ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೫೪

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ಏರೋ ಕಥೆಗಳು.
೩೯

ಬಿತ್ತು ಆಗ ಇವನ ಕೈಯಲ್ಲಿ ತಂಬಾಕವಿತ್ತು ಆದರೆ ಸುಣ್ಣವಿದ್ದ್ಲಿಲ್ಲ, ಅಷ್ಟರಲ್ಲಿ ಅದೇ ಸುಣ್ಣವನ್ನು ಹಚ್ಚಿದ ಒಂದು ಪಾಯಖಾನೆಯ ಗೋಡೆಯು ದೃಪ್ಟಿಗೆ ಬಿತ್ತು. ಕೂಡಲೆ ಇವನು ತ್ಯರ್ಯದಿಂದ ಅಲ್ಲಿಗೆ ಹೋಗಿ ಬೆರಳಿನಿಂದ ಗೋಡೆಯನ್ನು ಕೆದರಿ ತಂಬಾಕಕ್ಕೆ ಹಚ್ಚಿಕೊಂಡು ಬಾಯಿಯೊಳಗೆ ಹಾಕಿಕೊಂಡನು. ಇಂಥ ಹೊಲಸು ಸ್ಥಳದಲ್ಲಿಯ ಸುಣ್ಣವನ್ನು ತೆಗೆದುಕೊಳ್ಳಲಿಕ್ಕೆ ಯಾವ ಮನುಷ್ಯನು ಹಿಂದು ಮುಂದು ನೋಡಲಿಲ್ಲವೋ, ಅಂಥ ಮನುಷ್ಯನು ಎಂಥ ಸ್ತ್ರೀಯ ಮೇಲಾದರೂ ಲಂಪಟನಾಗಬಹುದೆಂದು ಯೋಚಿಸಿದೆನು ಎಂದು ಹೇಳಿದನು.

ಬಾರಹನು ಬೀರಬಲನ "ಅವಲೋಕನಾ ಚಾತುರ್ಯ"ಕ್ಕೆ ಬೆರಗಾಗಿ ಸಂತೋಷವನ್ನು ಪ್ರಕಟಪಡಿಸಿದನು.

-( ೧೧. ಬೀರಬಲನ ವಣ೯.)-

ಬೀರಬಲನು ಸ್ವಲ್ಪ ಶ್ಯಾಮ ವರ್ಣದವನಿದ್ದನು. ಒಂದು ದಿವಸ ಓಲಗದಲ್ಲಿ ಮನುಷ್ಯರ ಸುಂದರತನದ ವಿಷಯವಾಗಿ ಚರ್ಚೆಯು ನಡೆದಿತ್ತು. ಆಗ ಬೀರಬಲನು ಓಲಗಕ್ಕೆ ಬರಲು, ಎಲ್ಲರೂ ಅವನನ್ನು ನೋಡಿ ಹಾಸ್ಯ ಮಾಡಹತ್ತಿದರು, ಇದರ ಕಾರಣವನ್ನು ತಿಳಿದುಕೊಳ್ಳಬೇಕೆಂಬ ಯೋಚನೆ ಬಂತು, ಆದರೂ ಮನಸ್ಸನ್ನು ಸ್ಥಿರಪಡಿಸಿಕೊಂಡು ಸಮಯ ನೋಡಿಕೊಂಡು ಬಾದಶಹನಿಗೆ ಅನ್ನುತ್ತಾನೆ:-"ಪೃಧ್ವಿನಾಥ, ಈ ಹೊತ್ತು ಬಹಳೇ ಆನಂದದಲ್ಲಿ ಇದ್ದಂತೆ ಕಂಡುಬರುತ್ತದೆ”. ಬಾದಶಹನು ಸ್ವಲ್ಪ ನಕ್ಕು "ನಿಮ್ಮ ಕುರೂಪತೆಯನ್ನು ನೋಡಿ ಇವರೆಲ್ಲರೂ ಹಾಸ್ಯವಾಡಹತ್ತಿದ್ದಾರೆ. ನಾವೆಲ್ಲರೂ ಗೌರಾಂಗರಾಗಿದ್ದು ನೀನು ಮಾತ್ರ ಶ್ಯಾಮಾಂಗನಾಗಿರುವದು ಯಾಕೆ ?" ಎಂದು ಪ್ರಶ್ನೆ ಮಾಡಿದನು.

ಬೀರಬಲ - "ಇದರ ಕಾರಣವು ನಿಮಗೆ ವಿದಿತವಾಗಿರುವದಿಲ್ಲವೋ"

ಬಾದಶಹ - "ನನಗೆ ಈ ಕಾರಣವು ವಿದಿತವಾಗಿಲ್ಲ. ಹೀಗಾಗಿದ್ದ ಕಾರಣವೇನು ?"

ಬೀರಬಲ- "ಪರಮೇಶ್ವರನು ಸೃಷ್ಟಿಯ ನಿರ್ಮಾಣ ಮಾಡಲು ಸಿದ್ಧನಾಗಿ ಪ್ರಥಮದಲ್ಲಿ ವೃಕ್ಷಗಳನ್ನು ನಿರ್ಮಿಸಿದನು. ಅದರಿಂದ ಅವನ ಮನಸ್ಸು ತೃಪ್ತವಾಗಲಿಲ್ಲ. ಆಮೇಲೆ ಪಕ್ಷಿಗಳನ್ನು ನಿರ್ಮಾಣ ಮಾಡಿದನು. ಅದರಿಂದ ಅವನಿಗೆ ಸ್ವಲ್ಪ ಕಾಲ ಆನಂದವುಂಟಾಯಿತು. ಮುಂದೆ ಈ ಪ್ರಾಣಗಳಲ್ಲಿ ಇನ್ನೂ ಕೆಲವು ಶ್ರೇಷ್ಠವಾದ ಪ್ರಾಣಗಳನ್ನು ಸೇರಿ