ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೪೫

ಈ ಪುಟವನ್ನು ಪ್ರಕಟಿಸಲಾಗಿದೆ
೩೭೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೩



ನೀವುಬೇಕಾದದ್ದನ್ನು ಹೇಳಿದರೂ ಕೇಳುತ್ತಾನೆ; ಎಂದು ಹೇಳಿದನು ಬೀರ ಬಲನ ಹೇಳಿಕೆಯಂತೆ ಮಾಡಿದನು ಆಗ ಬೀರಬಲನ ಹೇಳಿಕೆಯು ಯಥಾರ್ಥ ವಾದದ್ದೆಂದು ಎಲ್ಲರಿಗೂ ಮನವರಿಕೆ ಯಾಯಿತು.
(೨೨೫, ನೀನು ಹಲಾಲಖೋರನೋ ಅಥವಾ ಹರಾಮ ಖೋರನೋ)
ಒಂದು ದಿವಸ ನೆರೆದ ಸಭೆಯ ಮಧ್ಯದಲ್ಲಿ ಅಕಬರನು ಬೀರಬಲ್ಲ ನೀನು ಹಲಾಲಖೋರನೋ ಅಥವಾ ಹರಾಮ ಖೋರನೋ ? ಎಂದು ಪ್ರಶ್ನೆ ಮಾಡಿದನು ಆಗ ಬೀರಬಲನು " ಹುಜೂರ್ ಎರಡೂ ? ” ಎಂದು ಉತ್ತರ ಕೊಟ್ಟನು.

-(೨೨೬, ವೈಕುಂಠ ದರ್ಶನ)-

ಒಂದು ದಿವಸ ಅಕಬರ ಬಾದಶಹನು ಬೀರಬಲನನ್ನು ಕುರಿತು ನೀನು ನನಗೆ ಒಂದು ದಿವಸ ನನಗೆ ವೈಕುಂಠ ದರುಶನವನ್ನು ಮಾಡಿಸು ಎಂದು ಹೇಳಿದನು ಅದಕ್ಕೆ ಬೀರಬಲನು ಎರಡು ತಿಂಗಳುಗಳ ಅವಧಿಯನ್ನು ಕೊಡಬೇಕು ಎಂದು ಪ್ರಾರ್ಥನೆಮಾಡಿಕೊಳ್ಳಲು ಬಾದಶನು ಒಪ್ಪಿಕೊಂಡನು, ಆ ಕೂಡಲೆ ಮನೆಗೆಬಂದು ಮರುದಿವಸ ಬೀರಬಲನಿಗೆ ಅತಿಶಯ ಜಾಡ್ಯ ವಾಗಿದೆಯೆಂದು ವಾರ್ತೆಯನ್ನು ಪಸರಿಸಿ ಬಿಟ್ಟನು ಮುಂದೆ ಹದಿನೈದು ದಿವಸಗಳಾದ ಪರಲೋಕವನ್ನು ಕುರಿತು, ಗಮನ ಮಾಡಿದನೆಂದು ವಾರ್ತೆ ಯನ್ನು ಹುಟ್ಟಿಸಿ ಬಿಟ್ಟನು ಬಾದಶಹನಿಗೆ ಅತಿಶಯ ದುಃಖವಾಯಿತು ಬಹಳಮಾಡಿ ವೈಕುಂಠ ದರ್ಶನವನ್ನು ಮಾಡಿಸುವದು ಅಸಾಧ್ಯವಾದದ್ದೆಂದು ತಿಳಿದುಕೊಂಡು ಅದರ ಚಿಂತೆಯಿಂದಲೇ ಮರಣಹೊಂದಿರಬಹುದೆಂದು ನಿಶ್ಚ ಯಿಸಿಕೊಂಡನು ನಾನೇ ಅವನ ಮರಣಕ್ಕೆ ಕಾರಣನಾದೆನೆಂತಲೂ ಇನ್ನು ತನಗೆ ಅಂಥ ಮನುಷ್ಯನು ದೊರೆಯುವದು ದುರ್ಲಭವೆಂತಲೂ ತಳಮಳಿಸ ಹತ್ತಿದನು.
ಇತ್ತ ಬೀರಬಲನು ತನ್ನ ಗೃಹದೊಳಗಿಂದ ಕೋಟೆಯವರೆಗೆ ಬಂದು ವಿವರವನ್ನು ಸಿದ್ಧಪಡಿಸಿಕೊಂಡು ಬಂದು ರಾಜಸಭಕ್ಕೆ ಆ ವಿವರದೊಳಗಿಂದ ಹಾಯ್ದು ಹೋಗುವದಕ್ಕೂ ಅಲ್ಲಿಂದ ಮರಳಿ ಬರುವದಕ್ಕೂ ಕಲಿಸಿದನು. ಆ ಮೇಲೆ ಒಂದು ದಿವಸ ರಾತ್ರಿ ಸಮಯದಲ್ಲಿ ಆ ವಿವರದೊಳಗಿಂದ ಆಕೋಟೆಯನ್ನು ಹೊಕ್ಕು ವೀಳ್ಯದೆಲಿಯನ್ನು ಮಾರುತ್ತಿರುವವಳ ಅಂಗಡಿಯಲ್ಲಿ ಹೋಗಿ ವೀಳ್ಯವನ್ನು ಹಾಕಿಕೊಂಡು ಒಂದು ರೂಪಾಯಿಯನ್ನು ಅವಳ ಕೈಗೆ ಇತ್ತು ಹೊರಡಲನುವಾದನು ಅದನ್ನು ಕಂಡು ಅವಳು ಆಶ್ಚಯಾ ನ್ವಿತಲಾಗಿ ಇವನು ಒಬ್ಬ ಧನಾಡ್ಯನಿರಬಹುದೆಂದು ತಿಳಿದು ಕೊಂಡು ತಾವು