ಇನ್ನು ತಮ್ಮ ದರ್ಶನ ಲಾಭವು ಎಂದಿಗಾಗುವದೋ ದೇವರೇ ಬಲ್ಲನು" ಎಂದು ವಿಜ್ಞಾಪಿಸಿದಳು ಬಾದಶಹನು ಸ್ತ್ರೀಚರಿತ್ರಕ್ಕೆ ಮರುಳಾಗಿ ಆ ಪೇಯವನ್ನು ಪ್ರಾಶನ ಮಾಡಿದನು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಬಾದಶಹನಿಗೆ ಅದರಿಂದ ಪ್ರಜ್ಞೆಯು ತಪ್ಪಿ ಮಲಗಿಕೊಂಡು ಬಿಟ್ಟನು. ಆಗ ಅವಳು ಬಾದಶಹನನ್ನು ಒಂದು ಮಣೆಯಲ್ಲಿ ಮಲಗಿಸಿ ತಾನೊಂದು ಮೇಣೆಯಲ್ಲಿ ಕುಳಿತುಕೊಂಡು ತನ್ನ ತಂದೆಯ ಮನೆಗೆ ಬಂದು ಬಾದಶಹನನ್ನು ಒಂದು ಮಂಚದಮೇಲೆ ಮಲಗಿಸಿ, ತಾನು ಎಚ್ಚರದಿಂದ ಕಾಯುತ್ತ ಕುಳಿತುಕೊಂಡಳು. ಮದ್ಯದ ಮದವು ಇಳಿದಮೇಲೆ ಬಾದಶಹನು ಎಚ್ಚತ್ತು ಕುಳಿತುಕೊ೦ಡು ಸುತ್ತುಮುತ್ತ ನೋಡಿ ತನ್ನ ಅಂತಃಪುರದಂತೆ ಕಾಣದೆ ಹೋಗಲು ಆಶ್ಚಯಾಣ್ವಿತನಾಗಿ ಕುಳಿತುಕೊಂಡನು. ಮುಂದೆ ಸ್ವಲ್ಪ ಹೊತ್ತಿನಮೇಲೆ ಮೇಲಕ್ಕೆ ತಲೆಯೆತ್ತಿ ನೋಡಹತ್ತಲು ರಾಣಿಯು ಕಂಡುಬಂದಳು. ಆಗ ಅವಳನ್ನು ಕುರಿತು; "ನಾನು ಜಾಗ್ರದಾವಸ್ಥೆಯಲ್ಲಿರುವೆನೋ? ಅಥವಾ ಸುಷುಪ್ತಾವಸ್ಥೆಯಲ್ಲಿರುವನೋ?" ಎಂದು ಪ್ರಶ್ನೆ ಮಾಡಿದನು. ಆಗ ಬೇಗಮ್ಮನು ಅನ್ನುತ್ತಾಳೆ;- "ಸ್ವಾಮಿ! ತಾವು ಇಷ್ಟು ಹೊತ್ತಿನವರೆಗೆ ಮಲಗಿಕೊಂಡೇ ಇದ್ದಿರಿ; ಪ್ರಾತಃಕಾಲವು ಸಮೀಪಿಸಲು ತಮಗೆ ಎಚ್ಚರವಾಗಿದೆ! ಮೋರೆಯನ್ನು ತೊಳೆದುಕೊಂಡು ದೇವರ ಪ್ರಾರ್ಥನೆಯನ್ನು ಮಾಡಿರಿ!
ಬಾದಶಹ- ಇದು ನನ್ನ ಅಂತಃಪುರದಂತೆ ಕಾಣುವದಿಲ್ಲ ! ನಾನು ಇಲ್ಲಿಗೆ ಹ್ಯಾಗೆ ಬಂದೆನು ? ಎಂಬ ಸಂಗತಿಯನ್ನು ಮೊದಲು ತಿಳಿಸು ;
ಬೇಗಮ್ಮ (ಕೈಮುಗಿದುಕೊಂಡು ನಿಂತು) ಸ್ವಾಮೀ ! ಇದು ನನ್ನ ತಂದಯಗೃಹವು, ತಮ್ಮ ಆಜ್ಞಾನುಸಾರವಾಗಿ ನಾನು ತಮ್ಮನ್ನು ಇಲ್ಲಿಗೆ ಕರೆತಂದಿದ್ದೇನೆ. ಯಾಕಂದರೆ, ತಾವು ನನಗೆ ನಿನ್ನೆಯ ದಿವಸ, "ನಿನಗೆ ಪ್ರಿಯವಾದ ವಸ್ತುವನ್ನು ತೆಗೆದುಕೊಂಡು ಹೋಗು!" ಎಂಬುದಾಗಿ ಆಜ್ಞಾಪಿಸಿದಷ್ಟೇ? ಇದರಂತೆ ಈ ಪ್ರಪಂಚದಲ್ಲಿ ನನಗೆ ಅತ್ಯಧಿಕ ಪ್ರಿಯವಾಗಿದ್ದ ತಮ್ಮನ್ನೇ ತೆಗೆದುಕೊಂಡು ಬಂದಿದ್ದೇನೆ. ಕ್ಷಮೆ ಇರಬೇಕು .. ಎಂದಳು.
ಬಾದಶಹನು ಬೇಗಮ್ಮಳ ಚಾತುರ್ಯಕ್ಕೆ ಮೆಚ್ಚಿ ಆಗಳಿಗೆ ಕ್ಷಮೆಯನ್ನು ಮಾಡಿ ತನ್ನ ಸ್ವಶುರನಿಗೆ ಬೆಟ್ಟಿಯಾಗಿ ಅವನ ಆಪ್ಪಣೆಯನ್ನು ಪಡೆದುಕೊಂಡು ಬೇಗಮ್ಮಳನ್ನೊಡಗೊಂಡು ತನ್ನ ಅರಮನೆಗೆ ಬಂದನು.
ಮುಂದೆ ಕೆಲವು ದಿವಸಗಳಾದ ಮೇಲೆ ಬೇಗಮ್ಮಳು, "ನಾನು ತಮ್ಮನ್ನು ತೆಗೆದುಕೊಂಡು ಹೋಗಿದ್ದ ಯುಕ್ತಿಯನ್ನು ತಿಳಿಸಿ ಇದನ್ನು ಬೀರಬಲ