ಈ ಪುಟವನ್ನು ಪ್ರಕಟಿಸಲಾಗಿದೆ
ಅಜಿತ ಕುಮಾರ.
೪೩

ನಮ್ಮ ತಂದೆಯ ಮೇಲೆ ಇಂಥ ಅಪವಾದವನ್ನು ಹೊರಿಸುವ ನಿನ್ನ ನಾಲಗೆಯನ್ನು ನೋಡುತಿದ್ದೆ, ಇರಲಿ, ತಂದೆಯೊಡನೆ ಕೇಳಿ ಇದರ ಸತ್ಯವನ್ನು ತಿಳಿದುಕೊಳ್ಳಬೇಕು" ಎಂದು ಹೇಳಿ ತಂದೆ ಇದ್ದಲ್ಲಿಗೆ ಹೋದನು. ತಾರಾಪತಿಯನ್ನು ಕೇಳಿದೊಡನೆಯೆ, ಅವನು ಮುಖ ತಿರುಗಿಸಿ, ಅಳುತ್ತ, "ಅನ್ಯಾಯವಾಗಿ ಅಂದು ರಕ್ತ ಸುರಿಯಿತು. ಅದಕ್ಕೆ ಪ್ರತಿಯಾಗಿ ಅವರು ಕೂಡ ನೆತ್ತರದ ಮಳೆಯನ್ನೇ ಸುರಿಸುತ್ತಾರೆ. ಈ ವಿಷಯವಾಗಿ ಇನ್ನು ಮಾತನಾಡಿ ಸಂಕಟವನ್ನು ಉಂಟುಮಾಡಬೇಡ, ಕೆಮ್ಮನೆ ಕುಳಿತುಕೊಂಡು ಎಲ್ಲವನ್ನೂ ಸಹಿಸಿಕೊಂಡರೆ ಮಾತ್ರ ಸಾಕು !” ಎಂದನು.

ಇದನ್ನು ಕೇಳಿ, ಅಜಿತನು ಮನಸ್ಸಿನೊಳಗೆ ಮರುಗಿಕೊಂಡು, “ಈ ಸಲ ನಾನೆ ಹೋಗಿ, ಆ ಶತಬಲಿಯನ್ನು ಭೂತಗಳಿಗೆ ಬಲಿಕೊಡುತ್ತೇನೆ, ಆಗದೆ ?” ಎಂದನು.

ತತ್‌ಕ್ಷಣವೆ ತಾರಾಪತಿಯು ಭಯದಿಂದ, “ಇಲ್ಲ, ಇಲ್ಲ, ನೀನು ಹೋಗಕೂಡದು, ನನಗೆ ಮುಪ್ಪಿನಲ್ಲಿ ನೀನೇ ಊರುಗೋಲು; ಈ ಮನೆಗೆ ನೀನೇ ಬೆಳಕು, ನೀನೇ ಇಲ್ಲಿಗೆ ರಾಜನಾಗತಕ್ಕವನು, ಎಷ್ಟು ಮಾತ್ರಕ್ಕೂ ಹೋಗಕೂಡದು. ಅಂಥಾ ದಂಡನೆಯನ್ನು ನೀನು ಅನುಭವಿಸಲಾರೆ. ಶತಬಲಿಯು ಒಂದು ಚಕ್ರವ್ಯೂಹ ಕೋಟೆಯನ್ನು ಕಟ್ಟಿಸಿರುತ್ತಾನೆ. ಒಳಹೋದರೆ ಹೊರಕ್ಕೆ ಬರಲು ದಾರಿ ಕಾಣದು ! ಅದರೊಳಗೆ ಒಂದು ಪುರುಷಾಮೃಗವಿದೆ. ಇಲ್ಲಿಂದ ತೆಗೆದುಕೊಂಡು ಹೋದವರನ್ನು ಅದರೊಳಗೆ ತಳ್ಳಿಬಿಡುವನಂತೆ, ಪುನಃ ಅವರಿಗೆ ಈ ಬಾನನ್ನೂ ಈ ಭೂಮಿಯನ್ನೂ ನೋಡುವ ಆಸೆಯೇ ಇಲ್ಲ !” ಎಂದು ನಿಟ್ಟುಸಿರುಬಿಟ್ಟನು.

ಇದನ್ನು ಕೇಳಿ ಅಜಿತನ ಮುಖವು ದಾಸಾಳ ಹೂವಿನಂತೆ ಕೆಂಪೇರಿ, ಕೊಂಚ ಹೊತ್ತು ಮಾತಾಡದೆ, “ಹಾಗಾದರೆ ನಾನು ಹೋಗಲೇಬೇಕು; ಆ ದುಷ್ಟ ಮೃಗಕ್ಕೆ ನಾನೇ ಮದ್ದು ಅರೆವೆನು, ಇದುವರೆಗೆ ಎಷ್ಟೋ ರಕ್ಕಸರನ್ನು ಅಪ್ಪಳಿಸಿ ಬಿಡಲಿಲ್ಲವೆ ? ದಾರಕ, ಕ್ಷಾಲಕ, ಕ್ರೂರಾಕ್ಷ