ಬೀರಬಲ:- ಪೃಥ್ವಿನಾಥ ನನ್ನ ದುರ್ದೈವದಿಂದ ಮುದ್ರಿಕೆಯು ದೊರೆಯಲಿಲ್ಲ.
ಬಾದಶಹ-(ಕ್ರೋಧದಿಂದ) ಹಾಗಾದರೆ ಮರಣಕ್ಕೆ ಸಿದ್ಧನಾಗು.
ಬೀರಬಲನು ಮರಣಕ್ಕೆ ಸಿದ್ಧನಾದನು, ಅವನ ಕೈಕಾಲುಗಳನ್ನು ಕಟ್ಟಿ
ದರು ಅದನ್ನು ನೋಡಿ ಬಾದಶಹನು ಕಳವಳಪಟ್ಟು - " ಬೀರಬಲ ಈಗಲಾದರೂ ನಿನ್ನ ಮಾತನ್ನು ತಿರುಗಿಸು” ಎಂದನು.
ಬೀರಬಲ-ಪ್ರಭುವೇ ! ಮರಣಕ್ಕೆ ಸಿದ್ಧನಾದ ನನ್ನನ್ನು ವ್ಯರ್ಥವಾಗಿಯಾಕೆ
ಪೀಡಿಸುವಿರಿ, ತಲೆಹೊಡೆಯುವದಕ್ಕೆ ಬೇಗನೆ ಅಪ್ಪಣೆಯನ್ನು ಕೊಡಿರಿ
ಬಾದಶಹ:- ಅದಕ್ಕೇನು ಬಹಳ ಅವಕಾಶವು ಹತ್ತುವಂತೆಯಿಲ್ಲ.
ಬಾದಶಹನ ಅಪ್ಪಣೆಯಮೇರೆಗೆ ಬೀರಬಲನನ್ನು ವಧಸ್ಥಾನಕ್ಕೆ ಕರೆ
ದುಕೊಂಡು ಹೋದರು ಪ್ರಜೆಗಳಿಗೆಲ್ಲರಿಗೂ ಅದನ್ನು ನೋಡಿ ಬಹಳ ದುಃಖ
ವಾಯಿತು ಸಾವಿರಾರುಜನರು ನೆರೆದರು, ಬೀರಬಲನ ಆಪ್ತರು ರೋದಿಸಹತ್ತಿದರು, ಬೀರಬಲನು ವಧಸ್ತಂಭದ ಕೆಳಗಿರುವ ಹಲಿಗೆಯನ್ನು ಹತ್ತಿ
ನಿಂತುಕೊಂಡನು, ಆಗ ವಧಿಕರು - “ ನಿಮ್ಮ ಅಂತ್ಯಾಪೇಕ್ಷೆಯು ಏನಿರುವದು? ” ಎಂದು ಪ್ರಶ್ನೆ ಮಾಡಿದರು, ಅವನು ಉತ್ತರಕೊಡಬೇಕೆನ್ನುವಷ್ಟರಲ್ಲಿ ಒಬ್ಬ ಫಕೀರನು ಅಕಸ್ಮಾತ್ತಾಗಿ ಆ ಜನಸಮುದ್ರದೊಳಗಿಂದ ಪರಮೇಶ್ವರನ ನಾಮೋಚ್ಛಾರಣೆಯನ್ನು ಮಾಡುತ್ತ ಬೀರಬಲನ ಸಮೀಪಕ್ಕೆ ಬಂದು
ಬೀರಬಲ್ಲ ! ಪ್ರಾರಬ್ಧಯೋಗದಿಂದ ನಿನಗೆ ಮರಣದಂಡನೆಯು ಪ್ರಾಪ್ತ
ವಾಯಿತು, ಆಗಲಿ ? ಮೃತ್ಯುವು ನಿನ್ನನ್ನು ಗ್ರಾಸಮಾಡುವದರೊಳಗಾಗಿ
ಒಂದು ಪುಣ್ಯದಕಾರ್ಯವನ್ನು ಮಾಡು? ಪ್ರಾತಃಕಾಲವು ಸಮೀಪಿಸಿದೆ, ಈ
ಸಮಯದಲ್ಲಿ ಅನ್ನದಾನಮಾಡಿದರೆ ಬಹಳ ಪುಣ್ಯವು ಲಭಿಸುವದು, ನನಗಂತೂ ಕ್ಷುದ್ಭಾಧೆಯು ಅತಿಶಯವಾಗಿರುವದು ? ಒಂದು ಮತ್ಸ್ಯವನ್ನು ತಂದು
ನೀನೇ ಅದನ್ನು ಕೊಯಿದು, ನನಗೆ ಅಡಿಗೆಯನ್ನು ಮಾಡಿ ಉಣಿಸು” ಎಂದು
ಕೇಳಹತ್ತಿದನು.
ಆ ಮಾತಿಗೆ ಬೀರಬಲನು, ಫಕೀರಸಾಹೇಬ ? ನೀವು ಎಂಥ ಅನುಚಿತ
ವಾದ ಕಾರ್ಯವನ್ನು ಹೇಳಿದಿರಿ; ನಾನು ಉಚ್ಚ ಕುಲದ ಬ್ರಾಹ್ಮಣನಾಗಿದ್ದು,
ಇಂಥ ನಿಕೃಷ್ಟ ಕೆಲಸವನ್ನು ಹ್ಯಾಗೆ ಮಾಡಲಿ !
ಫಕೀರ:- ನೀನು ಸಾಯುವಮೊದಲು ನನ್ನ ಇಚ್ಛೆಯನ್ನು ಪೂರ್ಣಮಾಡಿದರೆ ನಿನಗೂ ನಿನ್ನ ಮಕ್ಕಳು ಮರಿಗಳಿಗೂ ಕಲ್ಯಾಣವಾಗುವದು.
ಈ ಪ್ರಕಾರ ಫಕೀರನು ಹೇಳಲಾಗಿ, ಅಲ್ಲಿ ನೆರೆದವರೆಲ್ಲರೂ ಫಕೀರನ
ಅಪೇಕ್ಷೆಯನ್ನು ಪೂಣ೯ಮಾಡು ಎಂದು ಹೇಳಿದರು, ಸ್ವಲ್ಪ ಹಿಂದು ಮುಂದೆ