ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ 42 vvy ನೆಯೂ ಕೂಡಿ ರಾಜ್ಯವನ್ನು ನಿಷ್ಕಂಟಕವಾಗಿ ಕಾಪಾಡುತ್ತಿದ್ದನು, ವಿಶೇಷ ವಾಗಿಯಜ್ಞಯಾಗಾದಿಗಳಿಂದ ದೇವತೆಗಳನ್ನೂ ಬ್ರಾಹ್ಮಣರನ್ನೂ ಮುಚ್ಚಿ ಸುತ್ತಿದ್ದನು. ದೇವತೆಗಳೆಲ್ಲರೂ ಕತ್ರುನಾಶನದಿಂದ ಶ್ರೀ ರಾಮನಿಗೆರಗಿ ತಮ್ಮ ಸ್ಥಾನಕ್ಕೆ ತರಳಿದರು. ಎಲೈ ಭರದ್ವಾಜನೆ 1 ಈ ರಾಮಚರಿತವನ್ನು ನಿನಗೆಸಾಂಗವಾಗಿ ತಿಳಿ ಇದೆನು. ಇದು ಪೂತ್ವದಲ್ಲಿ ಸತ್ಯಲೋಕದೊಳಗೆ ಬಹು ಗೋಪ್ಯವಾಗಿ ದ್ವಿತು.ಇದರೊಳಗೆ ಒಂದು ಶ್ಲೋಕವನ್ನಾಗಲಿ ಅದರ ಅರ್ಥವನ್ನಾಗಲಿ ಯಾರು ಓದುವರೋ ಅಥವಾ ಕೇಳುವಲ್ಲಿ ಅವರು ಮುಕ್ತರಾಗುವರು. ಇಪ್ಪತ್ತೈದುಸಾವಿರ ರಾಮಾಯಣಗಳನ್ನೋದಿದರೆ ಯಾವ ಫಲವು ಬರು ವುದೋ ಅದೇ ಫಲವು ಈ ಅದ್ಭುತರಾಮಾಯಣದ ಒಂದು ಶ್ಲೋಕದ ಕ್ರವಣ ಮಾತ್ರದಿಂದಲೇ ಲಭಿಸುವುದು, ಇದು ವೇದ ಗಳಿಗಿಂತಲೂ ಶ್ರೇಷ್ಠವಾದುದು, ದೇವ ನದೀತಟದಲ್ಲಿ ನಾನಿದನ್ನು ಇಂದ್ರನಿಗೆ ತಿಳಿಸಿ ದೈನು.ಅದನ್ನೇ ನಿನಗೂ ಉಪದೇಶಮಾಡಿರುವೆನು, ಈರಾಮಾಯಣವೆಂಬ ಮಹಾ ರತ್ನವು ಬ್ರಹ್ಮನಹೃದಯ ಸಾಗರದಲ್ಗೊಗೆಯಿತು. ನಾರದನ ಮೂಲಕ ಇದು ನನ್ನ ಹೃದಯದಲ್ಲಿ ಪ್ರತಿಫಲಿಸಿತು, ರಾಮಾಯಣಗಳಲ್ಲಿ ಕೆಲವು ಭೂಲೋಕದಲ್ಲಿಯೂ ಕೆಲವು ನಾಗಲೋಕದಲ್ಲಿಯೂ ಇರುವುವು. ಬ್ರಹ್ಮನೂ, ನಾರದನೂ ನಾನೂ ಅಂತು ಮೂವರೇ ಈ ರಾಮಾಯಣದ ಪಾರವನ್ನು ಕಂಡಿರುವೆವು, ಇನ್ನಾರಿಗೂ ತಿಳಿದಿಲ್ಲ. ನೀನಿದನ್ನು ತಿಳಿದು ನಿಶ್ಚಲನಾಗಿರು ಅದ್ಭುತಕಾಂಡದಲ್ಲಿ ಹೇಳಿದುದನ್ನೆಲ್ಲಾನಾನು ನಿನಗೆ ತಿಳಿಸಿ ದೆನು, ಸೀತಾರಾಮರ ಜನ್ಮ ವೃತ್ತಾಂತವನ್ನು ಸಾಂಗವಾಗಿ ಹೇಳಿದೆನಷ್ಟೆ! - ನಾರದನಿಂದಶಪ್ತಳಾದ ಲಕ್ಷ್ಮಿ ಯು, ದಂಡಕಾವನದಲ್ಲಿದ್ದ ಮುನಿಗಳ ಶೋಣಿತ ನಿಮಿತ್ತದಿಂದ ಮಂಡೋದರಿಯ ಗರ್ಭಸ್ಥಿತಿಯನ್ನು ಹೊಂದಿ ದಳು, ಭಾರ್ಗವನಿಗೆ ಶ್ರೀರಾಮನ ವಿಶ್ವರೂಪ ವಿಲೋಕನವು ಸಮನಿ ಸಿತು. ಬುಷ್ಯಮೂಕದಲ್ಲಿದ್ದ ಸುಗ್ರೀವನೊಡನೆ ಭಿಕ್ಷರೂಪದಿಂದ ಬಂದ ಹನುಮಂತನಮೂಲಕ ಶ್ರೀರಾಮನಿಗೆ ಸಖ್ಯವುಂಟಾಯಿತು. ಲಕ್ಷಣನು ಸಮುದ್ರವನ್ನು ಒಣಗಿಸಿದನು. ಶ್ರೀರಾಮನು ರಾಜ್ಯವನ್ನು ಹೊಂದಿ, ಮುನಿ