ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೪೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. ಪ್ರತಿ ವರ್ಷದಲ್ಲಿಯೂ ಭವಾನಿಯು ೨೫ ಸಾವಿರ ರೂಪಾಯಿಗಳನ್ನು ಸಾಮಾನ್ಯ ದಾನಗಳಿಗಾಗಿ ವಿನಿಯೋಗಿಸುತಲಿದ್ದಳು. ಗಂಗಾತೀರದಲ್ಲಿ ವೇದಾಧ್ಯ ಯನವನ್ನು ಮಾಡುವ ಬ್ರಾಹ್ಮಣೋತ್ತಮರಿಗೂ, ಯೋಗಾಭ್ಯಾಸವನ್ನು ಮಾಡುವ ಯೋಗಿಗಳಿಗೂ, ಅತಿಥಿಗಳಿಗೂ ಅಭ್ಯಾಗತರಿಗೂ ಭೋಜನಕ್ಕಾಗಿ ಅನೇಕ ಸತ್ರಗಳನ್ನು ಗಂಗಾತೀರದಲ್ಲಿ ಸ್ಥಾಪಿಸಿದಳು, ಸಂಸ್ಕೃತವನ್ನೂ, ವೇದಶಾಸ್ತ್ರ ಗಳನ್ನೂ ಕಲಿವ ವಿದ್ಯಾರ್ಥಿಗಳಿಗೆ ವೇತನವನ್ನು ಕೊಡುವುದಕ್ಕೆ ಇಪ್ಪತೈದುಸಾವಿರ ರೂಪಾಯಿಗಳು ಪ್ರತಿವರ್ಷವೂ ವೆಚ್ಚವಾಗುವಂತೆ ಏರ್ಪಾಟು ಮಾಡಿದಳು. ಆ ವೇತನಗಳು ಈಗಲೂ ಕೊಡಲ್ಪಡುತಲಿವೆಯಂತೆ. ಅನೇಕ ಗೀರ್ವಾಣ ಪಾಠಶಾಲೆಗಳನ್ನು ಸ್ಥಾಪಿಸಿ, ಅವುಗಳಲ್ಲಿ ದೊಡ್ಡ ವಿದ್ವಾಂಸರನ್ನು ಗುರುಗಳನ್ನಾಗಿ ನಿಯಮಿಸಿ, ವಿದ್ಯಾರ್ಥಿಗಳಿಗೆ ಪಾಠಶಾಲೆಯಲ್ಲಿ ಅನ್ನವನ್ನಿಡುವಂತೆ ಏರ್ಪಾಟು ಮಾಡಿದಳು, ಶಾಸ್ತ್ರಗಳಲ್ಲಿ ಪ್ರವೀಣರಾದ ವಿದ್ಯಾರ್ಥಿಗಳಿಗೆ ಅವರವರ ಪ್ರವೀಣ ತೆಗೆ ತಕ್ಕ ಪಾರಿತೋಷಕಗಳನ್ನು ಕೊಡುವಂತೆ ನಿಯಮಿಸಿದಳು. ತಾನು ಮಾಡಿದ ಸತ್ಕಾರಗಳೆಲ್ಲ ತನ್ನ ಮರಣಾನಂತರವೂ ನಿರ್ವಿಘ್ನವಾಗಿ ನಡೆಯ ಬೇಕೆಂದು, ಈಸ್ಟ್ ಇಂಡಿಯಾ ಕಂಪೆನಿಯವರಿಗೆ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಅದರ ಬಡ್ಡಿಯಿಂದ ಮೇಲೆ ಹೇಳಿದ ಧರ್ಮಕೃತ್ಯಗಳು ಶಾಶ್ವತವಾಗಿ ನಡೆಯುವಂತೆ ಮಾಡಿದಳು, ಈಗಲೂ ಬಂಗಾಳಾ ದೇಶದಲ್ಲಿ ಅನೇಕ ವಿದ್ಯಾ ರ್ಥಿಗಳು ರಾಣಿಯವರನ್ನು ಸ್ಮರಿಸುತ್ತ ಸಂಸ್ಕೃತ ವಿದ್ಯಾಮೃತವನ್ನು ಪಾನಮಾಡುತ ಲಿದಾರೆ. ಈಕೆಯು ಅನೇಕರಿಗೆ ಭೂದಾನಗಳನ್ನು ಮಾಡಿದಳು. ಬಡವರಿಗೆ ಕಂದಾಯವನ್ನು ಬಿಟ್ಟು ಕೊಟ್ಟಳು. ಇದರಿಂದ ಈಕೆಯ ರಾಜ್ಯದಲ್ಲಿ ಬಡವರೂ ಸುಖವಾಗಿದ್ದರು. ಈಕೆಯು ಕಾಶೀ, ಗಯೆ, ರಾಜಶಾಹಿ, ಮೊದಲಾದ ಸ್ಥಳಗಳಲ್ಲಿ ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ಮಿಸಿದಳು. ಇವುಗಳಲ್ಲಿ ಕಾಶಿಯಲ್ಲಿರುವ ವಿಶ್ವೇ ಶ್ವರದೇವಾಲಯವು ಶ್ರೇಷ್ಠವಾದ ಕರೀಕಲ್ಲಿನಿಂದ ಕಟ್ಟಲ್ಪಟ್ಟು ಬಹು ರಮ್ಯವಾಗಿದೆ. ಇದರಲ್ಲಿರುವ ವಿಶ್ವೇಶ್ವರ, ದಂಡಪಾಣಿ, ದುಗ್ಡೆ, ತಾರೆ, ರಾಧಾಕೃಷ್ಣ ಇವರ ವಿಗ್ರಹಗಳೂ, ಶಿವಲಿಂಗಗಳೂ, ಅತ್ಯಂತ ಸುಂದರವಾಗಿವೆ. ಕಾಶೀಕ್ಷೇತ್ರದಲ್ಲಿ ಅನೇಕ ಘಟ್ಟಗಳನ್ನೂ, ಧರ್ಮಶಾಲೆಗಳನ್ನೂ ಸ್ಥಾಪಿಸಿದುದಲ್ಲದೆ, ಏಳುನೂರು ಮನೆಗಳನ್ನು ಕಟ್ಟಿಸಿ, ಇಹಸೌಖ್ಯವನ್ನು ತ್ಯಜಿಸಿ ಕಾಶೀವಾಸಮಾಡಲು ಬಂದ ಅನಾಥರಿಗೆ ಅವುಗಳನ್ನಿತ್ತು, ಅಲ್ಲೇ ಅವರಿಗೆ ಭೋಜನವಾಗುವಂತೆ ಮಾಡಿಸಿದಳು. ಮತ್ತು ಅವರ ಮರಣಾನಂತರ ಉತ್ತರಕ್ರಿಯೆಗಳನ್ನು ಯಥಾವಿಧಿಯಾಗಿ ನಡೆಸುತ ಲಿದ್ದಳು, ಪಂಚಕೋಶದ ಸುತ್ತಲೂ ಈಕೆಯು ಕಟ್ಟಿಸಿರುವ ಧರ್ಮಗೃಹಗಳೂ, ಬಾವಿಗಳೂ, ಹೇರಳವಾಗಿವೆ. ಈಕೆಯ ಸಹಾಯದಿಂದ ಕಾಶಿಯಲ್ಲಿ ನಾಲ್ಕು ಸಾವಿರ ಪ್ರಜೆಗಳು ಸುಖವಾಗಿ ಜೀವಿಸುತಲಿದ್ದರು.