ಈ ಪುಟವನ್ನು ಪ್ರಕಟಿಸಲಾಗಿದೆ
ಹಾಸುಗಲ್ಲ ಬುಡದ ನಿಕ್ಷೇಪ.

ವಿಗೆ ಸೋತುಹೋಗಿ, ಆಕೆಯನ್ನು ವರಿಸಿ, ಮನೆಯಳಿಯನಾಗಿ ಅಲ್ಲಿಯೆ ಸುಖವಾಗಿದ್ದನು. ಹೀಗಿದ್ದು ದರಿಂದ ಆತನಿಗೆ ಕೆಲವು ವರ್ಷಗಳಲ್ಲಿ ತನ್ನ ಮೊದಲನೆಯ ಹೆಂಡತಿಯಾದ ನೇತ್ರವತಿಯ ಹೆಸರೇ ಮರೆತುಹೋಯಿತು. ಅದರಲ್ಲಿಯೂ ಆ ಕಿರಿಯ ಹೆಂಡತಿಯು ತನ್ನ ಮುದ್ದು ಮಾಯಗಳಿಂದ ಆತನನ್ನು ತೀರ ಮಂಕುಮಾಡಿ, ಯವನ ದೇಶದಲ್ಲಿಯೇ ಕಾಲ ಕಳೆಯುವಂತೆ ಮಾಡಿಬಿಟ್ಟಳು.

ಇತ್ತ ನೇತ್ರವತಿಗೆ ತನ್ನ ಗಂಡನದೊಂದೆ ಚಿಂತೆ. ಅದನ್ನು ನಿವಾರಿಸುವುದಕ್ಕಾಗಿ ಅವಳು ಮಗನನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಳ್ಳುತಿದ್ದಳು. ಮಗನ ಮುಖವನ್ನು ನೋಡಿದಳೆಂದರೆ, ಅವಳ ವ್ಯಥೆಯು ಕೊಂಚ ಕಡಮೆಯಾಗುತಿತ್ತು, ಆ ಬಾಲಕನಂತೂ ತುಂಬ ಧೈರ್ಯಶಾಲಿ; ತಾರಾಂಗಣದಲ್ಲೆಲ್ಲ ಆತನಷ್ಟು ಸಾಹಸಿಗಳಾದ ಹುಡುಗರು ಮತ್ತಾರೂ ಇರಲಿಲ್ಲ. ಅಜಿತಕುಮಾರನೆಂಬ ಹೆಸರು ಆತನಿಗೆ ಅನ್ವರ್ಥವಾಗಿತ್ತು.

ಆಗಿನ ಕಾಲದ ಜನರಲ್ಲಿ ಸಮುದ್ರರಾಜನಾದ ವರುಣನ ಪೂಜೆಯುವಾಡಿಕೆಯಾಗಿತ್ತು, ದೇವಾಲಯಗಳನ್ನು ಕಟ್ಟಿಸಿ ವಿಗ್ರಹಗಳನ್ನು ಸ್ಥಾಪನೆ ಮಾಡುತಿದ್ದರು, ತಾರಾಂಗಣದಲ್ಲಿ ಕೂಡ ವರುಣದೇವತೆಯ ದೇವ ಸ್ಥಾನವಿತ್ತು, ನೇತ್ರವತಿಯು ದಿನಾಲು ಈ ದೇವಸ್ಥಾನಕ್ಕೆ ಹೋಗುವಳು ; ಅಲ್ಲಿ ಕುಳಿತುಕೊಂಡು ಇದಿರಿಗಿದ್ದ ಕಡಲನ್ನೂ ಅದರ ಆಚೆ ದೂರದಲ್ಲಿದ್ದ ನಾಡನ್ನೂ ಬೆಟ್ಟಗಳ ಕೋಡುಗಳನ್ನೂ ನೋಡುವಳು; ಹೀಗೆ ಅವಳು ಕಾಲ ಕಳೆಯುವಳು.

ಅಜಿತಕುಮಾರನಿಗೆ ಹದಿನೈದು ವರುಷ ತುಂಬುತ್ತಲೇ ಒಂದು ದಿನ ನೇತ್ರವತಿಯು ಆತನನ್ನು ಆ ವರುಣ ದೇವಸ್ಥಾನಕ್ಕೆ ಕರೆದುಕೊಂಡು ಹೋದಳು, ಅಂಗಳದಲ್ಲಿ ಒಂದು ಅರಳಿ ಮರವಿತ್ತು. ಅದರ ಸುತ್ತಲು ಪೊದೆ ಪೊದರುಗಳು ಎತ್ತರವಾಗಿ ಬೆಳೆದಿದ್ದುವು, ನೇತ್ರವತಿಯು ಮಗನನ್ನು ಈ ಪೊದೆಗಳ ನಡುವೆ ಕರೆದುಕೊಂಡು ಹೋಗಿ, ನಿಟ್ಟುಸಿರು ಬಿಟ್ಟು––