ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪e ವಿದ್ಯಾನಂದ ೧. ಸರೈ ಯಜ್ಞಗಳಿಗೂ ಭೋಗ್ಯವೂ ಫಲಪ್ರದವೂ ಆಗಿದ್ದೇನೆ ಸರೈ ದೇವ ರೂಪನಾಗಿ ಸಲ್ವರಿಂದಲೂ ಸ್ತುತಿಸಲ್ಪಡುತ್ತಿದ್ದೇನೆ. ವ್ಯಾಲ್ಕಕರು ನನ್ನನ್ನೇ ನೋಡುತ್ತಿರುವರು. ಆ ಧಾಗ್ನಿಕರಿಗೆ ನಾನು ನಿತ್ಯವೂ ಸಮಾಜಸ್ಥನಾಗಿ ರುವನು, ಭಕ್ತರು ನನ್ನನ್ನು ಯಾವಾಗಲೂ ಸೇವಿಸುವರು, ನಾಲ್ಕು ವರ್ಣದವರೂ ನನ್ನನ್ನು ಧ್ಯಾನಿಸುವರು, ನಾನು ಅವರಿಗೆ ಆನಂದರೂಪ ವಾದ ಪದವಿಯನ್ನು ಕೊಡುವನು, ಕರಹೀನರಾದ ಕೂದ್ರರೇ ಮೊದ ಉದವರು ನನ್ನಲ್ಲಿ ಭಕ್ತಿಯುಕ್ತರಾಗಿದ್ದರೆ ಅವರ ಕಾಲದಲ್ಲಿ ಮುಕ್ತಿಯ ನ್ನು ಪಡೆಯುವರು, ನನ್ನ ಭಕ್ತರಿಗೆ ನಾಶವಿಲ್ಲ. ಅವರ ಪಾಪವೆಲ್ಲವೂ ಹೋಗಲಾಡಿಸಲ್ಪಡುವುದು, ಈ ವಿಷಯವಾಗಿ ನಾನು ಮೊದಲೇ ಪ್ರತಿಜ್ಞೆ ಮಾಡಿರುವೆನು. ಯಾರು, ದೇವದೇವನಾದ ಆತ್ಮನನ್ನು ನಿಂದಿಸುವರೋ ಅವರು ಕೆಡುವರು, ಯಾರು ಭಕ್ತಿಯಿಂದ ಪೂಜಿಸುವರೋ ಅವರು ಗೌರ ವವನ್ನು ಪಡೆಯುವರು, ನನ್ನ ಪೂಜಾ ನಿಮಿತ್ತವಾಗಿ ಎಲೆ, ಹೂ, ಹಣ್ಣು, ನೀರು, ಯಾವುದನ್ನಾದರೂ ಸರಿಯೇ ಭಕ್ತಿಯಿಂದರ್ಪಿಸಿದರೆ ಅವ ರು ನನ್ನ ಪ್ರೇಮಪಾತ್ರರಾಗುವರು, ಈ ಪ್ರಪಂಚಕ್ಕೆ ಮೊದಲೇ ನಾನು ಪರಮೇವಿಯಾದ ಬ್ರಹ್ಮನನ್ನು ನಿರ್ಮಿಸಿ ಅವನಿ ನಿನ್ನ ಮುಖೋದ್ಧ ತವಾದ ಅಶೇಷ ವೇದಗಳನ್ನೂ ಹೇಳಿಕೊಟ್ಟೆನು, ನಾನು ಸರ್ವಯೋಗಿ ಗಳಿಗೂ ಗುರು: ನಾಶರಹಿತನು, ಧಾರ್ಮಿಕರನ್ನು ಕಾಪಾತವನು, ವೇದ ದೂಷಕರನ್ನು ನಾಶಮಾ ಸುವೆನು., ಬೋಗಿಗಳನ್ನು ಸಂಸಾರದಿಂದ ಬಿಡಿ ಗಡೆ ಮಾಡುವವನೂ ನಾನೇ, ಸರ್ವ ಸಂಸಾರ ವರ್ಜಿತನಾಗಿ ಸಂಸಾರ ಹೇತುವಾಗಿರುವವನೂ ನಾನೆ; ನಾನು ಸೃಷ್ಟಿಸಿ ಗಾಲಿಸಿ ಸಂಹರಿಸಬಲ್ಲನು. ನನ್ನ ಶಕ್ತಿಯೇ ಮಾಟೇ; ಇದು ಲೋಕವನ್ನೆಲ್ಲಾ ಮೋಹಿಸುವುದು, ನನ್ನ ಪರಾ ಶಕ್ತಿಯು ವಿದ್ಯೆಯೆಂದು ಹೇಳಲ್ಪಡುವುದು, ಅದರಿಂದ ಯೋಗಿಗಳ ಹೃದ್ಧತವಾದ ಮಾಯೆಯನ್ನು ಹೋಗಲಾಡಿಸುವೆನು, ಸಮಸ್ತ ಶಕ್ತಿಗಳ ಪ್ರವರ್ತನೆಗೂ ನಿವರ್ತನೆಗೂ ನಾನೇ ಕಾರಣನು, ನಾನು ಸರ್ವ ಶಕ್ತಿಗ ಆಗೂ ಆಧಾರನಾಗಿರುವನು. ಅಮೃತಕ್ಕೆ ನಿಧಿಯಾಗಿರುವನು, ಸಾಂ ತಲ್ಯಾಮಿಯಾದ ಶಕ್ತಿಯೊಂದೇ ವಿವಿಧವಾದ ಜಗತ್ತನ್ನು ಸೃಷ್ಟಿಸುವುದು. ವಿಷ್ಣು ರೂಪವಾದ ಇನ್ನೊಂದು ಶಕ್ತಿಯು ಜಗತ್ತನ್ನು ಪರಿಪಾಲಿಸುವುದು.