ಈ ಪುಟವನ್ನು ಪ್ರಕಟಿಸಲಾಗಿದೆ
ಹಾಸುಗಲ್ಲ ಬುಡದ ನಿಕ್ಷೇಪ.

ದಳು. ಆಗಲೂ ಅವನಿಂದ ಸಾಧ್ಯವಾಗಲಿಲ್ಲ. ಮುಂಚಿನ ವರುಷ ಹೇಳಿದ್ದ ಮಾತುಗಳನ್ನೇ ಆಗಲೂ ಹೇಳಿದಳು. ಮರುವರುಷವೂ ಹಾಗೆಯೇ ನಡೆಯಿತು. ನಾಲ್ಕನೆಯ ವರುಷವೂ ಸಫಲವಾಗಲಿಲ್ಲ. ಆಗ ಮಾತ್ರ ಅಜಿತನಿಗೆ ಆ ಕಲ್ಲಿನ ಬುಡದಲ್ಲಿ ಏನಿದೆಯೆಂದು ತಿಳಿದುಕೊಳ್ಳಬೇಕೆಂದು ಕುತೂ ಹಲವು ಉಂಟಾಯಿತು, ಅದರ ಮರ್ಮವನ್ನು ತಿಳಿದುಕೊಳ್ಳುವ ಬಗೆ ಹೇಗೆ ? ಯಾವಾಗಲೂ ದುಃಖದಲ್ಲಿಯೇ ಬೇಯುತ್ತಿರುವ ತಾಯಿಯೊಡನೆ ಕೇಳುವುದಕ್ಕೆ ಹೇಗೆ ತಾನೇ ಮನಸ್ಸು ಬಂದೀತು ? ಆದುದರಿಂದ ಅಜಿತನು, "ತಾರಾಂಗಣದಲ್ಲಿ ಇದನ್ನು ಎತ್ತುವಷ್ಟು ಸಮರ್ಥರು ಇರಲಿ, ಇಲ್ಲದಿರಲಿ! ನಾನು ಮಾತ್ರ ಎತ್ತಿಯೇ ತೀರಬೇಕು ! ಆ ಯೋಗವು ಎಂದಿಗೂ ಬಾರದೆ ಉಳಿಯಲಿಕ್ಕಿಲ್ಲ" ಎಂದಂದುಕೊಂಡು, ತಾನು ಬಲಿಷ್ಠನಾಗಬೇಕೆಂದು, ಗರುಡಿಸಾಧಕ, ಕುದುರೆಯ ಸವಾರಿ, ಮಿಗಬೇಟೆ, ಜಿಂಕೆಗಳನ್ನು ಬೆನ್ನಟ್ಟಿಕೊಂಡು ಕಾಡುಗುಡ್ಡಗಳಲ್ಲಿ ಸುತ್ತಾಡುವುದು, ಇವೇ ಮೊದಲಾದ ಅಂಗಸಾಧನೆಗಳನ್ನು ಮಾಡುವುದರಲ್ಲಿಯೇ ಮಗ್ನನಾದನು. ಇದರಿಂದ ಕೊನೆಗೆ ಆತನಂಥ ಬೇಟೆಗಾರನೇ ಆ ರಾಷ್ಟ್ರದಲ್ಲಿ ಇಲ್ಲ ವೆಂಬಂತಾಯಿತು. ಅಲ್ಲಿಯ ಜನಗಳು ಶರಭವೆಂಬ ಎಂಟು ಕಾಲಿನ ಒಂದು ಬಗೆಯ ಮೃಗದ ಹಾವಳಿಯಿಂದ ಕಂಗೆಟ್ಟು ಹೋಗಿದ್ದರು. ಅಜಿತನು ಅಂಥ ಭಯಂಕರವಾದ ಪ್ರಾಣಿಯನ್ನು ಕೂಡ ಸಂಹರಿಸಿಬಿಟ್ಟನು. ಆಗ ಈತನ ಸಾಹಸಕಾರ್ಯವನ್ನು ಕಂಡು, ಎಲ್ಲರೂ “ಹುಡುಗನ ಅದೃಷ್ಟವು ಚೆನ್ನಾಗಿದೆ, ಚೆನ್ನಾಗಿದೆ !” ಎಂದು ಹೇಳುವುದಕ್ಕೆ ಮೊದಲುಮಾಡಿದರು.

ಅಷ್ಟರಲ್ಲಿ ಅಜಿತನಿಗೆ ಹದಿನೆಂಟು ವರುಷಗಳು ತುಂಬಿದುವು, ನೇತ್ರವತಿಯು ಆತನನ್ನು ಅದೇ ಗುಡಿಗೆ ಕರೆದುಕೊಂಡು ಹೋಗಿ-“ಅಜಿತ, ಆ ಕಲ್ಲನ್ನು ಈ ಹೊತ್ತು ಎತ್ತುವೆಯಾದರೆ ಎತ್ತಿಬಿಡು; ಇಲ್ಲವಾದರೆ ನಿನ್ನ ಹೆತ್ತವರು ಯಾರೆಂಬದನ್ನು ಅರಿಯಲಾರೆ !” ಎಂದು ಖಂಡಿತವಾಗಿ ಹೇಳಿ ಬಿಟ್ಟಳು.