ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೫೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಲ್ಯಾಬಾಯಿ ಹೋಳಕರ್, 44 ಸರ್ವಾಧಿಕಾರಿಯಾಗಿದ್ದನು. ಮಾಧವರಾಯನು ನ್ಯಾಯಪ್ರವರ್ತಕನು, ರಘು ನಾಥರಾಯನು ಒಳ್ಳೆಯವನಾದರೂ ಒಂದೊಂದು ಸಲ ಹುಚ್ಚನಂತೆ ಮೂರ್ಖ ಕೃತ್ಯಗಳನ್ನು ಮಾಡುತಲಿದ್ದನು, ಮಾಲೇರಾಯನು ಕಾಲವಾದಾಗ ಗಂಗಾಧರ ಯಶವಂತನು ಮಂತ್ರಿಯಾಗಿದ್ದನು. ಆತನು ಅಹಲ್ಯಾಬಾಯಿಗೆ, “ ನಿಮ್ಮ ಸಗೋ ತ್ರನಾದ ಒಬ್ಬ ಹುಡುಗನನ್ನು ದತ್ತು ತೆಗೆದುಕೊಂಡು, ಅವನಿಗೆ ರಾಜ್ಯವನ್ನು ಒಪ್ಪಿಸಬೇಕು. ಆ ಬಾಲಕನು ಯುಕ್ತವಯಸ್ಕನಾಗುವವರೆಗೂ, ಅವನ ಹೆಸರಿ ನಲ್ಲಿ ನಾನು ರಾಜ್ಯಭಾರವನ್ನು ಮಾಡುವೆನು, ನೀವು ಕೆಲಗ್ರಾಮಗಳನ್ನು ತೆಗೆದು ಕೊಂಡು ಬೇರೆಯಾಗಿರಬೇಕು, ನೀವು ರಾಜ್ಯ ಪಾಲನೆಯನ್ನು ಮಾಡಲಸಮ ರ್ಥರು,” ಎಂದು ಉಪದೇಶವನ್ನು ಮಾಡಿದನು. ಈ ಮಾತಿಗೆ ಅಹಲ್ಯಾ ಬಾಯಿಯು ಸಮ್ಮತಿಸದೆ ತಾನೇ ರಾಜ್ಯಭಾರವನ್ನು ವಹಿಸುವೆನೆಂದು ನುಡಿದಳು. ಸ್ತ್ರೀಯಾದರೂ ರಾಜ್ಯಭಾರವನ್ನು ವಹಿಸುವೆನೆಂದು ಧೈರ್ಯದೊಡನೆ ಹೇಳಿದು ದಕ್ಕೆ ಗಂಗಾಧರನು ಆಗ್ರಹಯುಕ್ತನಾಗಿ, ಯಾವುದಾದರೂ ಒಂದು ಉಪಾಯ ದಿಂದ ಆಕೆಯನ್ನು ಅವಮಾನಪಡಿಸಬೇಕು ಎಂದು ಆಲೋಚಿಸಿ, “ ಹೋಳಕರ್‌ ರಾಜ್ಯಕ್ಕೆ ಪ್ರಸ್ತುತದಲ್ಲಿ ವಾರಸದಾರರು ಯಾರೂ ಇಲ್ಲ. ಆದಕಾರಣ ಈ ರಾಜ್ಯವನ್ನು ನೀವು ಅನಾಯಾಸವಾಗಿ ಸ್ವೀಕರಿಸಬಹುದು,” ಎಂದು ರಘುನಾಥ ರಾಯನಿಗೆ ಬರೆದನು. ಸ್ವತಂತ್ರರಾಜ್ಯವು ಬೇಕೆಂದಪೇಕ್ಷಿಸುತಲಿದ್ದ ರಘುನಾಥ ರಾಯನು ಗಂಗಾಧರನ ಪತ್ರವನ್ನು ನೋಡಿದ ಕೂಡಲೆ, ಮಾಳವದೇಶದ ಮೇಲೆ ದಂಡೆತ್ತುವುದಕ್ಕೆ ಸೈನ್ಯವನ್ನು ಸಜ್ಜುಗೊಳಿಸಿದನು. ಈ ವಿಷಯ ಗಳನ್ನೆಲ್ಲ ದುಃಖಮಗ್ಗೆಯಾದ ಅಹಲ್ಯಾಬಾಯಿಯು ಕೇಳಿ, ಭೋಸಲಾ, ಗಾಯಕ ವಾಡೆ, ದಾಭಾಡೆ, ಮೊದಲಾದ ಸಾಮಂತನರಪತಿಗಳಿಗೆ ರಹಸ್ಯವಾಗಿ, “ ಕೈಲಾಸ ವಾಸರಾದ ಮಲ್ಲಾರರಾವ್ ಸುಬೇದಾರರು ಶ್ರೀಮಂತರಿ (ಪೇಷ್ಟೆಗಳಿಗೆ ಶ್ರೀಮಂತ ರೆಂದು ಬಿರುದು) ಗಾಗಿ ಅನೇಕ ಕಷ್ಟಗಳನ್ನನುಭವಿಸಿ, ಅವರ ರಾಜ್ಯವನ್ನು ಸ್ಥಿರ ಪಡಿಸಿದರು. ಅಂತಹ ಸೇವಕನ ಮರಣಾನಂತರ ಆತನ ವಂಶಸ್ಥರಾದ ನಮ್ಮಿಂದ ಉಚಿತಸೇವೆಯನ್ನು ಕೈಗೊಳ್ಳುತ್ತ, ನಮ್ಮನ್ನು ರಕ್ಷಿಸುವುದು ಶ್ರೀಮಂತರಿಗೆ ಧರ್ಮವು, ಅವರು ಹಾಗೆ ಮಾಡದೆ ನಮ್ಮಲ್ಲಿರುವ ಅಲ್ಪ ಧನಕ್ಕೆ ಆಶೆಪಟ್ಟು, ನಮ್ಮ ರಾಜ್ಯವನ್ನು ತೆಗೆದುಕೊಳ್ಳುವುದಕ್ಕೆ ಬರುತ್ತಲಿದಾರೆ. ಈ ದಿವಸ ನಮ್ಮ ರಾಜ್ಯದ ಮೇಲೆ ದಂಡೆತ್ತಿ ಬಂದಂತೆ ನಾಳೆ ನಿಮ್ಮ ರಾಜ್ಯದ ಮೇಲೆಯೂ ದಂಡೆತ್ತಿ ಬರಬಹುದು, ಆದುದರಿಂದ ನನ್ನ ಸಹಾಯಾರ್ಥವಾಗಿ ನೀವು ನಿಮ್ಮ ಸೈನ್ಯ ಗಳನ್ನು ಕಳುಹಿಸಬೇಕು,” ಎಂದು ಬರೆದ ಲೇಖನವನ್ನು ನೋಡಿದ ಕೂಡಲೆ ಅವ ರೆಲ್ಲರೂ ತಮ್ಮ ಸೈನ್ಯಗಳನ್ನು ಕಳುಹಿಸಿ, ತಾವು ಸಹ ಸಹಾಯಕ್ಕೆ ಬರುವೆನೆಂದು ವಾಗ್ದಾನವನ್ನು ಮಾಡಿದರು. ಅಹಲ್ಯಾಬಾಯಿಯು ಮಾಧವರಾಯರ ಬಳಿಗೆ ಒಬ್ಬ ಚಾರನನ್ನು ರಘುನಾಥರಾಯನ ದುರದ್ದೇಶವನ್ನು ತಿಳಿಸಲು ಕಳುಹಿಸಿದಳು.