ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಅಬಲಾ ಸಚ್ಚರಿತ್ರ ರತ್ನ ಮಾಲೆ. ಮಾಡುವರು. ಈತನನ್ನು " ಕೋವಿಲತಂಬೂರ್ರಾ' ಎಂದರೆ ರಾಜಭವನದ ಮಹಾರಾಜನೆಂದು ಕರೆಯುವರು, ಈ ದಂಪತಿಗಳ ಮಕ್ಕಳಿಗೆ ರಾಜ್ಯವು ದೊರೆ ಯುವುದು, ಪ್ರಭುತ್ವವನ್ನು ಮಾಡುವ ರಾಜನ ಪತ್ನಿಯು ರಾಣಿಯಲ್ಲ. ಆ ರಾಜನ ಪುತ್ರನು ಯುವರಾಜನಾಗುವುದಿಲ್ಲ. ಆ ರಾಜಪುತ್ರನಿಗೆ ಅವನ ಸೋದರಮಾವನ ಆಸ್ತಿಯು ಲಭಿಸುವುದೇ ಹೊರತು ರಾಜ್ಯವು ಲಭಿಸುವುದಿಲ್ಲ, ಇಷ್ಟು ಸಂಗತಿಯು ಜ್ಞಾಪಕದಲ್ಲಿದ್ದರೆ ಈ ಚರಿತ್ರೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ವಂಚಿಪಾಲಬಲರಾಮ ಶರ್ಮನು ತಿರುವಾಂಕೂರು ರಾಜ್ಯವನ್ನು ಪಾಲಿಸುತಲಿದ್ದನು. ಪರಿಪಾಲನ ಸಾಮರ್ಥ್ಯವಿಲ್ಲದವನಾದುದರಿಂದ, ಈತನ ರಾಜ್ಯದಲ್ಲಿ ಬಡವರಿಗೆ ಬಹು ಅನ್ಯಾಯ ವುಂಟಾಗುತಲಿತ್ತು. ದೊಡ್ಡ ಅಧಿಕಾರಿಗಳಿಗೆ ತಮ್ಮತಮ್ಮ ಕೆಲಸಗಳಲ್ಲಿ ಅಲಕ್ಷ್ಯ. ಚಿಕ್ಕ ಅಧಿಕಾರಿಗಳ ಲೆಕ್ಕ ಮುಂತಾದುವುಗಳನ್ನು ವಿಚಾರಿಸುವವರಿಲ್ಲ. ಆದುದ ರಿಂದ ರಾಜನಿಗೆ ಕಂದಾಯಗಳು ಸರಿಯಾಗಿ ಬಾರದೆ ರಾಜ್ಯವು ದಿನದಿನಕ್ಕೆ ಕ್ಷೀಣದೆಶೆಗೆ ಬರುತಲಿತ್ತು. ಈಸ್ಟಿಂಡಿಯಾ ಕಂಪೆನಿಯವರು ರಾಜ್ಯದ ದುಸ್ಥಿತಿ ಯನ್ನು ನೋಡಿ, - “ ನೀವು ರಾಜ್ಯದ ಬಂದೋಬಸ್ತನ್ನು ಆರು ತಿಂಗಳಲ್ಲಿ ಕ್ರಮ ಪಡಿಸದಿದ್ದರೆ ರಾಜ್ಯ ವ್ಯವಹಾರಗಳನ್ನು ನಾವು ನೋಡಿಕೊಳ್ಳುವೆವು,” ಎಂದು ಬಲರಾಮಶರ್ಮನಿಗೆ ತಿಳಿಯಪಡಿಸಿದರು. ಇದರಿಂದ ದೊರೆಯು ಚಿಂತಾ ಕ್ರಾಂತನಾಗಿ ಕೆಲವು ದಿವಸಗಳಲ್ಲಿ ಪರಲೋಕಗತನಾದನು. ದೊರೆಯ ತಾಯಿ ಯೂ ಅಕ್ಕನಾದ ಗೌರೀಬಾಯಿಯೂ ತತ್ತೂರ್ವವೇ ಮೃತರಾಗಿದ್ದರು, ಗೌರೀ ಬಾಯಿಗೆ ಪುತ್ರ ಸಂತಾನ ವಿರಲಿಲ್ಲ. ಆಕೆಗೆ ಇಬ್ಬರು ಪುತ್ರಿಯರು ಇದ್ದರು. ಅವರು ಇನ್ನೂ ವಿವಾಹಿತೆಯರಾಗಿರಲಿಲ್ಲ. ಆದಕಾರಣ ಗೌರಿಬಾಯಿಯ ಪ್ರಥಮ ಪುತ್ರಿಯಾದ ಲಕ್ಷ್ಮೀಬಾಯಿಯು ರಾಜ್ಯವನ್ನು ಪಾಲಿಸಬೇಕೆಂತಲೂ, ಆಕೆಗೆ ಪುತ್ರನು ಹುಟ್ಟಿದರೆ ಆ ಬಾಲಕನು ರಾಜ್ಯಕ್ಕೆ ಹಕ್ಕುದಾರನಾಗುವನೆಂತಲೂ ಕಂಪೆನಿಯವರು ಏರ್ಪಾಟುಮಾಡಿದರು. ಲಕ್ಷ್ಮೀಬಾಯಿಯೂ, ಆಕೆಯ ತಂಗಿ ಯಾದ ಪಾರ್ವತೀಬಾಯಿಯೂ ದೇಶಭಾಷೆಯನ್ನೂ ಸಂಸ್ಕೃತವನ್ನೂ ತಿಳಿದು ಸುಶೀಲೆಯರೆನಿಸಿದ್ದರು. ಲಕ್ಷ್ಮೀಬಾಯಿಯು ಇಪ್ಪತ್ತು ವಯಸ್ಸಿನ ಯುವತಿ ಯಾದರೂ ಯುಕ್ತಾಯುಕ್ತ ವಿಚಕ್ಷಣೆಯುಳ್ಳವಳಾಗಿಯೂ, ದೀರ್ಘಾಲೋಚನ ಪರಳಾಗಿಯೂ ಇದ್ದುದರಿಂದ, ಕರ್ನಲ್ ಮೆಕಾಲೆದೆರೆಯು, “ ಚಿಕ್ಕವಳಾದರೂ, ತಿರುವಾಂಕೂರುರಾಜ್ಯದ ದುಃಸ್ಥಿತಿಯನ್ನು ತೊಲಗಿಸಿ, ರಾಜ್ಯವನ್ನು ಉನ್ನತಸ್ಥಿತಿಗೆ ತರಲು ಯೋಗ್ಯವಾದ ಸದ್ದು ಣಗಳು ಈಕೆಯಲ್ಲಿವೆ,” ಎಂದು ಕಂಪೆನಿಯವರಿಗೆ ತಿಳಿಸಿದನು. ಕಂಪೆನಿಯವರು ಅದಕ್ಕೆ ಸಮ್ಮತಿಸಿ, ಲಕ್ಷ್ಮೀಬಾಯಿಯ ಸಿಂಹಾಸ ನಾರೋಹಣಮಹೋತ್ಸವವನ್ನು ಯಥಾವಿಧಿಯಾಗಿ ನಡೆಸುವುದಕ್ಕೆ ಆತನನ್ನೇ ನಿಯಮಿಸಿದರು. ಇಷ್ಟರಲ್ಲಿ ಲಕ್ಷ್ಮೀಬಾಯಿಯ ಜ್ಞಾತಿಗಳು, ತಮಗೆ ಸಿಂಹಾಸ