ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೮

ಈ ಪುಟವನ್ನು ಪ್ರಕಟಿಸಲಾಗಿದೆ
(೫)
ಅಕಬರ ಬೀರಬಲರ ಚಾತುರ್ಯವಾದ ವಿನೋದ ಕಥೆಗಳು.
೩೩


ಅಂದದ್ದೇನಂದರೆ- “ ವಾಹಾವ್ವಾ  ? ಕವಿರಾಜ ಬಹಳೇ ಉತ್ತಮವಾದ ಪಠ್ಯ ವನ್ನು ರಚಿಸಿರುವಿರಿ ಪ್ರಾಸಗಳೂ ಅನುಪ್ರಾಸಗಳೂ ಸರಿಯಾಗಿ ಕೂಡಿವೆ, ನೀವು ನಾಳೆ ನನಗೆ ಬೆಟ್ಟಿಯಾಗಿರಿ ಅಂದರೆ ನಿಮ್ಮ ಮನಸ್ಸನ್ನು ತೃಪ್ತಿ ಬಡಿ ಸುವೆನು ” ಎಂದು ಮಧುರವಚನಗಳಿಂದ ಸತ್ಕರಿಸಿ,ಕವಿಯನ್ನು ಕಳುಹಿಸಿ ಕೊಟ್ಟನು ಆ ಕವಿಗೆ ತುಂಬಾ ಆನಂದವಾಯಿತು.
ಮರುದಿವಸ ಆ ಕವಿಯು ಪುನಃ ಆ ಲೋಭಿಯ ಬಳಿಗೆಬಂದನು ಆಗ ಲೋಭಿಯು ಏನೂ ಅರಿಯದವನಂತೆ ನಟಿಸಿ, “ ನೀವು ಯಾರು ? ಇಲ್ಲಿಗೆ ಯಾತಕ್ಕೆ ಬಂದಿರಿ ” ಎಂದು ಪ್ರಶ್ನೆ ಮಾಡಿದನು, ಆಗ ಕವಿಯು ನಾನುನಿನ್ನೆ ತಮ್ಮ ಸ್ತುತಿಯುಕ್ತವಾದ ಒಂದು ಪದ್ಯವನ್ನು ರಚಿಸಿ ತಮ್ಮೆದುರಿಗೆ ಹೇಳಿ ದ್ದೆನು, ಆ ಕವನದಿಂದ ತಾವು ಹರ್ಷಚಿತ್ತರಾಗಿ ನಾಳಿಗೆ ಬರಬೇಕೆಂದು ಅಪ್ಪ ಣೆಮಾಡಿದಿರಿ ಇವರಲ್ಲಿ ನನ್ನ ಪರಿಚಯವನ್ನು ಮರೆತುಬಿಟ್ಟರಾ ! ಎಂದು ಕೇಳಿದನು. ಕೂಡಲೆ ಲೋಭಿಯು ಅನ್ನುತ್ತಾನೆ:- ನಿನ್ನಿನ ಮಾತು ನಿನ್ನೆ ಆಗಿಹೋಯಿತು, ಈ ದಿವಸ ಆ ಮಾತಿನಿಂದ ಪ್ರಯೋಜನವೇನು ? ನೀವು ನಿನ್ನೆ ಪದ್ಯವನ್ನು ಹೇಳಿ ನನ್ನ ಮನಸ್ಸನ್ನು ಸಂತೋಷಪಡಿಸಿದಂತೆ ನಾನಾ ದರೂ ಮಾತಿನಿಂದಲೇ ನಿಮ್ಮನ್ನು ತೃಪ್ತಿಗೊಳಿಸಿ ಅಪ್ಪಣೆ ಕೊಟ್ಟು ಬಿಟ್ಟಿದ್ದೆನು, ನೀವು ಮಾಡಿದಂತೆ ನಾನಾದರೂ ಮಾಡಿಬಿಟ್ಟಿದ್ದೇನೆ. ” ಎಂದು ನುಡಿಯಲು ಭಗ್ನ ಮನೋರಥನಾಗಿ ಕವಿಯು ಹಿಂದಕ್ಕೆ ಬಂದನು.
ಮುಂದೆ ಒಂದುದಿವಸ ಆ ಕವಿಯ ಸ್ನೇಹಿತನೊಬ್ಬನು ದಿಲ್ಲಿಗೆ ಬಂದನು, ಅವನೆದುರಿಗೆ ಆ ಲೋಭಿಯ ಸಂಗತಿಯನ್ನು ಹೇಳುತ್ತ ನಿಂತುಕೊಂಡಿದ್ದನು ಅಷ್ಮರಲ್ಲಿ ಬೀರಬಲನು ಅಲ್ಲಿಗೆ ಬಂದನು, ಅವರು ಮಾತಾಡುತ್ತಿರುವ ಮಾತುಗಳೆಲ್ಲ ಇವನಿಗೆ ಕೇಳಬಂದವು ಆಗ ಅವನು ಮುಂದೆಬಂದು, ನೀವಿ ಬ್ಬರೂ ಕೂಡಿಕೊಂಡು ಏನೇನು ಮಾತಾಡುತ್ತಿರುವಿರಿ ! ನನ್ನೆದುರಿಗೆ ಹೇ ಳುವದಕ್ಕೆ ಸಾಧ್ಯವಿದ್ದರೆ ಹೇಳಬಹುದು " ಎಂದು ಕೇಳಿದನು ಅವರಿಬ್ಬರೂ ಬೀರಬಲನನ್ನು ಗುರುತಿಸಿದರು ಅವನೆದುರಿಗೆ ಯಾವತ್ತೂ ಸಂಗತಿಯನ್ನು ವಿಶದಪಡಿಸಿದರು, ಆಗ ಅವರಿಬ್ಬರನ್ನೂ ಕರೆದುಕೊಂಡು ಬೀರಬಲನು ತನ್ನ ಮನೆಗೆ ಬಂದನು.
ಮನೆಗೆ ಬಂದಮೇಲೆ ಬೀರಬಲನು ಆ ಕವಿಯನ್ನು ಕುರಿತು, “ ಕವಿ ರಾಜ ! ನೀನು ಈ ದಿವಸದಿಂದ ನಾಲ್ಕೈದು ದಿವಸಗಳಾದಮೇಲೆ ಈ ನಿಮ್ಮ ಮಿತ್ರನನ್ನು ಲೋಭಿಮನುಷ್ಯನ ಮನೆಗೆ ಕಳುಹಿಕೊಡಿರಿ ಇವರು ಹೋ ಗಿ ಅವನೊಡನೆಯೇ ಸಲಿಗೆಯನ್ನು ಬೆಳೆಸಲಿ, ಈಪ್ರಕಾರ ಪರಸ್ಪರರಲ್ಲಿ