ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೫೧

ಈ ಪುಟವನ್ನು ಪ್ರಕಟಿಸಲಾಗಿದೆ
೩೮೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ನು ನಿಜಸಂಗತಿಯನ್ನೆಲ್ಲ ಹೇಳಿಬಿಟ್ಟನು. ಆಗ ದೇವಿಯು ಕುಪಿತನಾಗಿ "ಈ ದಿವಸದಿಂದ ಲಾಲಾಜಾತಿಯ ಜನರಮನೆಯಲ್ಲಿ ನಾನು ವಾಸಮಾಡುವದಿಲ್ಲ” ಎಂದು ಹೇಳಿ ಅಂತರ್ಧಾನವಾದಳು ಈ ಕಾರಣದಿಂದ " ಲಾಲಾ ” ಜನರು ದರಿದ್ರರಾಗಿರುವರು ಎಂದು ಬೀರಬಲನು ಹೇಳಿದನು..

- (೨೩೪ ಮುಸಲ್ಮಾನರ, ಇಸ್ತಂಜಾ.)-

ಒಂದುಸಮಯದಲ್ಲಿ ಬಾದಶಹನು " ಬೀರಬಲ ! ನಿಮ್ಮ ಜನರು ಯಾವಾಗಲೂ ಅಸ್ವಚ್ಛತೆಯಿಂದ ಇರುವರು ನಮ್ಮ ಜನರು ಯಾವಾಗಲೂ ಸ್ಪಚ್ಛವಾಗಿರುವರು”ಎಂದನು. ಅದಕ್ಕೆ ಬೀರಬಲನು ಆದು ಹ್ಯಾಗೆ ಎಂದು ಪ್ರಶ್ನೆ ಮಾಡಿದನು ಈ ಪ್ರಶ್ನೆಗೆ ಬಾದಶಹನು ನಿಮ್ಮ ಜನರು ಮೂತ್ರವಿಸರ್ಜನೆ ಮಾಡಿ ಹಾಗೆಯೇ ದೋತರವನ್ನು ಬಿಟ್ಟು ಬಿಡುತ್ತಾರೆ, ನಮ್ಮ ಜನರು ಮೂತ್ರ ವಿಸರ್ಜನೆಯ ನಂತರ ಮಣ್ಣನ್ನು ಹಚ್ಚಿ ಶುದ್ಧ ಮಾಡುತ್ತಾರೆ; ಎಂದು ಉತ್ತರ ಹೇಳಿದನು. ಅದಕ್ಕೆ ಬೀರಬಲನು ಹಾಗಲ್ಲ ? ಇದಕ್ಕೆ ಬೇರೆ ಕಾರಣವುಂಟು, ಅದೇನಂದರೆ ಮೂತ್ರ ವಿಸರ್ಜನೆಯ ಕಾಲದಲ್ಲಿ ಅದರಮೇಲೆ ದೃಷ್ಟಿ ಬೀಳಲು, ಆಗ ನಿಮ್ಮ ಮನಸ್ಸಿನಲ್ಲಿ ( ಇದು ಕಕ್ಕನ ಮಗಳನ್ನೂ, ಮಾವನ ಮಗಳನ್ನೂ ಅಕ್ಕತಂಗಿಯರನ್ನೂ ಸಹ ಬಿಡಲಿಲ್ಲವೆಂದು ತಿಳಿದು ಅದರ ಮೋರೆಗೆ ಮಣ್ಣು ಹಚ್ಚುತ್ತೀರಿ” ಎಂದು ಹೇಳಿದನು. ಅದನ್ನು ಕೇಳಿ ಬಾದಶಹನು ಲಜ್ಜಿತನಾದನು.

-(೨೩೫ ಬಾದಶಹನ ಜಾಮಾತ.)-}

ಒಂದುದಿವಸ ಸಭಾಸ್ಥಾನದಲ್ಲಿ ಅಕಬರನ ಜಾಮಾತನು ಬಂದನು, ಸಭಿಕರೆಲ್ಲರೂ ಚುಟಿಕೆಯನ್ನು ಬಾರಿಸಹತ್ತಿದರು. ಆದರೆ ಮಧುರೆಯ ಒಬ್ಬ ವರ್ತಕನು ತನ್ನ ಅಂಗುಲಿಯನ್ನು ತೋರಿಸಿದನು, ಹೀಗೇಕೆ ! ಎಂದು ಬಾದಶಹನು ಪ್ರಶ್ನೆ ಮಾಡಿದನು. ಆಗ ಆ ವರ್ತಕನು "ಈ ಜನರು ಚುಟಕೆಯನ್ನು ಬಾರಿಸಿದರು, ಇದರ ಕಾರಣವೇನಂದರೆ ಚುಟಿಕೆಬಾರಿಸುವಷ್ಟು ಸಮಯದಲ್ಲಿ ನಿಮ್ಮನ್ನು ನಾಶಮಾಡುತ್ತೇವೆ ” ಎಂಬ ಅಭಿಪ್ರಾಯದಿಂದ ಗರ್ಭಿತವಾದ್ದರಿಂದ ನಾನು ಒಂದು ಅಂಗುಲಿ ನಿರ್ದೆಶವನ್ನು ಮಾಡಿದೆನು, ಇದರ ಆಶಯವೇನಂದರೆ ನಿಮ್ಮಿಂದ ಒಂದಂಗುಲಿಯನ್ನು ಸಹ ಮಣಿಸುವದು ಆಗ ಲಿಕ್ಕಿಲ್ಲ ಒಂದು ಅಂಗುಲಿಯನ್ನು ತೋರಿಸಿದೆನು ಎಂದು ಕಥನಮಾಡಿದನು ಈ ಮಾತನ್ನು ಶ್ರವಣಮಾಡಿ ಬಾದಶಹನು ಪ್ರಸನ್ನನಾದನು ಸಭಾಸದರು ಲಜ್ಜಿತರಾದರು.