ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ವಿದ್ಯಾನಂದ

  • yVVV Vytsq•••++4 PI

• • • ಹನ್ನೊಂದನೆಯ ಅಧ್ಯಾಯವು, ಎಲೈ ವತ್ಸನಾದ ಹನುಮಂತನ : ನೀನು ನನಗೆ ಏನು ಭಕ್ತನಾಗಿ ಬೇಡಿದುದರಿಂದ ನನ್ನ ವಿಷಯವನ್ನು ಹೇಳುವೆನು, ಕೇಳು ? ಈ ಗುಹ್ಯವಾದ ಜ್ಞಾನವನ್ನು ನೀನಾರಿಗೂ ತಿಳಿಸಬೇಡ. ಎಷ್ಟು ಪ್ರಯತ್ನ ಮಾಡಿದರೂ ಇದನ್ನು ದೇವತೆಗಳೂ ಬ್ರಾಹ್ಮಣರೂ ತಿಳಿಯಲಾರದೆ ಹೋಗಿದ್ದಾರೆ, ಇದು ಸಂಸಾರವನ್ನು ಬಿಟ್ಟ ಯೋಗಿಗಳಿಗೂ ಕೂಡ ತಿಳಿಯಲು ಶಕ್ತವಾಗಿಲ್ಲ. ಈ ರಹಸ್ಯವನ್ನೊಬ್ಬರಿಗೂ ತಿಳಸದೇ ನೀನು ರಕ್ಷಿಸಿಕೊಂಡಿರು ? ಭಕ್ತಿವಂ ತನ ವಂಶದಲ್ಲಿ ಬ್ರಹ್ಮವಾದಿಗಳ ಜನಿಸುವರು, ಆತ್ಮನು ಕೇವಲ ಸ್ನೇಚ್ಚನಾಗಿಯೂ, ಶಾಂತನಾಗಿಯೂ, ಸೂಕ್ಷನಾಗಿಯೂ, ಸನಾತನನಾಗಿ ಯೂ, ಇರುವನು. ಇದೂ ಅಲ್ಲದೆ ಅವನು ಸಾಂತಶ್ಯಾಮಿಯಾಗಿ ಯೂ ಚಿನ್ಮಯನಾಗಿಯೂ ತಮಸ್ಸಿಗೆ ಪರನಾಗಿಯೂ ಇರುವನು, ಶಿವ ನೇ ಪುರುಷನು, ಅವನೇ ಾಣಗಳು, ಅವನೇ ಮಹೇಶ್ವರನು, ಅವ ನೇ ಕಾಲಾಗ್ನಿಯು, ಅವನೇ ಅವ್ಯಕ್ಕನು' ಎಂದು ಪ್ರತಿಯು ಪ್ರತಿಪಾ ದಿಸುವುದು. ಅವನಿಂದಲೇ ಪ್ರಪಂಚವು ಹುಟ್ಟಿ ಅವನಲ್ಲಿಯೇ ಲೀನವಾಗುವದು. ಅವನು ಮಾಯಾವಿಯೂ, ಮಾಯಾಬದ್ದನೂ ಆಗಿ ವಿವಿಧವಾದ ಶರೀರ ಗಳನ್ನುಂಟುಮಾಡುವನು. ಅವನು ಹೋಗುವವನೂ ಅಲ್ಲ, ಹೋಗಿ ಕೊಳ್ಳುವವನೂ ಅಲ್ಲ, ಭೂಮ್ಯಂತರಿಕ್ಷ ಜಲರೂಪನೂ ಅಲ್ಲ, ಪ್ರಾಣ ಮನಸ್ಸು - ಕಬ್ದ - ಸ್ಪರ್ಶ ಇವುಗಳುಳ್ಳವನೂ ಅಲ್ಲ, ಅವನಿಗೆ ರೂಪ ರಸ ಗಂಧಾದಿಗಳೂ ಇಲ್ಲ, ಪಾಣಿ ಮೊದಲಾಗಿ ಅವಯವಗಳಾವುವೂ ಇಲ್ಲ, ಅವನು ಕರ್ತನೂ ಭೋಗ್ಯವೂ ಆಗಿಲ್ಲ, ಪ್ರಕೃತಿ ಪುರುಷ ಇವರಿಗೆ ಭಿನ್ನನಾಗಿಯೇ ಇರುವನು, ಮಾಯಾ ಸ್ವರೂಪನೂ ಅಲ್ಲ, ಬೆಳಕಿಗೂ ಕತ್ತಲೆಗೂ ಹೇಗೆ ಸಂಬಂಧವಿಲ್ಲವೋ ಹಾಗೆಯೇ ಪ್ರಪಂ ಚಕ್ಕೂ ಪರಮಾತ್ಮನಿಗೂ ಸಂಬಂಧವೇ ಇಲ್ಲ, ನೆರಳೂ ಮರಗಳೂ ಹೇಗೆ ಪರಸ್ಪರ ಫಿಲಕ್ಷಣಗಳೂ ಹಾಗೆಯೇ ಪ್ರಪಂಚವೂ ಪುರು