ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೨

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೩೭


ಯಾ ಈಮಾತು ನಿನಗೆ ಲಾಂಛನಾಸ್ಪದವಲ್ಲವೇ? ಹೀಗೆಮಾಡಬೇಡ ಇವನ ಶ್ರಮದ ಫಲವನ್ನು ಸರಿಯಾಗಿ ಮುಟ್ಟಿಸು? ಇಲ್ಲವಾದರೆ ನ್ಯಾಯಾಧೀಶನ ಬಳಿಗೆನಡೆ?" ಎಂದು ಒತ್ತಾಯಮಾಡಿದರು. ಆಗ ಆ ಠಕ್ಕನು ಅನ್ನುತ್ತಾನೆ

"ನನ್ನನ್ನು ನ್ಯಾಯಾಸ್ಥಾನಕ್ಕೆ ಕರೆದೊಯ್ಯುವದಕ್ಕೆ ನೀವುಯಾರು?" ಎಂ ದು ಕೇಳಿದನು. ಆಗ ಅವರಿಬ್ಬರು ತಮ್ಮ ಮೇಲುಹೊದಿಕೆಗಳನ್ನು ತೆಗೆದುಚಲ್ಲಿ ಕೊಟ್ಟು ನಿಂತುಕೊಂಡರು. ಆಗ ಅವರನ್ನು ನೋಡಿ ಗಾ ಬರಿಯಾಗಿ ಧನ ವಂತನು ಹಣವನ್ನು ಕೊಡುತ್ತೇನೆಂದು ಬಹುಸರಿಯಾಗಿ ಹೇಳಿಕೊಳ್ಳಹತ್ತಿ ದನು, ಅದಕ್ಕೆ ಕಣ್ಮಚಾರಿಗಳಿಬ್ಬರೂ ಸಮ್ಮತಿಸದೆ, ಅವನನ್ನು ಬೀರಬಲನ ಕಡೆಗೆ ಕರೆದುಕೊಂಡು ಹೋದರು, ಕೂಡಲೆ ಬೀರಬಲನು. " ಇವನ ಬೆನ್ನ ಮೇಲೆ ವೃಣಗಳಾಗುವಂತೆ ಒಳಿತಾಗಿ ಹೊಡೆಯಿರಿ" ಎಂದು ಅಪ್ಪಣೆ ಮಾಡ ಲು, ಇಬ್ಬರು ಕಣ್ಮಚಾರಿಗಳು ಕೈಯೊಳಗೆ ಕ್ಷೇತ್ರಾಯುಧವನ್ನು ಹಿಡಿದು ಕೊಂಡುಬಂದು ನಿಂತರು. ಸಾವುಕಾರನು ಭಯಗ್ರಸ್ತನಾಗಿ ತನ್ನ ತಪ್ಪಿತ ವನ್ನೊಪ್ಪಿಕೊಂಡನು. ಕೂದಲೇ ಅವನಿಗೆ ಕಾರಾಗೃಹದ ತೀಕ್ಷೆಯನ್ನು ಕೊಟ್ಟು ಚಿತ್ರಗಾರನಿಗೆ ಸರಿಯಾ ಮೂಲ್ಯವನ್ನು ಕೊಡಿಸಿ, ಕಳುಹಿಸಿ ಕೊಟ್ಟನು.

( ೧೦. ವ್ಯಸನಿಯಾದವನ ವ್ಯಸನ )

ಒಂದುದಿವಸ ಸಾಯಂಕಾಲದ ಮುಂದೆ ಬಾದಶಹನೂ ಬೀರಬಲನ ಪ್ರಚ್ಛನ್ನ ವೇಷದಾರಿಗಳಾಗಿ ನಗರಸಂಚಾರಕ್ಕೆ ಹೊರಟರು, ಆಗ ಒಂದು ಒಣಿಯಲ್ಲಿ ಒಬ್ಬ ಭಿಕ್ಷೆಯವಳು ನಿಂತುಕೊಂಡಿದ್ದಳು, ಅವಳ ಸಮೀಪಕ್ಕೆ ಯಾರಾದರೂ ಹಾಯ್ದು ಹೋದರೆ ದುರ್ವಾಸನೆಯು ಬರದೆ ಇರುತ್ತಿದ್ದಿಲ್ಲ. ಅವಳು ಅತಿಕುರೂಪಿಣಿ ಯಾದದ್ದಲ್ಲದೇ ಗರ್ಭಿಣಿಯಾಗಿದ್ದಳು. ಅವಳನ್ನು ನೋಡಿ ಬಾದಶಹನು ಆರಾತನಾಗಿ ಬೀರಬಲನಿಗೆ;- ಕಾಮದೇವನ ಲೀಲೆಯು ಅತಿ ಪ್ರಬಲತರದಾದದ್ದು? ಈ ಸ್ತ್ರೀಯಳಸಮೀಪಕ್ಕೆ ಹಾಯ್ದು ಹೋದರೆ ದುರ್ಗಂಧಿಯು ಪ್ರಾಂಣೇಂದ್ರಿಯಕ್ಕೆ ತಗಲುತ್ತದೆ; ಹೀಗಿದ್ದು ಇವಳೊಡನೆ ವಿಲಾಸವನ್ನು ಅನುಭೋಗಿಸಿದ ಪ್ರಾಣಿಯು ಯಾವನಿರ ಬಹುದು?

ಅದಕ್ಕೆ ಬೀರಬಲನು ಅನ್ನು ತಾನೆ, ಮನುಷ್ಯನು ಒಮ್ಮೆ ವ್ಯಸನಾ ಧೀನನಾದ ನಂದರೆ ಆ ವ್ಯಸನವು ಅವನನ್ನು ಯಾವಜೀವ ಪರಿಯಂತರ ಬಿಡುವದಿಲ್ಲ. ಹ್ಯಾಗಂದರೆ ಬುಧುಕ್ಷಿತನಾದವರಿಗೆ ಹಳಸಿದ ಅನ್ನವು ಸಂ