ಪ್ರಾಣರಕ್ಷಣೆಯ ವಿಷಯದಲ್ಲಿ ನಂಬಿಗೆಯನ್ನಿತ್ತಿದ್ದ ಸಭಾಸದರ ಹೀನಸ್ಥಿತಿಯನ್ನು ಕಂಡ ಮೇಲಂತೂ, ಬಾದಶಹನಿಗೆ ಅತಿಶಯ ನಗೆಯು ಬಂತು ಎಲ್ಲವೃತ್ತಾಂತವನ್ನು ಕೇಳಿದಮೇಲೆ ಕವಿ ಗಂಗನಿಗೆ ಕ್ಷಮಿಸಿ ಬಿಟ್ಟನು. ಮೃ ತ್ಯುವಿನ ಬದಲು ಪಾರಿತೋಷಕವು ಸಿಕ್ಕಿತು. ಅಗ ಬಾದಶಹನು ಅನ್ನುತ್ತಾನೆ, "ಕವಿರಾಜ ! ಇನ್ನು ಮೇಲಾದರೂ, ಪರರು ಹೇಳಿದ ಸವಿಮಾತುಗಳನ್ನು ನಂಬದೆ ಅದರಲ್ಲಿ ಯೋಗ್ಯವಾದದ್ದು ಯವುದು ಅಯೋಗ್ಯವಾದದ್ದು ಯಾವದು ? ಎಂಬ ಸಂಗತಿಯನ್ನು ಚನ್ನಾಗಿ ವಿಚಾರಮಾಡಿಕೊಂಡು ಯಾವದಾದರೂ ಕಾರ್ಯಕ್ಕೆ ಕೈಹಾಕಬೇಕು ” ಎದು ಬುದ್ಧಿವಾದವನ್ನು ಹೇಳಿ ಸಭಾಸದರನ್ನು ಕುರಿತು ಹೇಳಿದ್ದೇನಂದರೆ, "ನಿರಪರಾಧಿಯಾದ ಈ ಕವಿಯನ್ನು ಸಂಕಟಕ್ಕೆ ಗುರಿಮಾಡಿದ್ದಿರಿ ! ಅವನನ್ನು ಬದುಕಿಸಿಕೊಳ್ಳುವ ಯತ್ನವು ನಿಮಗೆ ತಿಳಿಯಿದೆ ಹೋಯಿತು ” ಎಂದನು ಆಗ ಬೀರಬಲನು ಅನ್ನುತ್ತಾನೆ- “ ಪೃಥ್ವಿನಾಥ ! ಗಂಗಕವಿಯು ಮಹಾ ಪರೋಪಕಾರಿಯಾಗಿದ್ದಾನೆ; ಇವನು ಸಾವಿರಾರು ಜನರ ಪ್ರಾಣವನ್ನು ರಕ್ಷಿಸುವದಕ್ಕಾಗಿ ತನ್ನ ಪ್ರಾಣವನ್ನು ಸಂಕಟಕ್ಕೆ ಗುರಿ ಮಾಡಿದ್ದನು ಇದಲ್ಲದೆ ನೀವು ಒಳ್ಳೇ ವಿಚಾರ ಪರರಾಗಿರುವಿರಿ ! ಪರಿಣಾಮದ ಕಡೆಗೆ ಲಕ್ಷ್ಯ ಕೊಡುವವರು ಆಗಿರುವಿರಿ ! ನೀವು ಬಂದೂ ಗಂಗಕವಿಯ ಮೇಲೆ ಸಿಟ್ಟಾಗಲಾರಿರಿ; ಎಂಬ ಸಂಗತಿಯನ್ನು ನಾವು ತಿಳಿದು ಕೊಂಡದ್ದರಿಂದಲೇ ನಾವು ನಡುವೆ ಬಾಯಿ ಹಾಕಲಿಲ್ಲ ನಾವು ಈ ವಿಷಯದಲ್ಲಿ ಏನಾದರೊಂದು ಮಾತಾಡಿದ್ದರೆ, ನಿಮಗೆ ಅಧಿಕವಾದ ಕೋಪವು ಉಂಟಾಗುತ್ತಿತ್ತು. ಅದರಿಂದಲೇ ನಾವು ಒಂದು ತು ಟಿಯನ್ನು ಎರಡು ಮಾಡಲಿಲ್ಲ ” ಎಂದು ಹೇಳಿದನು ಆ ದಿವಸದಿಂದ ಬಾದಶಹನು ನಿತ್ಯದಲ್ಲಿ ದರಬಾರಕ್ಕೆ ಬರಹತ್ತಿದನು.
- (೨೨. ವೇಶ್ಯಯ ಗೃಹದಲ್ಲಿದ್ದ ಬಡವನ ಮಗಳು )-
ದಿಲ್ಲಿಯಲ್ಲಿ ಒಬ್ಬ ಬಡವನಾದ ಮನುಷ್ಯನಿದ್ದನು. ಅವನಿಗೆ ಎಂಟು ವರುಪದ ಒಬ್ಬ ಮಗಳಿದ್ದಳು. ಆ ಹುಡುಗಿಯನ್ನು ಒಬ್ಬ ಮೋಸಗಾರನು ಮೋಸದಿಂದ ಎತ್ತಿಕೊಂಡು ಹೋದನು ಕೆಲವು ದಿವಸ ಆ ಹುಡುಗಿಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಆ ಮೇಲೆ ಅವಳನ್ನು ಒಬ್ಬ ವೇಶಾ ಸ್ತ್ರೀಯಳಿಗೆ ಮಾರಿಕೊಂಡು ಬಿಟ್ಟುನು ಅವಣ್ಯಾಂಗನೆಯು ಆ ಹುಡುಗಿಯನ್ನು ಚನ್ನಾಗಿ ಜೋಪಾನ ಮಾಡಹತ್ತಿದಳು. ಅದರಿಂದ ಆ ಹುಡುಗಿಯು ಕೆಲವು ದಿವಸಗಳಲ್ಲಿ ತನ್ನ ತಂದೆಯನ್ನು ಮರೆತು ಬಿಟ್ಟಳು. ಆ ಹುಡುಗಿಯ ತಂದೆ