ಈ ಪುಟವನ್ನು ಪ್ರಕಟಿಸಲಾಗಿದೆ
೧೨
ಜಾಲವ್ಯೂಹ.
ನಿಂತು, ಗದಾಧರನನ್ನು ತಿವಿದನು; ಆದರೆ ಆ ಕರಡಿಯ ತೊಗಲೇ ಆತನ ಮೈಗೆ ವಜ್ರಕವಚವಾಯಿತು.
ಕೊನೆಗೆ ಅಜಿತನು ಆವೇಶಗೊಂಡು ತಟ್ಟನೆ ಗದಾಧರನ ಕೊರಳನ್ನು ಅವುಕಿಹಿಡಿದನು. ಇಬ್ಬರೂ ನೆಲದ ಮೇಲೆ ಉರುಳಾಡಿದರು, ಹೊರಳಾಡಿದರು, ಆಮೇಲೆ ಅಜಿತನು ಎದ್ದು ನಿಂತನು; ಗದಾಧರನು ಮಲಗಿ ಬಿಟ್ಟನು.
ಅನಂತರ ಅಜಿತನು ಆತನ ಗದೆಯನ್ನೂ ಕರಡಿಯ ತೊಗಲನ್ನೂ ತಾನು ಇಟ್ಟುಕೊಂಡು, ಆತನ ಹೆಣದಿಂದ ನರಿನಾಯಿಗಳಿಗೆ ಅವುತಣ ಮಾಡಿಸಿ, ಮುಂದಕ್ಕೆ ನಡೆದನು.