ಮೊದಲಾದ ಕೆಲವು ಗ್ರಂಥಗಳನ್ನು ಓದಿದಮೇಲೆ ಕನ್ನಡದಲ್ಲಿ ಮುದ್ರಿತವಾಗಿರುವ ಕಾವ್ಯರೂ ಪವಾದ ಅದೈತ ಪ್ರಕರಣಗಳೊಳಗೆ ಯಾವುದು ಚೆನ್ನಾಗಿರುವುದೆಂದು ಪ್ರಶ್ನೆ ಮಾಡಲಾಗಿ, ನಾನು ನಿಜಗುಣ ಕವಿರಚಿತವಾದ ಅನುಭವಸಾರವೆಂಬ ಗ್ರಂಥವನ್ನು ಸೂಚಿಸಿದೆನು. ಅವರು ಅದಕ್ಕೆ ಸಮ್ಮತಿಸಿ, ಮುದ್ರಿತವಾದ ಒಂದು ಪುಸ್ತಕವನ್ನು ತರಿಸಿ ಓದುವುದಕ್ಕಾರಂಭಿಸಿದರು. ಆ ಪುಸ್ತಕದಲ್ಲಿ ಅಕ್ಷರ ಸ್ಟಾಲಿತ್ಯ, ಅಕ್ಷರವ್ಯತ್ಯಾಸ ಮುಂತಾದ ಅನೇಕ ತಪ್ಪುಗಳಿದ್ದುದರಿಂದ ಆದ್ಧವನ್ನು ತಿಳಿಯುವುದು ಸ್ವಲ್ಪ ಕಷ್ಟವಾಯಿತು. ಗ್ರಂಥವನ್ನು ಸಾಂಗವಾಗಿ ಓದಿ ಪೂರೈಸಿದ ಮೇಲೆ ಈ ಗ್ರಂಥಕ್ಕೆ ಯಥಾಶ್ರುತವಾದ ಅರವು ತೋರುವಂತೆ ಕನ್ನಡದಲ್ಲಿ ಸುಲಭಮಾರ್ಗ ಧಿಂದ ಟಿಪ್ಪಣಿಯನ್ನು ಬರೆಯಬೇಕೆಂದು ನನಗೆ ಹೇಳಿದುದರಿಂದ ನಾನು ಮೂರು ನಾಲ್ಕು ಪುರಾತನ ಪ್ರತಿಗಳನ್ನು ಸಂಪಾದಿಸಿ, ಮೂಲವನ್ನು ಚನ್ನಾಗಿ ಪರಿಷ್ಕರಿಸಿಕೊಂಡು, ನನ್ನ ತಿಳು ವಳಿಕೆಯಿದ್ದ ಮಟ್ಟಿಗೆ ಟಿಪ್ಪಣಿಯನ್ನು ಮಾಡಿಕೊಟ್ಟೆನು. ಅವರು ಇದನ್ನು ಲೋಕೋಪಕಾ ಕಾರವಾಗಿ ತಮ್ಮ ಮುದ್ರಾಶಾಲೆಯಲ್ಲಿ ಮುದ್ರಣಮಾಡಿಸಿದರು. ಈ ಗ್ರಂಥವನ್ನು ಸಾವಧಾ ನದಿಂದ ಓದಿ ಅಗ್ಗವನ್ನು ತಿಳಿದವರಿಗೆ ಅದೈತ ಮತದ ತತ್ವವು ಕರತಲಾಮಲಕವಾಗದಿರಲಾ ರದೆಂದು ನಂಬುತ್ತೇನೆ.
ಪುಟ:ಅನುಭವಸಾರವು.djvu/೧೨
ಈ ಪುಟವನ್ನು ಪರಿಶೀಲಿಸಲಾಗಿದೆ
೪
ಕರಿಬಸವಶಾಸ್ತ್ರಿ, ಕರಾಟಕ ಪಂಡಿತ,
ಮೈಸೂರು ಮಹಾರಾಜಾ ಕಾಲೇಜ್
ಮೈಸೂರು, ತಾರಿ ೬ ನೇ ಏಪ್ರಿಲ್ ೧೯೦೪,