ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೫

ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಪೂರ್ವಜನ್ಮದ ವೃತ್ತಾಂತ


ನೆಂಬವನು ಕೈಸೆರೆಸಿಕ್ಕನು. ಆಗ ಇವರಿಬ್ಬರು ಅವನನ್ನು ತೆಗೆದುಕೊಂಡು ಬಾದಶಹನ ಹತ್ತಿರ ಹೋದರು. ಬಾದಶಹನು ಪ್ರಸನ್ನನಾಗಿ ಹುಸೇನ ಕು ಲೀಖಾನನಿಗೆ "ಖಾಜಹಾ ” ಎಂಬ ಪದವಿಯನ್ನೂ ಬೀರಬಲನಿಗೆ - ಮು ಸಾಹಿಬ ದಾನಿಕವರ ” ಅಂದರೆ ಬುದ್ದಿವಂತನಾದ ಮಂತ್ರಿ ಎಂಬ ಪದವಿಯ ನ್ನು ಕೊಟ್ಟನು.
ಮರುವರುಷ ಮಿರಜಾ ಇಬ್ರಾಹೀಮನ ತಮ್ಮನಾದ ಮಹಮ್ಮದ ಹು ಸೇನನು ದಂಡಾಳುಗಳನ್ನು ಕೂಡಿಕೊಂಡು ಗುಜರಾಥದ ಸುಭೇದಾರನಾದ ಖಾನ ಅಜಮನನ್ನು ಅಹಮ್ಮದಾಬಾದಿನಲ್ಲಿ ಮುತ್ತಿದನು ಆಗ ಅವನ ಸಹಾ ಯಕ್ಕೆ ಬಾದಶಹನು ಸ್ವತಃ ತಾನೆ ಮಂತ್ರಿಗಳನ್ನು ಕರೆದು ಕೊಂಡು. ಒಂ ಭತ್ತು ದಿವಸಗಳಲ್ಲಿ ಅಹಮದಾಬಾದಕ್ಕೆ ಮುಟ್ಟಿದನು, ಆ ಸಮಯದಲ್ಲಿ ಬಿ ರಬಲನೂ ಬಾದಶಹನ ಜೊತೆಯಲ್ಲಿದ್ದನು.
ಬಾದಶಹನು ತನ್ನ ಮಹಲಿನ ಸಮೀಪಕ್ಕೆ ಬೀರಬಲನಿಗೊಸುಗ ಒಂದು ಮಂದಿರವನ್ನು ಕಟ್ಟಿಸಿಕೊಟ್ಟನು, ಅದು ಸಂವತ್ ೧೬೩೯ನೇ ವರುಷ ಪೂರ್ಣವಾಯಿತು. ಆಗ ಬೀರಬಲನು ಆ ಗೃಹಕ್ಕೆ ಹೋಗುವಪೂರ್ವದಲ್ಲಿ ಬಾದಶಹನಿಗೆ ಆಮಂತ್ರಣವನ್ನು ಕೊಟ್ಟನು, ಬಾದಶಹನು ಅವನ ಆಮಂ ತ್ರನವನ್ನು ಸ್ವೀಕರಿಸಿ ಆ ಗೃಹದಲ್ಲಿ ಹೋಗಿ ಭೋಜನ ಮಾಡಿದನು.
ಮರುವರುವ ಬಾದಶಹನು ಪ್ರಯಾಗದಲ್ಲಿ ಒಂದು ಕೋಟೆಯನ್ನು ಕಟ್ಟಿಸಿದನು, ಆ ಕೋಟೆಯನ್ನು ಪ್ರವೇಶಿಸುವ ಸಮಾರಂಭದ ಕಾಲದಲ್ಲಿ ಬೀರಬಲನು ಬಾದಶಹನಿಗೆ ಬಹು ಅಮೂಲ್ಯವಾದ ರತ್ನಗಳನ್ನು ಕಾಣಿಕೆ ಯನ್ನಾಗಿ ಸಮರ್ಪಿಸಿದನು, ಇದರಿಂದ ಬಾದಶಹನು ಬಹು ಹೃದ್ವಮಾನಸ ನಾದನು
. ರೇವಾದೇಶದ ಅರಸನಾದ ರಾಮಚಂದ್ರನಿಗೆ ಬಹಳ ಗರ್ವವಿತ್ತು. ಅವನು ಒಂದು ದಿವಸ ತಾನಸೇನನಿಗೆ ಒಂದುಕೊಟಿ ರೂಪಾಯಿಗಳನ್ನು ಪಾರಿತೋಷಕವಾಗಿ ಕೊಟ್ಟನು. ಮತ್ತು ಲೊದೀವಂಶದ ಸುಲ್ತಾನ ಇ ಬ್ರಾಹೀಮ ಶಹನಿಗೆ ಒಂದು ಅಮೂಲ್ಯವಾದ ಉಡುಪನ್ನು ಕಾಣಿಕೆಯಾಗಿ ಸಮರ್ಪಿಸಿದ್ದನು, ಈ ಎಲ್ಲ ಕಾರಣಗಳಿಂದ ಅವನು ಬಹುದಾತೃವೆಂದು ಪ್ರ ಸಿದ್ಧನಾಗಿದ್ದನು. ಆದರೆ ಅವನಿಗೂ ಅಕಬರಬಾದಶಹನಿಗೂ ಸಮಾಗಮವಾ ಗಿದ್ದಿಲ್ಲ, ರಾಮಚಂದ್ರನು ಬಾದಶಹನ ಕಾಣಿಕೆಯನ್ನು ತನ್ನ ಪುತ್ರನ ಕೈ ಯಲ್ಲಿ ಕೊಟ್ಟು ಕಳಿಹಿಸುತ್ತಿದ್ದನು ಪ್ರಯಾಗದಲ್ಲಿ ಕೋಟೆಯು ಸಿದ್ದವಾದ ನಂತರ ಅಕಬರ ಬಾದಶಹನು ಅಲ್ಲಿಯೇ ವಾಸಮಾಡಹತ್ತಿದನು ಆಗ ರೇವಾಸ