ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೪೫ WWWWymysories ವುಂಟಾಗಿರುವುದು, ಶಿಶ್ನರಲ್ಲದವರಿಗೆ ಇದನ್ನುಪದೇಶಿಸಬೇಡ ” ಎಂದ ಇವೇ ಮೊದಲಾದ ಕೆಲವು ವಿಷಯಗಳನ್ನು ತಿಳಿಸಿದನು. ಹನ್ನೊಂದನೆಯ ಅಧ್ಯಾಯವು ಮುಗಿದುದು. ಹನ್ನೆರಡನೆಯ ಅಧ್ಯಾಯವು. --0-- ಎಲೈ ಆಂಜನೇಯನೇ ! ಅವ್ಯಕ್ತದ ದೆಸೆಯಿಂದ ಕಾಲವೂ ಪ್ರಕೃ ತಿಯೂ ಪುರುಸನೂ ಜನಿಸಿರುತ್ತಾರೆ. ಇದರಿಂದ ಈ ಪ್ರಪಂಚವೆಲ್ಲವೂ ಹುಟ್ಟದಕಾರಣ ನಾನು ಜಗದ್ರೂಪನಾಗಿರುತ್ತೇನೆ, ಸದ್ವತ್ರ ಕೈಕಾಲುಗ ಳುಳ್ಳುದಾಗಿಯೂ, ಸದ್ವತ್ರ ಕಣ್ಣ ತಲೆ ಮುಖವುಳ್ಳುದಾಗಿಯೂ, ಸತ್ವ ತ್ರ ಕಿವಿಗಳುಳ್ಳದಾಗಿಯೂ, ಆ ಅವ್ಯಕ್ತವು ಸತ್ವವನ್ನೂ ವ್ಯಾಪಿಸಿಕೊಂಡಿರು ವುದು, ಸಮಸ್ತವಾದ ಇಂದ್ರಿಯ ಗುಣಗಳನ್ನೂ ಪ್ರಕಾಶಗೊಳಿಸುತ್ತ, ಆ ಸಮಸ್ತೇಂದ್ರಿಯ ವರ್ಜಿತವಾಗಿರುವುದು, ಆ ಅವ್ಯಕ್ತವು ಸಾಧಾರ ವಾಗಿಯೂ, ಸ್ಥಿರವಾದ ಆನಂದವುಳ್ಳದಾಗಿಯೂ ಸಜಾತೀಯ ವಿಜಾತೀ ಯ ಸ್ವ-ತಭೇದ ಶೂನ್ಯವಾಗಿಯೂ ಇದೆ ಇದಕ್ಕೆ ಹೋಲಿಕೆಯೇ ಇಲ್ಲ. ಶ್ರುತಿಪ್ರಮಾಣಾತೀತವಾಗಿ ಶ್ರುತಿಗೋಚರವಾಗಿರುವುದು, ಸಿಟ್ಟಕಲ್ಪವೂ ನಿರಾಭಾಸವೂ, ಸಾಭಾಸವೂ, ಪರಾಮೃತವೂ, ಶಾಶ್ವತವೂ, ನಿರ್ಗುಣ ವಾದ ಪ್ರೇಮವೂ, ಆದ ಆ ಅವ್ಯಕ್ತವನ್ನು ಜ್ಞಾನವೆಂಬುವುದಾಗಿ ವಿದ್ವಾ, ಸರು ಹೇಳುವರು, ಆ ಜ್ಞಾನವೇ ಆತ್ಮನು, ಅವನು ಸಮಸ್ಯವಾದ ಭೂತ ಗಳಒಳಗೂ ಹೊರಗೂ ವ್ಯಾಪಕನಾಗಿರುವನು. ಶಾಂತನೂ, ಜ್ಞಾನರೂಪನೂ, ಮಹೇಶ್ವರನೂ, ಅವ್ಯಕ್ತರೂಪನೂ ಅದ ನನ್ನಿಂದ ಈ ಜಗತ್ತೆಲ್ಲವೂ ಆವರಿಸಲ್ಪಟ್ಟಿರುವುದು, ಸರ್ವ ಭೂತ ಗಳೂ ನನ್ನೊಳಗೇ ಇರುವುವು, ಈ ವಿಷಯವನ್ನು ಯಾರು ಬಲ್ಲರೋ ಅವರೇ ವೇದವನ್ನು ಬಲ್ಲವರಾಗಿದ್ದಾರೆ. ಪ್ರಕೃತಿ ಮತ್ತು ಪುರುಷರೆಂಬ ಎರಡು ತತ್ವಗಳುಂಟ ? ಅವರಿಬ್ಬರಿಗೂ ಕಾಲವು ಸಂರೋಜಕವಾಗಿ