ಯು ಲಜ್ಜಿತಳಾಗಿ ಅವನತ ಮುಖಿಯಾದಳು ಅದನ್ನು ಕಂಡು ಬೀರಬಲನು
ಹುಜೂರ ! ತಾವು ಜಗತ್ಪಿತೃಗಳಾಗಿರುವಿರಿ; ತಮ್ಮ ಪುತ್ರನೆಂತಲೇ ಭಾವಿಸಿಕೊಳ್ಳಬೇಕು ಎಂದನು ಬಾದಶಹನು ಲಜ್ಜಿತನಾಗಿ ಮುಖತಗ್ಗಿಸಿದನು.
೨೨೦. ಬೀರಬಲನು ನಕ್ಕರೆ ಅವನು ನಿಂತುಕೊಂಡ
ಸ್ಥಲವು ಜಲಮಯ ವಾಗುವದು.}}
ಒಂದಾನೊಂದು ಸಮಯದಲ್ಲಿ ಒಬ್ಬ ಜ್ಯೋತಿಷಿಯು ಅಕಬರನ ಸಭಾಸ್ಥಾನಕ್ಕೆ ಬಂದು ಬೀರಬಲನು ಒಂದು ವೇಳೆ ನಕ್ಕರೆ ಪೃಥ್ವಿಯೆಲ್ಲ ಜಲಮಯವಾಗುವದು ಎಂದು ಭವಿಷ್ಯವನ್ನು ಹೇಳಿದನು ಆದರೆ ಬೀರಬಲನು
ಕ್ರೋಧಯುಕ್ತನಾಗಿ ಕುಳಿತಿದ್ದನು ಬಾದಶಹನು ಅನೇಕ ಯುಕ್ತಿ ಪ್ರಯುಕ್ತಿಗಳನ್ನೆಲ್ಲ ಮಾಡಿ ನೋಡಿದನು ಅದರಿಂದ ಪ್ರಯೋಜನವಾಗಲಿಲ್ಲ ಅಂತ್ಯದಲ್ಲಿ ಬಾದಶಹನಿಗೂ ಕೋಪವು ಬಂತು ಆ ಕೂಡಲೆ ಅವನು ನೀನು ಈಗಿಂದೀಗ ನನ್ನ ಪಟ್ಟಣವನ್ನು ಬಿಟ್ಟು ಹೋಗು ! ಎಂದು ಅಪ್ಪಣೆ ಮಾಡಿದನು
ಬಾದಶಹನ ಆಜ್ಞೆಯು ಕಿವಿಗೆ ಬಿದ್ದ ಕೂಡಲೆ, ಬೀರಬಲನು ಅರಣ್ಯದ ಮಾರ್ಗವನ್ನು ಹಿಡಿದನು ಕಿಂಚಿತ್ ದೂರ ಹೋಗುವದರೊಳಗೆ ಹೊತ್ತು ಮುಳುಗಿತು ಕತ್ತಲೆಯಾರಿಸಿತು ಕಣ್ಣೊಳಗೆ ಬೆರಳು ಚುಚ್ಚಿದರೂ ಸಹ ಕಾಣದಷ್ಟು
ಕತ್ತಲೆಯು ಆಯಿತು ಆಗ ಅವನು ಹಿಂದು ಹಾಳುದೇಗುಲವನ್ನು ಕಂಡು, ಅದರೊಳಗೆ ಪ್ರವೇಶ ಮಾಡಿದನು ಅಷ್ಟರಲ್ಲಿ ಒಬ್ಬನು ಒಂದು ಕಬ್ಬಿನ
ಕೋಲನ್ನು ಹಿಡಿದುಕೊಂಡು, ಅದೇ ದೇಗುಲವನ್ನು ಹೊಕ್ಕು ಒಂದು ಮೂಲೆಯಲ್ಲಿ ಅವಿತುಕೊಂಡನು ಆಮೇಲೆ ಒಬ್ಬನು ತನ್ನ ಗಾರ್ದಭವನ್ನು ಶೋಧಮಾಡುತ್ತ ಅಲ್ಲಿಗೆ ಬಂದು, ಕತ್ತಲೆಯಾದ್ದರಿಂದ ಅವನ ಒಂದುಮಗ್ಗುಲಲ್ಲಿ ಕುಳಿತುಕೊಂಡನು ಆಷ್ಟರಲ್ಲಿ ಮೂರನೆಯವನೊಬ್ಬನು ತನ್ನ ನೂತನ
ಪ್ರಾಯದ ಹೆಂಡತಿಯನ್ನೊಡಗೊಂಡು ಆಸ್ಥಳಕ್ಕೆ ಬಂದು ಮನೆಯೆಂದು ತಿಳಿದು ತನ್ನ ಪತ್ನಿಯೊಡನೆ ವಿಲಾಸ ಮಗ್ನನಾದನು ಕಿಂಚಿತ್ ಕಾಲದಮೇಲೆ ಅವನು ತನ್ನ ಪತ್ನಿಯನ್ನುದ್ದೇಶಿಸಿ, ಎನಾದರೂ ಸ್ವಲ್ಪ ಸುಖವಾಯಿತೋ? ಎಂದು ಕೇಳಿದನು ಅದಕ್ಕೆ ಅವಳು ಸುಖವೆಲ್ಲಿಯದು? ಗಾರ್ದಭದೊಡನೆ ಕ್ರೀಡಿಸಿದಂತಾಯಿತು ಎಂದಳು ಆಕೂಡಲೆ ಆ ಕತ್ತೆಯವನು ನನ್ನ ಕತ್ತೆಯು ಎಲ್ಲಿ ಅದೆ? ಎಂದು ಕೇಳಿದನು ಆ ಸ್ತ್ರೀಯು ಲಜ್ಜಿತಳಾಗಿ ತನ್ನ ಪತಿಯನ್ನು ಕುರಿತು ಹೊರಗೆ ತೆಗೆದುಕೋ? ಎಂದಳು ಆಗ ಕಬ್ಬಿನ ಹೊರೆಯವನು ಜೋಕೆ ! ಹೊರಗೆ ತೆಗೆಯಕೂಡದು . ಸರಕಾರದ ಬದುಕು ಅದೆ;ಎಂದನು ಈ ಮಾತುಗಳನ್ನು ಕೇಳುತ್ತ ಕುಳಿತಿದ್ದ ಬೀರಬಲನಿಗೆ ಹೊಟ್ಟೆ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೨
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೭೧