ಈ ಪುಟವನ್ನು ಪ್ರಕಟಿಸಲಾಗಿದೆ
ಅಜಿತ ಕುಮಾರ.
೫೩

ಣನು ಸೀತೆಯನ್ನು ಕದ್ದು ಕೊಂಡು ಹೋದಂತೆ--- ಎತ್ತಿ ಕೊಂಡು ಹೋಗುವುದಕ್ಕೆ ಹವಣಿಸಿದನು. ಆ ಪ್ರಯತ್ನದಲ್ಲಿ ಸೋತು ಹೋಗಲು, ಇವನನ್ನು ಹಿಡಿದು, ಸಂಕಲೆಗಳಿಂದ ಒಂದು ಬಂಡೆಗೆ ಕಟ್ಟಿಬಿಟ್ಟರು. ಮಾವನು ಸತ್ತು ಹೋದನು.

ಅಜಿತನು ಅಲ್ಲಿಯೇ ಅನೇಕ ವರುಷಗಳ ತನಕ ನರಳುತ್ತಿರಲು, ಆ ಹಾದಿಯಾಗಿ ಒಂದು ದಿನ ಹೋಗುತಿದ್ದ ವಜ್ರಾಂಗನೆಂಬ ವೀರನೊಬ್ಬನು ಕನಿಕರಪಟ್ಟು, ಇವನನ್ನು ಬಿಡಿಸಿ ತಂದನು.

ಅಷ್ಟರಲ್ಲಿ ಯವನದೇಶದಲ್ಲಿ ಹೊಸ ಏರ್ಪಾಡುಗಳು ನಡೆದಿದ್ದುವು. ಅಜಿತನು ಹಿಂದೆ ಬಾರದಿದ್ದುದನ್ನು ಕಂಡು, ಅವನು ಸತ್ತನೆಂದು ಎಣಿಸಿ, ಯವನರು ತಾರಾಂಗಣಕ್ಕೆ ತೆರಳಿ, ಆತನ ತಾಯಿಯಾದ ನೇತ್ರವತಿಯನ್ನು ಕರೆದುಕೊಂಡು ಬಂದು, ತಮ್ಮ ರಾಣಿಯಾಗಿ ಮಾಡಿದರು, ಆಗ ದುಷ್ಟರಾದ ಹಂಸಪುತ್ರರೆಂಬ ರಾಕ್ಷಸರು, ಅಜಿತನು ಇಲ್ಲ ಎಂಬುದನ್ನು ತಿಳಿದು, ಯವನದೇಶವನ್ನು ನುಗ್ಗಿ, ಜನರನ್ನು ಮುರಿದು, ಅವರ ರಾಣಿಯನ್ನು ಸೆರೆಹಿಡಿದರು.ನೇತ್ರವತಿಯು ದಾಸಿಯಾಗಿ ಅವರೊಂದಿಗೆ ಹೋಗಬೇಕಾಯಿತು.

ಹೀಗೆ ಅಜಿತನು ಹಿಂದಿರುಗಿ ಬಂದಾಗ, ಯವನದೇಶವು ರಾಕ್ಷಸಮಯವಾಗಿತ್ತು. ಜನರು ಕೂಡ ಅವನನ್ನು ಗುರುತಿಸಲಾರದೆ ಹೋದರು. ರಾಜ್ಯವನ್ನು ತಿರುಗಿ ಪಡೆಯಬೇಕೆಂದು ಗಲಾಟೆ ಎಬ್ಬಿಸಿದನು. ಆದರೆ ಅಲ್ಲಿದ್ದ ಅಧಿಕಾರಿಗಳು ಆತನನ್ನು ಹೊಡೆದು ಅಟ್ಟಿಬಿಟ್ಟರು.

ಆ ಮೇಲೆ ಅಜಿತನು ವ್ಯಸನದಿಂದಲೂ ಲಜ್ಜೆಯಿಂದಲೂ ಮುಖ ಬಾಡಿಸಿಕೊಂಡು, ಅಂಜನ ದ್ವೀಪಕ್ಕೆ ಹೋಗಿ, ಅಲ್ಲಿಯ ದೊರೆಯ ಮರೆಯಲ್ಲಿ ಕೆಲಕಾಲ ಇದ್ದನು. ಕಡೆಗೆ ರಾಜನಿಗೇನೊ ಎರಡು ಬಗೆದ ನಂದು ಈತನ ಮೇಲೊಂದು ಅಪವಾದದ ನೆರಳು ಬಿದ್ದು, ಈತನಿಗೆ ಮರಣ ದಂಡನೆಯನ್ನು ವಿಧಿಸಿ ಬಿಟ್ಟರು.