ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೩

ಈ ಪುಟವನ್ನು ಪ್ರಕಟಿಸಲಾಗಿದೆ
೧೮
ಪೂರ್ವ ಜನ್ಮದ ವೃತ್ತಾಂತ,

ಕೇವಲ ದುಃಖದಿಂದಲೇ ತುಂಬಿದ್ದಾಗಿದೆ ಸುಖದ ಹಿಂದೆ ದುಃಖವು ಇದ್ದೇಯಿ ರುವದು ಅಂಥಾ ಪರಮ ಮಿತ್ರನು ನನಗೆ ಇನ್ನು ಮೇಲೆ ದೊರೆಯಲಾರನು, ಅವನ ವಿಷಯದಲ್ಲಿ ನಾನು ಎಷ್ಟು ದುಃಖಪಟ್ಟರೂ ಅದು ಅತ್ಯಲ್ಪವೇ ಆಗಿದೆ ಈ ಜಗತ್ತಿನಲ್ಲಿ ಜನ್ಮ ಹೊಂದಿದವನು ಎಂದಾದರೂ ಒಂದುದಿವಸ ಮರಣ -ಹೊಂದತಕ್ಕವನೇ ಎಂಬದನ್ನು ತಿಳಿದುಕೊಂಡು ಕಾಂತತೆಯನ್ನು ಧರಿಸು ವದೇ ಮೇಲುವಾಯವು. ಇಂಥ ಸ್ಥಿತಿಯಲ್ಲಿ ಈಶ್ವರನ ಸಂಕಲ್ಪದಂತೆ ಮನ ಸ್ಸನ್ನು ಸ್ಥಿರಪಡಿಸಿಕೊಂಡು ಇರಲಿಕ್ಕೇಬೇಕು, ಈ ಪ್ರಕಾರ ಅನಾಹುತವ ನ್ನುಂಟುಮಾಡಿದ ಪಠಾಣರನ್ನು ಜಯಿಸಲಿಕ್ಕೆ ತೋಡರಮಲ್ಲನೊಡನೆ ಬಹ ಳಸೈನ್ಯವನ್ನು ಕೊಟ್ಟು ಕಳಿಸಿದ್ದೇನೆ ಅವನು ಒಳ್ಳೆ ವೀರತನದಿಂದ ಕಾದಿ ಪಠಾಣರನ್ನು ಸೋಲಿಸಿ ಹಿಂದಿರುಗಿ ಬರಬಹುದು ನಾನು ಇನ್ನು ಸ್ವಲ್ಪದಿ ವಸದೊಳಗಾಗಿ ನಿಮ್ಮ ದೇಶದಕಡೆಗೆ ಬರುವೆನು. ”

ರಾಜಾ ಬೀರಬಲನಮೇಲೆ ಅಕಬರನಪ್ರೀತಿಯು ಎಷ್ಟಿತ್ತೆಂಬದನ್ನು " ಜುಲೂಸ ಉಂತೀಸ” ಎಂಬ ಗ್ರಂಥದಲ್ಲಿ ಈಪ್ರಕಾರ ವರ್ಣಿಸಿದ್ದಾನೆ.
"ಸಂವತ್‌ ೧೬೪೦ ರಲ್ಲಿ ಒಂದುದಿವಸ ಬಾದಶಹನೂ ಬೀರಬಲನೂ ಕೂಡಿ ಆನೆಯ ಕಾಳಗವನ್ನು ನೋಡುತ್ತ ಕುಳಿತುಕೊಂಡಿದ್ದರು, ಆ ಆನೆಗಳಲ್ಲಿ "ದಲಚಾತುರ ” ಎಂಬ ಆನೆಯು ಮನುಷ್ಯರನ್ನು ಕೊಲ್ಲುವದರಲ್ಲಿ ಒಳ್ಳೆ ಹೆಸರಾಗಿತ್ತು, ಅದು ಒಮ್ಮಿಂದೊಮ್ಮೆ ಹಿಂದಿರುಗಿ ಬೀರಬಲನ ಕಡೆಗೆ ತಿರುಗಿತು, ಮತ್ತು ಆ ಕೂಡಲೆ ಬೀರಬಲನನ್ನು ತನ್ನ ಸೊಂಡೆಯಿಂದ ಹಿಡಿ ದು ತಿರುಗಿಸಿ ಹೊಡೆಯಬೇಕೆನ್ನುವಷ್ಟರಲ್ಲಿ ಬಾದಶಹನು ತನ್ನ ಹತ್ತಿರ ನಿಂತಿದ್ದ ತಿವಾಯಿಯ ಕೈಯೊಳಗಿನ ಕತ್ತಿಯನ್ನು ಕಿತ್ತುಕೊಂಡು ಆ ಆನೆ ಯ ಕುಂಡಾಗ್ರದಲ್ಲಿ ಹೊಡೆದು ಬೀರಬಲನನ್ನು ಬದುಕಿಸಿಕೊಂಡನು. ಬೀರ ಬಲನು ಸತ್ತುಹೋದಮೇಲೆ ಕೆಲವು ದಿವಸ ಬಾದಶಹನು ದರಬಾರಕ್ಕೆ ಹೋ ಗುವದನ್ನೂ ಪರದೇಶದ ವಕೀಲರೊಡನೆ ಸಂಭಾಷಣೆ ಮಾಡುವದನ್ನೂ ಟ್ಟು ಬಿಟ್ಟಿದ್ದನು. ”

"ಇಕಬಾಲ ಜಹಾಂಗಿರಿ ” ಎಂಬ ಗ್ರಂಥದಲ್ಲಿ ಬರದದ್ದೇನಂದರೆ;- "ಅಕಬರನು ಸಿಂಹಾಸನಾರೂಢನಾದ ದಿವಸದಿಂದ ಬೀರಬಲನ ಮರಣದ ವಾರ್ತೆಯನ್ನು ಕೇಳಿದ ದಿವಸದತನಕ ಅವನಮೇಲೆ ಒಂದು ದಿವಸವಾದರು ದುಃಖದ ಪ್ರಸಂಗವು ಬಂದಿದ್ದಿಲ್ಲ, ಬಾದಶಹನು ಬೀರಬಲನ ಮೃತ್ಯುವಿನ ಶೋಕದಲ್ಲಿ ಕೆಲವು ಕವಿತೆ (ಮರಸಿ) ಗಳನ್ನು ಮಾಡಿದ್ದಾನೆ ಅವುಗಳಲ್ಲಿ ಎರಡು ಶ್ಲೋಕಗಳನ್ನು ಇದರಡಿಯಲ್ಲಿ ಬರೆದಿರುವೆನು.