ಈ ಪುಟವನ್ನು ಪ್ರಕಟಿಸಲಾಗಿದೆ

I I

ಜಾ ಲ ವ್ಯೂ ಹ.


II. ಜಾಲವ್ಯೂಹ

ಯಾವುದಾದರೊಂದು ಕೆಲಸವನ್ನು ಮಾಡಬೇಕೆಂದು ಯೋಚಿಸಿದರೆ ಸಾಕು; ಆಮೇಲೆ ಅದು ಯಾವಾಗ ನೆರವೇರಲಿಲ್ಲ ಎಂಬದಾಗಿ ಮನಸ್ಸು ಕಾತರಿಸುತ್ತದೆ. ಆ ಕೆಲಸಕ್ಕೆ ಕೈಹಾಕುವುದು ಮಾತ್ರ ಪ್ರಯಾಸ. ಅಜಿತನಿಗೆ ಯವನದೇಶಕ್ಕೆ ಹೋಗಿ ತನ್ನ ತಂದೆಯಾದ ತಾರಾಪತಿಯನ್ನು ನೋಡಬೇಕೆಂಬ ತವಕದಿಂದ ನೆಲದ ಮೇಲೆ ಕಾಲು ನಿಲ್ಲದಿದ್ದರೂ, ಅಲ್ಲಿಗೆ ಹೋಗುವ ಬಗೆ ಹೇಗೆಂದು ಆತನ ಚಿಕ್ಕ ತಲೆಗೆ ಹತ್ತಲೇ ಇಲ್ಲ. ಅರಮನೆಯಿಂದ ಹೊರಟವನು ಕಡಲ ದಡಕ್ಕೆ ಬಂದು, ಬಹಳ ಹೊತ್ತು ಯೋಚಿಸುತ್ತ ನಿಂತನು, ಸಮುದ್ರವನ್ನು ದಾಟುವುದಕ್ಕಾಗಿ ಒಂದು ಹಡಗನ್ನು ಬಾಡಿಗೆಗೆ ಗೊತ್ತು ಮಾಡಿಕೊಳ್ಳಬೇಕೆಂದು ಒಂದು ಸಲ ನಿಶ್ಚಯಿಸಿ ದನು, ಅಲ್ಲಿಗೆ ಹಡಗು ಹೋಗಿ ಮುಟ್ಟುವುದಕ್ಕೆ ಬಹಳ ದಿನಗಳು ಹಿಡಿಯುವುದರಿಂದ, ಬೇರೊಂದು ಉಪಾಯವಿದ್ದರೆ ತ್ವರೆಯಾಗಿ ಹೋಗಬಹುದೆಂದು ತೋಚಿತು, ತನಗೆ ರೆಕ್ಕೆಗಳಿದ್ದದ್ದೇ ಆದರೆ ಹಾರಿಹೋಗಿ ತಂದೆಯನ್ನು ನೋಡಬಹುದಿತ್ತು ಎಂಬ ಆಸೆಯುಂಟಾಯಿತು. ಅಷ್ಟರಲ್ಲಿ ಆತನಿಗೆ ಇನ್ನೊಂದು ಆಲೋಚನೆಯು ಹುಟ್ಟಿ ಅದುವರೆಗಿದ್ದ ಉತ್ಸಾಹವೆಲ್ಲ ಮನಸ್ಸಿನಿಂದ ಆರಿಹೋಯಿತು. “ನಾನು ಹುಟ್ಟಿದಂದಿನಿಂದ ನನ್ನ ತಂದೆಗೆ ನನ್ನ ಯೋಚನೆಯೇ ಇಲ್ಲವೇ? ಅಥವಾ ಆತನಿಗೆ ಬೇರೆ ಮುದ್ದು ಮುದ್ದಾದ ಮಕ್ಕಳು ಇದ್ದಾರೇ ? ಹಾಗಿದ್ದರೆ, ನನ್ನನ್ನು ಪ್ರೇಮದಿಂದ ಕಾಣುವನೆಂಬುದು ನಿಶ್ಚಿತವೇ ? ತಂದೆಗೆ ತನ್ನಲ್ಲಿ ಪ್ರೇಮವುಂಟಾಗುವಂತೆ ನಾನು ಯಾವ ಮಹತ್ಕಾರ್ಯಗಳನ್ನು ಮಾಡಿದ್ದೇನೆ ? ಅತ್ಯಲ್ಪನಾದ ನನ್ನನ್ನು