨೧೩, ಹೌದಿನಲ್ಲಿಯ ತತ್ತಿ.)-

ಒಂದು ದಿವಸ ಬಾದಶಹನು ಬೀರಬಲನಿಗಿಂತ ಮುಂಚಿತವಾಗಿ ಸಭೆಗೆ ಬಂದು ಬೀರಬಲನಿಗೆ ವಿನೋದ ಮಾಡಬೇಕೆಂದು ಯೋಚಿಸಿ ಪ್ರತಿಯೊಬ್ಬ ಸಭಾಸದನ ಕೈಯಲ್ಲಿ ಒಂದೊಂದು ಕೋಳಿಯ ತತ್ತಿಯನ್ನು ಕೊಟ್ಟನು. ಬೀರಬಲನು ಬಂದ ಕೂಡಲೆ ಬಾದಶಹನು "ಬೀರಬಲ್ಲ, ನಿನ್ನೆ ರಾತ್ರಿಯಲ್ಲಿ ಸ್ವಪ್ನದಲ್ಲಿ ಒಬ್ಬ ದೇವದೂತನು ಬಂದು ನಿನ್ನ ದರಬಾರದಲ್ಲಿರುವ ಮುತ್ಸದ್ಧಿಗಳಲ್ಲಿ ಓರ್ವಜನಕನ ವೀರ್ಯದಿಂದಲೇ ಜನಿಸಿದವರಾರೆಂಬದನ್ನು ಗೊತ್ತು ಮಾಡಿಕೊ" ಎಂದನು. ಅದಕ್ಕೆ ಯಾವ ಯುಕ್ತಿಯನ್ನು ಮಾಡಬೇಕು ! ಎಂದು ನಾನು ಕೇಳಿದೆನು. ಅದಕ್ಕೆ ಅವನು "ನಿನ್ನ ಉದ್ಯಾನದಲ್ಲಿರುವ ಜಲಪ್ರೇರಿತ ಹೌದಿನೊಳಗಿಂದ ಒಬ್ಬೊಬ್ಬನು ಒಂದೊಂದು ತತ್ತಿಯನ್ನ ತಂದು ತೋರಿಸಬೇಕು; ಯಾವನಿಗೆ ತತ್ತಿಯು ಸಿಗುವದಿಲ್ಲವೋ ಅವನು ಶುದ್ಧವೀರ್ಯದಿಂದ ಜನಿಸಿದವನಲ್ಲ ಎಂದು ತಿಳಿದುಕೋ ಎಂದು ಹೇಳಿ ಅದೃಶ್ಯನಾಗಿ ಹೋದನು. ಅದರಿಂದ ಈ ದಿವಸ ಪರೀಕ್ಷೆಯಾಗಿ ಹೋಗಲಿ.! ಎಂದು ನುಡಿದನು. ಆಗ ಬಾದಶಹನ ಆಜ್ಞಾನುಸಾರವಾಗಿ ಯಾವತ್ತು ಸಭಾಸದರು ಪುಷ್ಕರಣಿಯಲ್ಲಿ ಮುಳುಗಿ ಒಂದೊಂದು ತತ್ತಿಯನ್ನು ತಂದು ತೋರಿಸಿದರು. ಎಲ್ಲರಂತೆ ಬೀರಬಲನ ಮುಳುಗಿದನು. ಅವನಿಗೆ ತತ್ತಿಯು ಸಿಕ್ಕಲಿಲ್ಲ ಆಗ ಮೇಲೆ ಬಂದು "ಕು ಕು ಕೂ ಕೂ" ಎಂದು ಕೂಗಹತ್ತಿದನು. ಆಗ ಬಾದಶಹನು "ನಿನ್ನ ತತ್ತಿಯು ಎಲ್ಲಿ ಅದೆ" ಎಂದು ಪ್ರಶ್ನೆ ಮಾಡಿದನು. ಆ ಕೂಡಲೆ ಬೀರಬಲನು - ಪೃಧ್ವಿನಾಥ ! ಈ ಯಾವತ್ತೂ ತತ್ತಿಗಳು ಗಂಡುಕೋಳಿಯಾಗಿದ್ದ ನನ್ನಿಂದಲೇ ಉತ್ಪನ್ನವಾಗಿದೆ” ಎಂದು ಹೇಳಿದನು. ಮುತ್ಸದ್ದಿಗಳೆಲ್ಲರೂ ಲಜ್ಜಿತರಾದರು, ಬಾದಹನು ಕಿಲಕಿಲನಕ್ಕನು.

-(೨೧೪, ಕಾಳಗದಲ್ಲಿ ಜಯವೋ ! ಪರಾಜಯವೋ!)-

ಬಾದಶಹನು ಯಾವ ಒಂದು ಕಾಳಗಕ್ಕೆ ಹೊರಡಲನವಾಗಿ ಬೀರಬಲನನ್ನು ಕುರಿತು "ಬೀರಬಲ್ಲ, ಈ ಕಾಳಗದಲ್ಲಿ ನನಗೆ ಜಯವಾಗುವದೋ ಪರಾಜಯವಾಗುವದೋ" ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಬೀರಬಲನು ರಣಭೂಮಿಯಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಹೇಳುವೆನು ಅಂದನು. ಬಾದಶಹನು ರಣಭೂಮಿಗೆ ತಲುವಿದಕೂಡಲೆ ಪುನಃ ಪ್ರಶ್ನೆ ಮಾಡಿದನು. ಆಗ ಬೀರಬಲನು ನಿಮಗೇ ಜಯವಾಗುವದು ಎಂದು ಹೇಳಿದನು. ಅದು ಯಾ