ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣೀಭವಾನಿ. ೧೭' ರಾಮಕಾಂತನ ರಾಜ್ಯವು ಹೋದಾಗ ರಾಣಿಯು ಗರ್ಭವತಿಯಾಗಿದ್ದ ಳೆಂದು ಹಿಂದೆ ಬರೆದಿರುವೆನಲ್ಲ ವೆ! ಆಕೆಗೆ ಸ್ವಲ್ಪ ಕಾಲದಲ್ಲಿಯೇ ಪುತ್ರನು ಹುಟ್ಟಿ ದನು. ಅನಂತರ ಇನ್ನೊಬ್ಬ ಮಗನು ಜನಿಸಿದನು, ಆದರೆ ಈ ಮಕ್ಕಳು ಬಾಲ್ಯ ದಲ್ಲಿಯೇ ಕಾಲವಾದರು. ಆ ಮೇಲೆ ಈಕೆಗೆ 'ತಾರೆ' ಯೆಂಬ ಪುತ್ರಿಯು ಹುಟ್ಟ ದಳು, ತಾರೆಯು ಬಾಲ್ಯದಲ್ಲಿಯೇ ವಿತಂತುವಾದುದರಿಂದ ತಾಯಿಯ ಬಳಿಯಲ್ಲಿ ಇರುತಲಿದ್ದಳು. ಪತಿಯು ಗತಿಸಿದನಂತರ ಭವಾನಿಯು ಸಿಂಹಾಸನವನ್ನು ಏರಿದಳು-ಆ ಕಾಲದಲ್ಲಿ ಬಂಗಾಳಾದೇಶಕ್ಕೆ ಸುರಾಜದೌಲನೆಂಬ ಯವನನು ನವಾಬನಾಗಿದ್ದನು. ಹಿಂದೂದೇಶದ ಚರಿತ್ರೆಯನ್ನೋದಿದವರಿಗೆ ಸುರಾಜದೌಲನ ದುಸ್ಸೇಷ್ಟೆಗಳು ಚನ್ನಾಗಿ ತಿಳಿದಿರುವುವು, ಈತನು ವ್ಯಭಿಚಾರಾದಿ ದುಷ್ಕರ್ಮಗಳಿಗೆ ಧನವನ್ನು ವ್ಯಯ ಮಾಡಿ, ತನ್ನ ಕೈಕೆಳಗಿನ ಮಂಡಲಾಧಿಪತಿಗಳಿಂದ ಧನವನ್ನು ಬಲಾತ್ಕಾರವಾಗಿ ಸೆಳೆಯುತಲಿದ್ದನು. ದ್ರವ್ಯವನ್ನು ಕೊಡಲಾರದವರನ್ನು ಬಹು ಕ್ರೂರವಾಗಿ ಹಿಂಸಿಸುತ್ತಿದ್ದನು. ಈ ದುಷ್ಟನು ಸ್ವಲ್ಪವೂ ಹಿಂತೆಗೆಯದೆ ಪರಸ್ತ್ರೀಯರನ್ನು ಸೆರೆ ಹಿಡಿಯುತ್ತಿದ್ದನು. ನ್ಯಾಯವೆನ್ನುವುದು ಈತನ ರಾಜ್ಯದಲ್ಲಿ ಔಷಧಕ್ಕಾದರೂ ಕಾಣಬರುತ್ತಿರಲಿಲ್ಲ. ತನ್ನ ರಾಜ್ಯಕ್ಕಿಂತಹ ದುಷ್ಟನಿಂದೆಂದಿಗಾದರೂ ಕೆಡುಕುಂಟಾಗಬಹುದೆಂದು ಎಣಿಸಿ, ರಾಣೀಭವಾನಿಯು ತನ್ನ ಸೈನ್ಯವನ್ನು ಸರಿಮಾಡಲಾರಂಭಿಸಿದಳು. ಸೈನ್ಯದ ಭಟರನ್ನು ಹೆಚ್ಚಿಸಿ, ಯುದ್ದ ಮಾಡಲಸಮರ್ಥರಾದ ಭಟರನ್ನು ತೆಗೆದು ಹಾಕಿ ಸಮರ್ಥರಾದವರನ್ನು ಸೇರಿಸಿ, ಅವರಿಂದ ವಿನೋದ ಯುದ್ಧವಂ ಮಾಡಿ ಸುತ್ತ ಸೈನ್ಯವನ್ನು ವೃದ್ಧಿಮಾಡಿದಳು. ರಾಣಿಯ ಪುತ್ರಿಯಾದ ತಾರೆಯು ಬಂಗಾಳಾ ದೇಶದಲ್ಲಿ ವಿಖ್ಯಾತೆಯಾದ ಸುಂದರಿಯಾಗಿದ್ದಳು, ಈಕೆಯ ಸೌಂದರ್ಯವನ್ನು ಕೇಳಿ ನವಾಬನಿಗೆ ಈಕೆ ಯನ್ನು ಸೆರೆಹಿಡಿಯಬೇಕೆಂಬ ದುರ್ಬುದ್ಧಿಯುಂಟಾಯಿತು. ತಾರೆಯನ್ನು ತನಗೆ ಕೊಡಬೇಕೆಂದು ನವಾಬನು ರಾಣಿಗೆ ವರ್ತಮಾನವನ್ನು ಕಳುಹಿದನು. ರಾಣಿಯು ಅತ್ಯಂತ ಕೋಧಯುಕ್ಕೆಯಾಗಿ ಆ ವರ್ತಮಾನವನ್ನು ತಂದ ದೂತನನ್ನು ಬಹಳ ಅವಮಾನಪಡಿಸಿ ಕಳುಹಿದಳು. ಇದರಿಂದ ನವಾಬನು ಕ್ರೋಧಾವೇಶ ಪರವಶ ನಾಗಿ ನಾಟೂರು ರಾಜ್ಯವನ್ನು ಹಾಳುಮಾಡಿ, ತಾರಾ ಭವಾನಿಯರನ್ನು ಸೆರೆಹಿಡಿದು ತರುವಂತೆ ತನ್ನ ಸೈನ್ಯವನ್ನು ಕಳುಹಿದನು. ಹೀಗೆ ನಡೆಯುವದೆಂದು ಪೂರ್ವವೇ ರಾಣಿಗೆ ತಿಳಿದಿತ್ತಾದ ಕಾರಣ, ಆಕೆಯು ನಗರದ ದ್ವಾರಗಳನ್ನು ಮುಚ್ಚಿಸಿ, ಸೈನ್ಯಾಧಿಪತ್ಯವನ್ನು ತಾನೇ ವಹಿಸಿ ಸೈನ್ಯವನ್ನು ತೆಗೆದುಕೊಂಡು ಹೊರಬಾಗಿಲ ಬಳಿಯಲ್ಲಿ ನವಾಬನ ಸೈನ್ಯವನ್ನು ಎದುರಿಸಿದಳು. ಇಲ್ಲಿ ಘೋರಯುದ್ಧವು