ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ

೧೮

ಏನೋ ಉತ್ತರ ಕೊಡಬೇಕೆಂದಿದ್ದ ಪಾಂಡ್ಯ. ಆದರೆ ಸ್ವರ ಗೊರಕ್
ಗೊರಕ್ ಎಂದು ಗಂಟಲಲ್ಲೆ ಅಡಗಿ ಹೋಯಿತು.
ಇಬ್ಬರೂ ರೈಲುಕಂಬಿಗಳನ್ನು ದಾಟಿ ಆ ಜಾಗಾದತ್ತ ಸಾಗಿದರು.
....ಲೆಕ್ಕಾಚಾರದಲ್ಲಿ ಪಾಂಡ್ಯ ಗಟ್ಟಿಗ. ಎರಡೆರಡೇ ರೂಪಾಯಿಯಲ್ಲಿ
ಕೆಲಸ ತೀರಿಸಿದ. ಆತನ ನಗೆಯೋ ! ಅತನಾಡಿದ ಅಸಹ್ಯ ಮಾತುಗಳೊ!
ದೊರೆತ ಉತ್ತರಗಳೊ!
ಹಿಂದಿರುಗಿದಾಗ ಅಲ್ಲಿಯೇ ಎಲ್ಲಾದರೂ ಕುಸಿದು ಬೀಳಬೇಕೆನ್ನಿಸಿತು
ಕೊಂಡಯ್ಯನಿಗೆ. ತನ್ನ ಹೃದಯ ಕಳೆದುಹೋದ ಹಾಗೂ, ತಾನು ಗತ
ಪ್ರಾಣನಾದ ಹಾಗೂ,ಆತನಿಗೆ ಅನ್ನಿಸಿತು.
ಆ ರಾತ್ರಿಯನ್ನು ಹೇಗೆ ಕಳೆದನೋ ! ಥ್ರೀ - ಅಫ್ ಘೋರ್ -ಡೌನ್,
ಮದ್ರಾಸ್ ಗಾಡಿ.....ಶೀತಲಗಾಳಿ; ಹಲ್ಲನ್ನು ಕುಟುಕುಟು ಎನ್ನಿಸುತ್ತಿದ್ದ ಛಳಿ;
ಒಂದರ ಮೇಲೊಂದಾಗಿ ಸುಟ್ಟು ನಾಶವಾದ ಸರಪಳಿ ಸಿಗರೇಟುಗಳು.....
ಗೋಗರೆಯುತ್ತಿದ್ದ ಹೃದಯವನ್ನೆತ್ತಿಕೊಂಡು ಕೊಂಡಯ್ಯ ಮುಂಜಾವ
ದಲ್ಲಿ ಮನೆಗೆ ಮರಳಿದ.
ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಕೋಟು ಮೇಲೆಯೇ ಇತ್ತು. ಬೂಟ್ಸು
ಕಾಲಿಗೆ ಕಿರೀಟವಾಗಿಯೇ ಉಳಿಯಿತು. ತುಂಬ ಚಡಪಡಿಸಿದ ಮೇಲೆ, ನಿದ್ರೆ
ಒಲಿಯಿತು.
ಹನ್ನೋಂದರ ಸುಮಾರಿಗೆ "ಗೋ ಓ ಓ........ಎಂಬ ಗದ್ದಲದ ಸಪ್ಪಳ
ಸಮೀಪದಿಂದಲೇ ಕೇಳಿಸಿ ಕೊಂಡಯ್ಯನಿಗೆ ಎಚ್ಚರವಾಯಿತು. ಹಲವು
ಸಹಸ್ರ ಕಂಠಗಳ ಗುಜುಗುಜು ಗೊಣಗೊಣವೇ ವಾತಾವರಣ ತುಂಬ
ಹಬ್ಬಿತ್ತು. ವರ್ಕ್ ಶಾಪ್ ಗೇಟಿನಿಂದ ಆ ಸಪ್ಪಳ ಬರುತ್ತಲಿತ್ತು.
ಕೊಂಡಯ್ಯ ಜಿಗಿದೆದ್ದು ಅಲ್ಲಿ ಧಾವಿಸಿದ. ಹತ್ತರ ಸುಮಾರಿಗೆ ವರ್ಕ್
ಶಾಪಿನ ಇಬ್ಬರು ಪ್ರಮುಖ ಕೆಲಸಗಾರರಿಗೆ ಡಿಸ್ ಮಿಸ್ ಆಜ್ಞೆ ಬಂತಂತೆ
ಅದನ್ನು ಪ್ರತಿಭಟಿಸಿ ಮಿಂಚಿನ ಮುಷ್ಕರ ನಡೆದಿತ್ತು. ಆದರೆ ಆ ಮೂರು
ಸಾವಿರ ಕಾರ್ಮಿಕರು ಹೊರಹೋಗದಂತೆ ಗೇಟುಮುಚ್ಚಿ, ಪೋಲೀಸರಿಬ್ಬರು
ಕಾವಲು ನಿಂತಿದ್ದರು.