ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ, ೨೩


ಅಜಿತನು ಅಳುಕಿಲ್ಲದೆ ಅವನ ಬಳಿ ಹೋಗಿ ಕುಳಿತುಕೊಂಡನು.
ಇಬ್ಬರೂ ಉಣ್ಣುವುದಕ್ಕೆ ತೊಡಗಿದರು. ಅಜಿತನು ತನ್ನಿಂದಾದಷ್ಟು ಅನ್ನ
ವನ್ನು ಹೊಟ್ಟೆಗೆ ಅಡಸಿಕೊಂಡನು ; ಮೂವರು ಉಣ್ಣುವಷ್ಟು ಅವನೂ
ಬ್ಬನೇ ಉಂಡಿರಬಹುದು. ಕ್ರೂರಾಕ್ಷನು ಏಳು ಮಂದಿಯ ಗ್ರಾಸವನ್ನು
ಒಬ್ಬನೇ ತಿಂದುಬಿಟ್ಟನು.

ಊಟದ ಹೊತ್ತಿಗೆ ಒಬ್ಬರನ್ನೊಬ್ಬರು ಓರೆಗಣ್ಣಿನಿಂದ ನೋಡು
ತ್ತಿದ್ದರೂ, ಅವರೊಳಗೆ ಮಾತುಕಥೆಗಳೇನೂ ನಡೆಯಲಿಲ್ಲ. ಒಬ್ಬನು
ಮತ್ತೊಬ್ಬನನ್ನು ನೋಡಿ, “ಆತನ ರಟ್ಟೆಗಳು ಬಲವಾಗಿವೆ; ಆದರೆ ನನ್ನ
ಭುಜಗಳು ಕೂಡ ಅಷ್ಟೇ ಬಲವಾಗಿರಬಹುದು" ಎಂದು ಮನಸ್ಸಿನೊಳಗೆ
ಅಂದುಕೊಳ್ಳುತಿದ್ದನು.

ಕೊನೆಗೆ ಅನ್ನದ ರಾಶಿ ಮುಗಿಯಿತು, ಹಂಡೆಗಳು ಬರಿದಾದುವು.
ಆ ಮೇಲೆ ಕೂರಾಕ್ಷನು ಎದ್ದು , “ಆಗಲಿ, ಇನ್ನು ಬೇಕಾದರೆ ನಮ್ಮ
ನಮ್ಮ ಸಾಹಸವನ್ನು ತೋರಿಸೋಣ” ಎಂದು ಹೇಳಿದನು.

ಈಗ ನೋಡು, ಇಬ್ಬರು ವೀರರೂ ತಂತಮ್ಮ ಅಂಗಿಗಳನ್ನು ತೆಗೆದು
ಆಚೆಗಿಟ್ಟು, ಅಂಗಳಕ್ಕೆ ಇಳಿವರು. ಕ್ರೂರಾಕ್ಷನು ಆ ಮೂಳೆಗಳ ರಾಶಿ
ಯನ್ನು ಕೊಂಚ ಬಿಡಿಸಿಕೊಳ್ಳುವನು. ಸಣ್ಣಾದ ಉಸುಬನ್ನು ತರಿಸಿ
ನಡುವೆ ಹಸರಿಸುವನು. ಈಗ ಇಬ್ಬರೂ ಎದುರು ಎದುರಾಗಿ ನಿಂತು
ಕೊಂಡರು. ಅವರ ಕಣ್ಣುಗಳು ಕಾಡುಕೋಣಗಳ ಕಣ್ಣುಗಳಂತೆ ತಳ
ತಳಿಸುತ್ತಿದ್ದುವು. "ಇದರ ಪರಿಣಾಮವು ಏನಾಗುವುದೋ, ನೋಡೋಣ"
ಎಂದು ಕುತೂಹಲವುಳ್ಳವರಾಗಿ, ಜನರು ಹೆಬ್ಬಾಗಿಲಿನ ಬಳಿ ನಿಂತುಕೊಂಡು
ಇಣಿಕಿ ನೋಡುತಿದ್ದರು.

}ಇಬ್ಬರೂ ಬಲುಹೊತ್ತು ಕಾದಾಡಿದರು ; ಎಷ್ಟು ಸಮಯವೆಂದು
ಹೇಳುವುದಕ್ಕೆ ಬಾರದು. ಆಕಾಶದಲ್ಲಿ ಮೂಡಿದ ತಾರೆಗಳು ಅವರ
ತಲೆಯ ಮೇಲೆ ತಳತಳಿಸಿ, ಕೆಳಗಡೆ ಇಳಿದು, ಸುತ್ತು ಸುತ್ತ ತಿರುಗಿದುವು.