ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈv ವಿದ್ಯಾನಂದ

YVV V/\/YYY ww ಆದರೂ ಅವನ ಸಂಹಾರವು ಅಮ್ಮ ಪ್ರಶಂಸಾಹವಲ್ಲವೆಂದು ನನಗೆ ತೋರುವುದು ಎಂದು ನುಡಿದಳು, ಆ ಮಾತನ್ನು ಕೇಳಿದೊಡನೆಯೇ ಋಷಿಗಳೆಲ್ಲರೂ ಪರಮಾಶ್ಚಯ್ಯ ಭರಿತರಾಗಿ “ಇದೇನೆಂದು” ಒಬ್ಬರಮುಖ ನನ್ನೊಬ್ಬರು ನೋಡಿಕೊಂಡು “ಈ ಸೀತೆಯು ಅಯೋನಿಜೆಯಾಗಿ ಕಕು ಈ ಸ್ಥ ಕುಲವನ್ನಾಶ್ರಯಿಸಿ ನಮ್ಮನ್ನು ಹಾಸ್ಯಮಾಡುವಳೋ ಏನೋ ನಮಗೆ ಬೇರೆ ಗೊತ್ತಾಗುವುದಿಲ್ಲ', ಎಂದು ತಮ್ಮ ವ್ಯಕೆ ತಾವೇ ಮಾತನಾಡಿ ಕೊಂಡರು. ಮುನಿಗಳಾಡಿದ ನುಡಿಯನ್ನು ನೀತಯು ಕೃತಾಂಜಲಿ ಪುಟಳಾಗಿ ಭಯದೊಡನೆ “ಎಲೈ ಮುನಿಗಳ ನಾನು ಇತರ ಜನಗಳಂತ ಸುಳ್ಳಾಡು ವಳಲ್ಲ. ನನಗಪ್ಪಣೆಯನ್ನಿತ್ತರೆ ಆ ವಿಷಯವನ್ನು ಸಾಂಗವಾಗಿ ಹೇಳು ವೆನು, ಕೇಳಬಹುದು ' ' ಎಂದು ತಿಳಿಸಿದಳು, ಆಕೆಯನುಡಿಯನ್ನು ಲಾಲಿಸಿ, ಕಿಡಿಗಳು ಪ್ರೀತರಾಗಿ -“ಎಲ್‌ ತಾಯೇ ಹೇಳಬೇಕು” ಎಂದು ಕೇಳಿಕೊಂಡರು, ಆಗ ಸೀತೆಯು ಹೇಳತೊಡಗಿದಳು- ಎಲೈ ಮುನೀಶ್ವರರೆ ! ಮದು ವೆಯಾಗುವುದಕ್ಕೆ ಮೊದಲು ನಾನು ತಂದೆಯಮನೆಯಲ್ಲಿದ್ದಾಗ ಅತಿಥಿಯೊ ಬೃನು ಬ್ರಾಹ್ಮಣರೂಪದಿಂದ ಬಂದು “ನಾಲ್ಕು ವರ್ಷ ನಾಲ್ಕು ತಿಂಗಳು ನಿನ್ನ ಮನೆಯಲ್ಲಿ ವಾಸಮಾಡುವೆನು, ನಿನು ಸೇವಾಪರನಾಗಿದ್ದ ಪಕ್ಷದಲ್ಲಿ ದೇವತೆಗಳಿಗೆ ಸಮನಾಗುವೆ' ಎಂದು ನನ್ನ ತಂದೆಗೆ ತಿಳಿಸಿದನು. ನನ್ನ ತಂದೆಯಾದ ಜನಕನೂ, ಸ್ವಭಾವದಿಂದಲೇ ದೇವದ್ವಿಜ ಭಕ್ತಿ ಯುಳ್ಳವನಾ ದುದರಿಂದ ಆ ಬ್ರಾಹ್ಮಣನನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡು ಅವನಿಗೆ ಬೇಕಾದ ಭಕ್ಷ್ಯಗಳನ್ನು ಹಾಕಿಸಿ ಸಂತೋಷಪಡಿಸುತ್ತ ನನ್ನ ನ್ನು ಆತನ ಸೇವೆಯಲ್ಲಿ ನಿಯೋಜಿಸಿದನು, ನಾನು ರಾತ್ರಿ ಹಗಲೂ ಜಾಗ ರೂಕಳಾಗಿದ್ದು ಕೊಂಡು ಆತನು ಯಾವಾಗ ಏನು ಅನ್ನುತ್ತಿದ್ದನೋ ಅದ ನೆಲ್ಲಾ ಜಾಗ್ರತೆಯಿಂದ ನೆರವೇರಿಸುತ್ತಿದ್ದೆನು, ಆ ಮಹಾತ್ಮನು ನಾನಾ ತೀರ್ಥಗಳ ಯಾತ್ರೆಯನ್ನು ಮಾಡಿದವನಾದದರಿಂದ ಅಲ್ಲಲ್ಲಿನ ಕಥೆಗಳನ್ನು ನನಗೆ ತಿಳಿಸುತ್ತ ನನ್ನ ಸೇವೆಯಿಂದ ತುಷ್ಯನಾಗಿ ಒಳ್ಳೆಯ ಮಾತಿನಿಂದ ನನಗೇನನ್ನು ತಿಳಿಸಿದನೋ ಅದನ್ನು ನಿಮಗೆ ತಿಳಿಸುವೆನು, ಕೇಳಿ ?