ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಗೌರೀ ಲಕ್ಷ್ಮಿಬಾಯಿ. “ ಅಹಹ ಮಹತಾಂ ನಿಸ್ಸಿಮಾನಶ್ಚರಿತ್ರ ವಿಭೂತಯಃ ” ಕುಟುಂಬದಲ್ಲಿರುವ ಹತ್ತು ಜನರ ಸ್ವಭಾವವೂ ಒಂದೇ ರೀತಿಯಾಗಿರು ವುದಿಲ್ಲ, ಅವರೆಲ್ಲರ ಕೋರಿಕೆಗಳನ್ನು ನೆರವೇರಿಸಿ, ಅವರೆಲ್ಲರನ್ನೂ ತನ್ನ ಆಜ್ಞೆ ಯಲ್ಲಿಟ್ಟಿರಬೇಕು, ಕುಟುಂಬದ ಯಜಮಾನನು ಚತುರನೂ, ಧೈರ್ಯವಂತನೂ ಆಗಿದ್ದ ಪಕ್ಷದಲ್ಲಿ, ಆತನೂ ಆತನ ಸಂರಕ್ಷಣೆಯಲ್ಲಿರುವವರೂ ಸುಖವಾಗಿರು ವರು, ಇಲ್ಲದಿದ್ದರೆ ಯಜಮಾನನೂ ಗೃಹದಲ್ಲಿರುವವರೂ ದುಃಖಕ್ಕೀಡಾಗ ಬೇಕಾಗುವುದು. ಆದುದರಿಂದ ಲೋಕದಲ್ಲಿ ಕುಟುಂಬ ರಕ್ಷಣೆಯು ಕಷ್ಟ ವೆಂದು ಭಾವಿಸುತ್ತಾನೆ. ಹೀಗಿರುವಲ್ಲಿ ಇಂತಹ ಅನೇಕ ಕುಟುಂಬಗಳನ್ನೊಳ ಗೊಂಡಿರುವ ರಾಜ್ಯದ , ರಕ್ಷಣೆಯು ಅಬಲೆಯರಿಗೆ ಸಂಪ್ರಾಪ್ತವಾದರೆ ಅದು ಎಷ್ಟು ಶ್ರಮಸಾಧ್ಯವು ಎಂಬುದನ್ನು ಹೇಳಲವಶ್ಯಕವಿಲ್ಲ. ಆದರೆ ಸ್ತ್ರೀಯರಿಗೆ ರಾಜ್ಯಾಧಿಕಾರವು ದೊರೆತಾಗ, ಅವರು ಪುರುಷರಿಗಿಂತಲೂ ಅತ್ಯಂತ ವಿಚಕ್ಷಣೆ ಯಿಂದ ರಾಜ್ಯವನ್ನಾಳಿದರೆಂದು ತಿಳಿದು ಬಂದಿದೆ. ಮಲಬಾರು ದೇಶದಲ್ಲಿ ತಿರುವಾಂಕೂರೆಂದೂ, ಕೊಚ್ಚಿಯೆಂದೂ ಎರಡು ಸಂಸ್ಥಾನಗಳಿರುವುವು, ಅವುಗಳಲ್ಲಿ ತಿರುವಾಂಕೂರು ರಾಜ್ಯವು ಅತಿ ಪ್ರಾಚೀನ ಕಾಲದಿಂದಲೂ ದಾನಧರ್ಮಗಳ ವಿಷಯದಲ್ಲಿ ವಿಖ್ಯಾತಿಯನ್ನು ಹೊಂದಿದೆ. ತಿರುವಾಂಕೂರು ಪ್ರಜೆಗಳ ಆಚಾರ ವ್ಯವಹಾರಗಳೇ ಒಂದುವಿಧ: ನಮ್ಮ ಆಚಾ ರಗಳೇ ಬೇರೊಂದು ವಿಧ. ಆ ದೇಶದಲ್ಲಿ ನಮ್ಮ ದೇಶದಂತೆ ತಂದೆಯ ಆಸ್ತಿಯು ಮಗನಿಗೆ ಸೇರದೆ ಸೋದರಳಿಯನಿಗೆ ಸೇರುವುದು, ಸೋದರಳಿಯನಿಲ್ಲದಿದ್ದರೆ ಸೋದರ ಸೊಸೆಗೂ ಆಕೆಯ ಸಂತತಿಗೂ ಬರುವುದು, ಹೀಗೆ ಅಲ್ಲಿ ರಾಜ್ಯದ ಹಕ್ಕು ಕನ್ಯಾವಂಶದವ ರಿಗೇ ಹೊರತು ಪುತ್ರ ಸಂತತಿಗೆ ದೊರೆವುದಿಲ್ಲ. ರಾಜಪುತ್ರಿಯು ಒಂಭತ್ತು ವರ್ಷದವಳಾದ ಒಡನೆ ಆಕೆಗೆ ತಾಳಿ ಕಟ್ಟುವುದೆಂಬ ಒಂದು ವಿವಾಹವಿಧಿಯನ್ನು ನಡೆಸುವರು. ಅದರಲ್ಲಿ ವರನು ಇರುವುದಿಲ್ಲ. ಪುರೋಹಿತನೇ ಹುಡುಗಿಗೆ ಮಂಗಳಸೂತ್ರವನ್ನು ಕಟ್ಟುವನು. ರಾಜಕನ್ಯಗೆ ಯೌವನ ದೆಶೆಯು ಪ್ರಾಪ್ತ ವಾದ ಬಳಿಕ ಒಬ್ಬ ನಂಬೂರಿ ಬ್ರಾಹ್ಮಣನನ್ನು ಕರೆತಂದು ಈಕೆಗೆ ವಿವಾಹವನ್ನು