ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ ವುದನ್ನು ಕಂಡು ರಾಯನು_ಎಲೈ ಮುನಿಗಳಿರಾ! ಕೇಳಿ! ನಿಮ್ಮಿ ಬ್ಬರಲ್ಲಿ ಯಾರು ಲಾಯಕ್ಷರಾಗಿರುವಿರೋ ಅವರನ್ನು ನನ್ನ ಮಗ ಳು ವರಿಸುವಳು, ನಾನವರಿಗೆ ಅವಳನ್ನು ಕೊಟ್ಟು ವಿವಾಹ ಮಾಡುವ ನು? ಎಂದು ಹೇಳಿದ್ದಾನೆ. ನಾನದನ್ನು ಕೇಳಿ ಹಾಗೆಯೇ ಆಗಲಿ ನಾ ಳಬೆಳಗ್ಗೆ ಬರುವೆನು ಎಂದು ಹೇಳಿ ನಿನ್ನ ಹತ್ತಿರಕ್ಕೆ ಬಂದೆನು, ಎ ಲೈ ಜಗನ್ನಾಥನೆ ! ನೀನು ನನಗೆ ಹಿತವನ್ನುಂಟುಮಾಡಬೇಕು. ನೀನು ನನ್ನಲ್ಲಿ ಅಕ್ಕರೆಯುಳ್ಳವನಾದರೆ ಆ ಪರತನ ಮುಖವು ಆ ಬಾಲೆಯ ದೃ ಸ್ಮಿಗೆ ಮಾತ್ರ ಕಪಿಯಂತೆ ಕಾಣುವಹಾಗೂ, ಇನ್ನೆಲ್ಲರಿಗೂ ಯಥಾಸ್ಥಿತ ವಾಗಿ ತೋರುವಂತೆಯ ಅನುಗ್ರಹಿಸಬೇಕೆಂದು ಬೇಡಿಕೊಂಡನು. ಅದಕ್ಕೆ ವಿಷ್ಣುವು ನಕ್ಕು ಹಾಗೆಯೇ ಆಗಲಿ! ನಿನ್ನ ಕೋರಿಕೆಯನ್ನು ನೆರವೇರಿಸಿ ಕೊಡುವೆನು ನೀನು ಹೋಗು ! ಎಂದು ಹೇಳಿ ಅವನನ್ನು ಕಳುಹಿಸಿಕೊಟ್ಟನು. ಆ ಮಾತನ್ನು ಕೇಳಿ ನಾರದನು ಸಂತುಷ್ಟನಾಗಿ ಗೋವಿಂದನಿಗೆ ವಂದನೆಯನ್ನು ಗೈದು, ನನ್ನಿಷ್ಟ್ಯವು ಕೈಗೂಡಿತಂದು ಮ ನದಲ್ಲಿ ನಲಿಯುತ್ತ ಅಯೋಧ್ಯೆಗೆ ತೆರಳಿದನು. ನಾರದನು ಹೊರಟುಹೋದ ಕೂಡಲೆ ಪರತನೂ ಬಂದು, ಮಾಧ ವನಡಿಗೆರಗಿ ರಹಸ್ಯವಾಗಿ ನಾರದನ ವರ್ತಮಾನವನ್ನು ತಿಳಿಸಿ, ತನಗೆ ಶ್ರೀಮತಿಯಲ್ಲಿರುವ ಅಭಿರುಚಿಯನ್ನು ಹೇಳೆ-ಎಳ್ಳೆ ಜಗತ್ಪತಿಯೆ ! ಶ್ರೀಮತಿಯು ನೋಡಿದರೆ ನಾರದನ ಮುಖವು ಕರಡಿಯ ಮುಖದಹಾಗೆ ಇರುವಂತೆ ಮಾಡು, ಮತ್ತಾರದೃಷ್ಟಿಗೂ ಹಾಗೆ ಕಾಣಿಸಲಾಗದು?? ಎಂದು ದೇವರನ್ನು ಕುರಿತು ಪ್ರಾರ್ಥಿಸಿಕೊಂಡನು. ಅದನ್ನು ಕೇಳಿ ನಾರಾಯಣನು -'ಎಲೈ ಮುನಿಯೆ ! ನೀನು, ಹೇಳಿದ ಹಾಗೆಯೇ ಆ ಗಲಿ ಬೇಗಹೋಗು ? ಎಂದು ಹೇಳಿ ಪರತನನ್ನು ಕಳುಹಿಸಿದನು. ತ ರುವಾಯ ಆ ಪರತನು ಶಿಘ್ರವಾಗಿ ಅಯೋಧ್ಯೆಗೆ ಬಂದು ಸೇರಿದನು, ಬಳಿಕ ಮುನಿಗಳಿಬ್ಬರೂ ಒಂದರೆಂಬ ಸಮಾಚಾರವನ್ನು ತಿಳಿದು, ರಾಯನು,-ಅಯೋಧ್ಯಾ ಪಟ್ಟಣವನ್ನು ಬಗೆಬಗೆಯಾದ ತೋರಣಗಳ೦ ದಲೂ, ಬಾವುಟಗಳಿಂದಲೂ ಅಲಂಕರಿಸುವಂತೆ ಅಪ್ಪಣೆ ಮಾಡಿದನು. ಪಟ್ಟಣದ ಬೀದಿಗಳಲ್ಲಿ ಅರಳುಗಳನ್ನೂ ಹೂಗಳನ್ನೂ ಎರಚಿ