ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭೧

ಈ ಪುಟವನ್ನು ಪ್ರಕಟಿಸಲಾಗಿದೆ
೫೬
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ಮಾಣಗಳನ್ನು ತೋರಿಸಿ ಕೊಟ್ಟರೂ, ಅವುಗಳಮೇಲೆ ತಮ್ಮ ವಿಶ್ವಾಸವುಂ ಟಾಗಲಿಲ್ಲ ಉಪಾಯವಿಲ್ಲ ?” ಎಂದನು.
ಆಗ ಬಾದಶಹನು ಕ್ರುದ್ಧನಾಗಿ ಇನ್ನು ನಿನಗೆ ಮರಣವು ತಪ್ಪದು, ನಿನ್ನ ಮೃತ್ಯವು ಸಮೀಪಿಸಿತು ಎಲೈ ಅಲ್ಲಿ ಯಾರಿದ್ದೀರಿ ? ತಲೆಹೊಡೆಯುವವರನ್ನು ಕರೆ, ಎಂದು ಅಪ್ಪಣಿಮಾಡಿದನು ಆಗ ಬೀರಬಲನು ಇನ್ನುಈ ಪ್ರಸಂಗವನ್ನು ಹೆಚ್ಚು ಬಲಿಯ ಗೊಡಬಾರದು ಅದರಿಂದ ಏನೂ ಪ್ರಯೋಜನವಾಗುವದಿಲ್ಲ ” ಎಂದು ನಿಶ್ಚಯಿಸಿ, ಆ ವೀರನ ಗೋರಿಗೆ ಅಡ್ಡಬಿದ್ದು, “ ಯಕೀನಶಾಹ ಪೀರನೇ ಈ ದಿವಸ ನಾನು ಜೀವದಿಂದ ಪಾರಾಗಿ ಬದುಕಿ ಕೊಂಡರೆ, ನಿನ್ನ ಮಕಾನವನ್ನು ಕಟ್ಟಿಸಿ ಕೊಡುವೆನು ” ಎಂದು ಬೇಡಿಕೊಂಡನು ಬೀರಬಲನು ಪ್ರಾರ್ಥಿಸಿ ಕೊಂಡದ್ದನ್ನು ಕೇಳಿಬಾದಶಹನಿಗೆ ನಗೆಯು ಬಂತು ನಕ್ಕನು. ಆಮೇಲೆ ಬೀರಬಲನನ್ನು ಕುರಿತು “ ಯಾಕೆಬೀರಬಲ ! ಈಗ ತಿಳುವಳಿಕೆಯುಂಟಾದಂತೆ ಕಾಣುತ್ತದೆ, ಕಡೆಗೆ ನಾನು ಹೇಳಿದ ಮಾತು ಸಿದ್ಧವಾಯಿತವೆ ? ಎಂದನು ಆಗ ಬೀರಬಲನು ಜೀಹಾ? ನಾನು ಅಂತ್ಯದಲ್ಲಿ ಯಕೀನಶಾಹನನ್ನು ಬೇಡಿಕೊಳ್ಳಬೇಕಾಗಿಬಂತು ಎಂದು ಹೇಳಿ ಆ ಗೋರಿಯ ಸಮೀಪಕ್ಕೆ ಹೋಗಿ, ಮಧ್ಯದಲ್ಲಿ ಕೂಡ್ರಿಸಿದ ಹಾಸುಗಲ್ಲನ್ನು ಮೇಲಕ್ಕೆಬ್ಬಿಸಿ, ಅದರೊಳಗಿಂದ ಆ ರೇಶಿಮೆಯ ವಸ್ತ್ರದ ಗಂಟನ್ನು ಹೊರಗೆ ತೆಗೆದನು ಅದನ್ನು ನೋಡಿ ಬಾದಶಹನಿಗೆ ಅತ್ಯಾಶ್ಚ ವಾಯಿತು ಆಗ ಬಾದಶಹನು ಪ್ರಶ್ನೆ ಮಾಡುತ್ತಾನೆ. " ಬೀರುಬಲ ! ಇದು ಏನು ” ಬೀರಬಲನು ಉತ್ತರಕೊಡುತ್ತಾನೆ, “ಇದು ತಮ್ಮ ಯಕೀನಶಹಾ ಪೀರನು “ ಎಂದು ಹೇಳಿ ಸುತ್ತಿದವಸ್ತ್ರವನ್ನು ಬಚ್ಚಿದನು. ಆಗ ಅದರಲ್ಲಿ ಹೊರಟ ಪಾದರಕ್ಷೆಯನ್ನು ಕಂಡು ಲಜ್ಜಿತನಾದನು ಆಗ ಬೀರಬಲನು ಕೇಳುತ್ತಾನೆ, “ಮಹಾರಾಜ ಯಾಕೆ ಮುಖವನ್ನು ತಗ್ಗಿಸಿದಿರಿ ದೇವರು ಅಧಿಕವಾದದ್ದೋ ಅಥವಾ ವಿಜ್ಞಾನವು ಅಧಿಕವಾದದ್ದೋ ? ಎಂಬದನ್ನು ಹೇಳಿರಿ ನಮ್ಮಲ್ಲಿ ವಿಶ್ವಾಸವೇ ಹುಟ್ಟದಿದ್ದ ಮೇಲೆ ಯಾವ ದೇವರು ಏನು ಮಾಡು ವನು ? ಆದ್ದರಿಂದ ವಿಶ್ವಾಸವು ಅಧಿಕವಾದದ್ದು “ ಭಕ್ತಿಯೇ ಮುಕ್ತಿಯ ಸಾಧನ ?” ವೆಂಬ ನಾಣ್ಣುಡಿಯು ಇದಕ್ಕೋಸುಗವೆ ಉಂಟಾಗಿದೆ ಎಂದು ಹೇಳಿದನು.
ಈ ಮಾತಿಗೆ ಬಾದಶಹನು ಒಪ್ಪಿಕೊಂಡಿದ್ದನು ಯಕಿಶಾಹನ ಹೆಸರಿನಮೇಲೆ ಅಲ್ಲಿ ಬಹಳ ದ್ರವ್ಯಸಂಚಯವಾಗಿತ್ತು ಆ ಹಣದಿಂದ ಅಲ್ಲಿ ಬೀರಬಲನು ಅದೇವರ ಹೆಸರನ್ನಿಟ್ಟು ಒಂದು ಮಸೀದಿಯನ್ನು ಕಟ್ಟಿಸಿದನು.