ಷ್ಟೆ ಮಾಡಿದ್ದೆಲ್ಲಿ ? ಕಷ್ಟವುಂಟಾದದ್ದು ಯಾರಿಗೆ ? ಎಲ್ಲವೂ ಚಮತ್ಕಾರವಾಗಿಯೇ ಕಾಣುತ್ತದೆ, ಈಪ್ರಕಾರ ಕೇಳುವವನು ನೀನು ಯಾರು ?" ಎಂದು ಸಿಟ್ಟಿಗೆದ್ದು ಕೇಳಿದನು. ಆಗ ಬೀರಬಲನು ಹೇಳುತ್ತಾನೆ;- "ನಾನು ಬೀರಬಲನು, ಇದೋ ನಿನ್ನಿಂದ ಅವಮಾನಿತನಾದ ಕವಿಯೇ ಇವನು, ಇವನನ್ನು ನೀನು ಈಗ ಪ್ರಸನ್ನೀಕರಿಸಿಕೊಳ್ಳದಿದ್ದರೆ ನಿನಗೆ ಯೋಗ್ಯವಾದ ದಂಡನೆಯನ್ನು ವಿಧಿಸುವೆನು” ಎಂದು ಹೇಳಿದ ಕೂಡಲೆ ಲೋಭಿಯು ಕೆಲವು ರೂಪಾಯಿಗಳನ್ನು ಆ ಕವಿಗೆ ಕೊಟ್ಟು ಪ್ರಸನ್ನನಾಗಿ ಮಾಡಿಕೊಂಡನು
-(೯. ಕನ್ನಡಿಯಲ್ಲಿ ಚಿತ್ರ)-
ದಿಲ್ಲಿಯಲ್ಲಿ ಒಬ್ಬ ಧನವಂತನಾದ ಗೃಹಸ್ಥನಿದ್ದನು. ಅವನು ತನ್ನ ಅವಯವಗಳನ್ನು ಬೇಕಾದ ಹಾಗೆ ಹೆಚ್ಚು ಕಡಿಮೆ ಮಾಡಿಕೊಳ್ಳುವ ಸಾಧನೆಯನ್ನು ಅರಿತವನಾಗಿದ್ದನು. ಅವನು ಒಂದು ದಿವಸ ಒಬ್ಬ ಚತುರನಾದ ಚಿತ್ರಲೇಖನನ್ನು ಕರೆದು ತನ್ನ ಭಾವಪಟವನ್ನು ಸರಿಯಾಗಿ ತೆಗೆದುಕೊಂಡುಬಾ ಎಂದು ಅಪ್ಪಣೆಯನ್ನಿತ್ತನು. ಆ ಚಿತ್ರಗಾರನು ಅದರ ಮೌಲ್ಯವನ್ನು ಗೊತ್ತು ಮಾಡಿಕೊಂಡು ಸ್ವಲ್ಪ ದಿವಸಗಳಲ್ಲಿಯೇ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೊರಟುಹೋದನು. ಮುಂದೆ ಕೆಲವು ದಿವಸಗಳಾದ ಮೇಲೆ ಚಿತ್ರವನ್ನು ಸಿದ್ಧಪಡಿಸಿಕೊಂಡು ಆ ಧನವಂತನ ಬಳಿಗೆ ಬಂದನು. ಆಗ ಸಾವುಕಾರನು ತನ್ನ ರೂಪದಲ್ಲಿ ಹೆಚ್ಚು ಕಡಿಮೆ ಮಾಡಿಕೊಂಡು ತನ್ನ ರೂಪಕ್ಕೂ ಆ ಚಿತ್ರಕ್ಕೂ ಸರಿಯಾಗಿಲ್ಲವೆಂದು ಹೇಳಿದನು. ಆಗ ಚಿತ್ರಗಾರನಿಗೆ ಅತ್ಯಾಶ್ಚರ್ಯವಾಯಿತು ಕೂಡಲೆ ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಎರಡನೆ ಭಾವಪಟವನ್ನು ತೆಗೆದುಕೊಂಡು ಬರುತ್ತೇನೆಂದು ಹೇಳಿ ಮನೆಗೆ ಬಂದನು. ಮುಂದೆ ನಾಲ್ಕಾರು ದಿವಸಗಳಲ್ಲಿ ಒಳ್ಳೆ ಶ್ರಮಪಟ್ಟು ಮತ್ತೊಂದು ಚಿತ್ರವನ್ನು ಬರೆದುಕೊಂಡು ಬಂದನು. ಆಗ ಸಹ ತನ್ನ ಮುಖಚಹರೆಯನ್ನು ಪರಿವರ್ತನ ಮಾಡಿಕೊಂಡು ಸರಿಯಾಗಿಲ್ಲವೆಂದು ಹೇಳಿ ಹಿಂದಕ್ಕೆ ಕಳುಹಿಬಿಟ್ಟನು. ಈಪ್ರಕಾರ ಚಿತ್ರಗಾರನು ಯಾವ ಯಾವಾ ಚಿತ್ರವನ್ನು ತಂದು ತೋರಿಸಹತ್ತಿದನೋ ಆಗ ತನ್ನ ರೂಪದಲ್ಲಿ ಪರಿವರ್ತನಮಾಡಿಕೊಂಡು ಸರಿಯಾಗಿಲ್ಲ ಎಂದು ಹೇಳಿ ಹಿಂದಕ್ಕೆ ಕಳುಹಿಸುತ್ತಿದ್ದನು. ಈಪ್ರಕಾರ ತನ್ನ ಪ್ರಯತ್ನವು ನಿಷ್ಪಲವಾಗ ಹತ್ತಿದ್ದನ್ನು ಕಂಡು ಚಿತ್ರಗಾರನು ಬೇಸತ್ತು, ತನ್ನ ಶ್ರಮದ ಫಲವನ್ನು ಕೊಡಬೇಕೆಂದು ಕೇಳಿದನು. ಆಗ ಧನವಂತನು - ನೀನು ಭಾವಪಟವನ್ನೇ ಸರಿಯಾಗಿ ಲೇಖನಮಾಡಿಕೊಂಡು ಬರಲಿಲ್ಲ, ನಾನು ಕ್ರಯ