ಈ ಪುಟವನ್ನು ಪ್ರಕಟಿಸಲಾಗಿದೆ

ಕೇರಾಫ್ ಕಾಗದ

೫೯

ಪದ್ಧತಿ. ಬೆಟ್ಟದ ಏರಿಯನ್ನು ತಲುಪಿ, ಒಂದು ಹಾಸುಗಲ್ಲನ್ನಾರಿಸಿ ಪಡು
ವಣಕ್ಕೆ ಮುಖತಿರುವಿ, ಕುಳಿತ ಮೇಲೆ ಮಾತ್ರವೇ ಮಾತುಕತೆ.
ಆದರೆ ನಮ್ಮ ಹುಡುಗರೋ ! ನಾನು ಶೀಲಾ ನಡೆದು ಹೋಗುತ್ತಿ
ದ್ದರೆ, ನನ್ನನ್ನು ಯಾರೂ ಲಕ್ಷಿಸುವದೇ ಇಲ್ಲ. ಎಲ್ಲರೂ ಶೀಲಳನ್ನು ನೋಡು
ವವರೇ! ಅವರ ತುಂಟು ತುಟಿಗಳ ಕೃತಕ ಕಂಪನ, ಕಣ್ಣುಗಳ ಬಾಷೆ, ಕ್ಷಣಿಕ
ಹೃದಯ ಸ್ತಂಭನ - ಅಬ್ಬಬ್ಬ ! ಮೂವತ್ತು ವರ್ಷಗಳ ಹಿಂದೆ ನಾನೂ ನನ್ನ
ಓರಿಗೆಯವರೂ ರಸಿಕ ಶಿಖಾಮಣಿಗಳೆಂದು ಪ್ರಖ್ಯಾತರಾದವರು. ಆದರೆ
ಈಗಿನವರಷ್ಟು ಎದೆಗಾರಿಕೆ ಇರಲಿಲ್ಲವಪ್ಪ ನಮಗೆ !
ನಮ್ಮ ಶೀಲಾ ಪೆದ್ದು ಹುಡುಗಿ ಎಂತ ನಾನೆಂದೂ ತಿಳಿದವನಲ್ಲ.
ದೃಷ್ಟಿ ಹಾಯಿಸುವ ನೂರುಹುಡುಗರನ್ನೆಲ್ಲ ಕ್ಷಣಾರ್ಧದಲ್ಲೇ ತೂಗಿ ಅಳೆಯ
ಬಲ್ಲ ಸಾಮರ್ಥ್ಯವಂತೆ ಆಕೆ....
ಯೋಚನೆಗೆ ಮತ್ತೆ ತಡೆಯೊಡ್ಡಿತು, ಆ ಕಾಗದ. ನೋಡಿದಿರಾ,
ಶೀಲ ನನಗೆ ಹೇಳಲೇ ಇಲ್ಲ. ಆ ವಿಚಾರ; ಹೋಗಲಿ ಬಿಡಿ. ನನಗೂ
ಅದಕ್ಕೂ ಏನು ಸಂಬಂಧ? ಆಕೆಯ ಮೇಲೆ ನನಗೆ ವಿಶ್ವಾಸವಿಲ್ಲವೆ?
ಆದರೂ....ಆದರೂ....ಒಂದು ವೇಳೆ ಆ ಹುಡುಗ ಶುದ್ಧ ಲಫಂಗ
ನಾದರೆ? ಶೀಲೂ ಮೋಸ ಹೋದರೆ? ಕಲ್ಲನ್ನೇರಿ ಕುಳಿತಾಗ ಸೂರ್ಯ
ರಶ್ಮಿಯ ಹೊಂಬಣ್ಣ ಶೀಲಳ ಮುಖಕ್ಕೆ ಹೊಸ ಶೋಭೆ ತಂದಿತು.
ಎಷ್ಟೊಂದು ಉಲ್ಲಸಿತಳಾಗಿದ್ದಾಳೆ ಹುಡುಗಿ ! ಹುಂ. ಎಲ್ಲಿ ಅವಿತಿಟ್ಟಳೋ
ಆ ಕಾಗದಾನ ? ಜಂಪರಿನೊಳಗೆ ? ಹಾಸಿಗೆಯ ಕೆಳಗೆ ? ಪುಸ್ತಕದ....?
ಛೆ! ಆ ಬಗ್ಗೆ ಯೋಚಿಸಬಾರದೆಂದು ಮತ್ತೆ ಮನಸ್ಸು ಬಿಗಿ ಹಿಡಿದೆ.
............
" ಶೀಲಾ "
" ಹೂಂ? "
" ಏಳು ವರ್ಷದ ಹಿಂದೆ, ಅಕ್ಕನನ್ನೂ ನಿನ್ನನ್ನೂ ಇಲ್ಲೇ ಬಿಟ್ಟು
ನಾನೊಬ್ಬನೇ ಹಳ್ಳಿಗೆ ಹೋದದ್ದು ಹತ್ತಾರು ದಿನ, ಗೊತ್ತಾ? "
" ಓಹೋ....ಹತ್ತು ವರ್ಷ ಆಗ ನನಗೆ. "
" ಹೂಂ. ಅಲ್ಲಿ ಶಂಕ್ರಯ್ಯನ ಮನೆಯಲ್ಲಿದ್ದೆ. "