ಈ ಪುಟವನ್ನು ಪ್ರಕಟಿಸಲಾಗಿದೆ



೪೦

ಅನ್ನಪೂರ್ಣಾ

ಈ ದಿನ ಹೋದಾಗ ನನ್ನ ಕಮಲ ಅರಳಿತು.ಪೂರ್ಣವಾಗಿ-
ಸಂಪೂರ್ಣವಾಗಿ ಅರಳಿತ್ತು; ಹುಣ್ಣಿಮೆಯ ಚಂದ್ರನಂತೆ ಅರಳಿತ್ತು. ಅದರ
ಚೆಲುವಿಗೆ ನಾನು ಮರಳಾದೆ. ಅದರ ಶೋಭೆಗೆ ಮನಸೋತೆ. ಏನು
ಚೆನ್ನಾದ ಪುಷ್ಪ !
ನನ್ನನ್ನು ನಾನು ಮರೆತು, ಹಾಗೆಯೇ ಕೊಳಕು ಕೊಳದ ಆ ಒಂದೇ
ಒಂದು ಕಮಲದತ್ತ ದೃಷ್ಟಿಯಿಡುತ್ತಾ ಈ ಕಡೆ ನಾನು ನಿಂತಿದ್ದೆ. ಆ ಕಡೆ ಅವ
ಳಿದ್ದಳು. ಮುದರೆ! ಸ್ನಾನ ಮಾಡಿ ಮನೆಗೆ ಹೋಗಲು ಹೊರಟು ನಿಂತಿದ್ದಳು.
ಕೊಳದತ್ತ ನೋಡುತ್ತಲಿದ್ದ ನನ್ನನ್ನೇ ದಿಟ್ಟಿಸುತ್ತಿದ್ದಳು. 'ನೀರಲ್ಲಿ ಏನು
ಕಳಕೊಂಡಿದ್ದಾನೆ. ಈ ಪ್ರಾಣಿ ' ಎಂದು ಭಾವಿಸುತ್ತಿದ್ದಿರಬೇಕು. ನಾನು
ತಲೆತ್ತಿದೆ. ಪರಸ್ಪರ ನೋಡಿಕೊಂಡೆವು. ಅನಿವಾರ್ಯವಾಗಿ ಒಂದು
ಮುಗುಳ್ನಗು ನನ್ನ ಮುಖವನ್ನಾಕ್ರಮಿಸಿತು. ಅಷ್ಟು ದೂರದಲ್ಲಿ ಆಕೆಗೆ ಅದು
ಕಂಡಿರಬಹುದೇ ? ಒಡನೆಯೇ ತಲೆ ತಗ್ಗಿಸಿ ತಿರುಗಿ ಹೋದವಳು ನಕ್ಕಿರ
ಬೇಕೆಂದು ನನ್ನ ವಿಶ್ವಾಸ.
ಅಂತೂ ಕೊಳದಲ್ಲೊಂದು ಕಮಲ....ಕೊಳದ ಹೊರಗೊಂದು
ಕಮಲ....
ದುರಂತ ! ಈ ಶಬ್ದದ ಪ್ರತ್ಯಕ್ಷಾನುಭವ ನನಗಾಯಿತು.
ಕಳೆದ ರಾತ್ರಿಯಿಡೀ ನಿದ್ದೆಯಿರಲಿಲ್ಲ ; ಢಿಕ್ಕೀ ಢಮಾ ಡುಮ್ಕ್ ಢಿಕೀ
ಎಂಬ ದುಡಿಯ ಸದ್ದಿನ ಕಾರಣದಿಂದ.
ಮಧ್ಯಾಹ್ನ ಊಟದ ಬಳಿಕ ವಿಶ್ರಾಂತಿಗೆಂದು ಒರಗಿಕೊಂಡೆ....ಆಗಲೂ
ಅದೇ ದುಡಿ ವಾದನ. ನಾನು ಸಿಟ್ಟಿಗೆದ್ದು ಕೆಲಸದವಳನ್ನು ಕೂಗಿ "ಅದೆಂಥಾ
ಸದ್ದು ? " ಎಂದೆ.
" ಮುದರೆಯ ಮದುವೆ " ಎಂದು ಉತ್ತರ ಬಾಮತು.
ಸರಿ. ಮತ್ತೆ ಎಲ್ಲಿಯ ನಿದ್ದೆ ನನಗೆ ?
ದುಡಿಯ ಸದ್ದು ನನ್ನ ಕಿವಿಗಳಲ್ಲಿ ಬಲವಾಯಿತು. ಮುದರೆಯ
ಮದುವೆ, ಮುದರೆಯ ಮದುವೆ ಎಂದು.
ಕೊಳದತ್ತ ಧಾವಿಸಿದೆ.