ಈ ಪುಟವನ್ನು ಪ್ರಕಟಿಸಲಾಗಿದೆ
ಅಜಿತ ಕುಮಾರ.
೩೭

ಕೊಂಡು, ಹೊರಕ್ಕೆ ಬಂದಳು. ಎಲ್ಲರೂ ಆಕೆಯ ಚೆಲುವನ್ನೇ ನೋಡುತ್ತಿದ್ದರು. ಆಕೆಯು ಅಜಿತನ ಹತ್ತಿರ ಬಂದು, ಎಲ್ಲೆಲ್ಲಿಯೂ ಜಯ ಶೀಲನಾಗು! ದುರ್ಜಯನಾದ ಶೂರನೆ, ವಿಜಯಿಯಾಗು ! ಇದೊ, ಈ ಬರಿ ಬಿಂದಿಗೆಯೊಳಗಿರುವ ದ್ರವವನ್ನು ಸೇವಿಸು ! ಇದರಿಂದ ನಿನ್ನ ಆಯಾಸವೆಲ್ಲವೂ ಪರಿಹಾರವಾಗಿ ಉಲ್ಲಾಸ ಹುಟ್ಟುವುದು ! ಅಮೃತಕ್ಕೆ ಸಮಾನವಾಗಿದೆ ! ಇದೊ, ತೆಗೆದುಕೋ !” ಎಂದು ಹೇಳಿ ಆ ದ್ರವವನ್ನು ಅಜಿತನ ಪಾತ್ರೆಗೆ ಹೊಯಿದಳು, ಆಗ ಅದರ ಸುವಾಸನೆಯು ಅತ್ತರಿನಂತೆ ಕೋಣೆಯಲ್ಲಿ ಮಗಮಗಿಸಿತು !

ಕೂಡಲೆ ಅಜಿತನು ಆಕೆಯಮುಖವನ್ನು ನೋಡಿದನು, ಆಕೆಯ ನೆತ್ತರಿಲ್ಲದ ಕಣ್ಣುಗಳನ್ನು ಕಂಡು ಅವನು ಮೈ ತೆಗೆದನು, ತತ್‌ಕ್ಷಣವೆ ಎದ್ದು ನಿಂತು, ಈ ದ್ರವವು ಅತ್ಯುತ್ತಮವೇ ಸರಿ ! ಇದನ್ನು ತಂದವಳಂತೂ ಸಾಕ್ಷಾತ್‌ ದೇವಕನ್ನಿಕೆ, ಆದರೆ ಇದನ್ನು ಆಕೆಯೇ ಮೊದಲು ಕುಡಿಯಲಿ ! ಆ ಮೇಲೆ ನಾನು ಕುಡಿಯುವೆನಂತೆ ! ಆಗ ಅದರ ರುಚಿಯು ಮತ್ತಷ್ಟು ಹೆಚ್ಚಿತು !” ಎಂದು ಹೇಳಿದನು. ಇದನ್ನು ಕೇಳಿ ಮಾಧವಿಯು ಮೂದೇವಿಯಂತಾಗಿ, ಆ ಆದರೆ ನಾನು ಸ್ವಸ್ಥಳಾಗಿಲ್ಲ ; ಇದನ್ನು ಕುಡಿಯಲಾರೆ !” ' ಎಂದು ತಬ್ಬಿಬ್ಬಾದಂತೆ ಒದರಿದಳು.

"ಆಗದಾಗದು ! ನೀನು ಕುಡಿಯಲೇ ಬೇಕು ! ಇಲ್ಲದಿದ್ದರೆ ಸಾಯುವೆ ! " ಎಂದು ಹೇಳಿ, ಎಲ್ಲರೂ ನೋಡುತಿದ್ದ ಹಾಗೆಯೇ ಅಜಿತನು ಗದೆಯನ್ನು ಎತ್ತಿದನು.

ಮಾಧವಿಗೆ ಕರುಳು ಕೊರಳಿಗೆ ಬಂದಂತಾಯಿತು. ಮಧು ಪಾತ್ರೆಯು ಬುಡಕ್ಕನೆ ಜಾರಿ ಬಿದ್ದುಬಿಟ್ಟಿತು. ಆಕೆಯು ಚೀರಿಕೊಂಡು ಓಡಿಬಿಟ್ಟಳು. ಆ ದ್ರವವು ನೆಲದ ಮೇಲೆ ಚೆಲ್ಲಿಹೋಗಿ, ಅದರಲ್ಲಿದ್ದ ವಿಷದ ಖಾರಕ್ಕೆ ಹಿಸ್ಸೆಂದು ಶಬ್ದ ಮಾಡುತ್ತ ಕುದಿಯ ತೊಡಗಿತು.

ಇತ್ತ ಮಾಧವಿಯು ತನ್ನ ಪಕ್ಷಿರಥವನ್ನು ಏರಿಕೊಂಡು ಎಲ್ಲಿಯೋ