ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜೀಗರೀ ಲಕ್ಷ್ಮಿಬಾಯಿ. ೪೩ ನದ ಮೇಲೆ ಪೂರ್ಣಾಧಿಕಾರವುಂಟೆಂತಲೂ, ಹಕ್ಕುದಾರರು ಇರುವಾಗ ಹೆಂಗಸಿಗೆ ರಾಜ್ಯಾಧಿಕಾರವನ್ನು ಕೊಡಕೂಡದೆಂತಲೂ, ಯುದ್ಧಕ್ಕೆ ಸಿದ್ಧರಾದರು. ಆಮೇಲೆ ರೆಸಿಡೆಂಟು ಕರ್ನಲ್ ಮೆಕಾಲೆಯು ಅವರನ್ನೂ, ಅವರಿಗೆ ಸಹಾಯಕರಾಗಿದ್ದವ ರನ್ನೂ ಹಿಡಿದು ರಾಜದ್ರೋಹಿಗಳೆಂದು ತಲಚೇರಿಯಲ್ಲಿರುವ ಕಾರಾಗಾರದಲ್ಲಿ ಇಡಿ ಸಿದನು. ಅವರು ಕೆಲವು ದಿನಗಳನಂತರ ಚೆಂಗಲ್ಪಟ್ಟಿಗೆ ಕಳುಹಿಸಲ್ಪಟ್ಟು ಅಲ್ಲಿಯೇ ಮೃತರಾದರು. - ಶತ್ರುಗಳನ್ನು ಶಿಕ್ಷಿಸಿದನಂತರ ಲಕ್ಷ್ಮೀಬಾಯಿಯ ಪಟ್ಟಾಭಿಷೇಕ ಮಹೋ ತೃವಕ್ಕೆ ಪ್ರಾರಂಭವಾಯಿತು. ಕರ್ನಲ್ ಮೆಕಾಲೆ ದೊರೆಯು ದೊಡ್ಡ ರಾಜ ಸಭೆಯನ್ನು ಮಾಡಿದನು. ಸಭೆ ಸೇರಿದ ದಿವಸ, ಆಸ್ಥಾನ ಮಂಟಪವು ಅನೇಕ ಸುಂದರವಾದ ಪದಾರ್ಥಗಳಿಂದ ಅಲಂಕರಿಸಲ್ಪಟ್ಟು ಮನೋಹರವಾಗಿ ಒಪ್ಪುತ ಲಿತ್ತು. ಆ ಮಹೋತ್ಸವವನ್ನು ನೋಡುವುದಕ್ಕೆ ರಾಜ್ಯದ ಭಿನ್ನ ಭಿನ್ನ ಪ್ರದೇಶ ಗಳಿಂದ ಅಸಂಖ್ಯ ಜನರು ಬಂದಿದ್ದರು, ಮುಖ್ಯರಾದ ಸಾಮಂತರು, ಸರದಾರರು ಸಭಾಸ್ಥಾನವನ್ನು ಸೇರಿ, ಅವರವರನಿಯಮಿತ ಆಸನಗಳಲ್ಲಿ ಆಸೀನರಾದ ಬಳಿಕ, ರಾಜಕನೈಯರಾದ ಲಕ್ಷ್ಮೀಪಾಶ್ವತಿಯರು ತಮ್ಮ ದೇಶಾಚಾರವನ್ನನುಸರಿಸಿ, ಉತ್ತಮ ವಸ್ತ್ರಾಲಂಕಾರಗಳನ್ನು ಧರಿಸಿ, ಸಭೆಯನ್ನು ಪ್ರವೇಶಿಸಿ, ತಮಗಾಗಿ ನಿಯಮಿಸಲ್ಪಟ್ಟ ಉನ್ನತಾಸನಗಳ ಮೇಲೆ ಕುಳಿತುಕೊಂಡರು. ಬಳಿಕ ಕಂಪೆನಿ ಯವರ ಪ್ರತಿನಿಧಿಯಾದ ರೆಸಿಡೆಂಟ್ ಕರ್ನಲ್ • ಮೆಕಾಲೆ ದೊರೆಯು ನಿಂತು ಕೊಂಡು, ಸಭೆಯವರೆಲ್ಲರು ಆಲೈಸುವಂತೆ, “ ಕಂಪೆನೀ ಸರ್ಕಾರದವರ ಅನುಮತಿ ಯಂತೆ, ರಾಣೀಲಕ್ಷ್ಮೀಬಾಯಿಯನ್ನು ತಿರುವಾಂಕೂರು ಸಿಂಹಾಸನದ ಮೇಲೆ ಕುಳ್ಳಿರಿಸುವೆನು, ” ಎಂದು ಮೃದುಮಧುರ ಗಂಭೀರ ಸ್ವರದೊಡನೆ ಹೇಳಿ, ಸನ್ಮಾನ ಪೂರ್ವಕವಾಗಿ ಲಕ್ಷ್ಮಿಬಾಯಿಯನ್ನು ಉಚ್ಚ ಸ್ಥಾನದಲ್ಲಿದ್ದ ಸಿಂಹಾಸನದ ಮೇಲೆ ಕುಳ್ಳಿರಿಸಿದನು. ಆ ಸಮಯದಲ್ಲೇ ಸರ್ವಜನರ ಸಮ್ಮತಿಯನ್ನು ಪಡೆದು, ರಾಣಿಗೆ “ಧರ್ಮವರ್ಧಿನಿ,' ರಾಜರಾಜೇಶ್ವರಿ ಎಂಬ ಬಿರುದುಗಳನ್ನು ಸಹ ಸ೦ರಂಭದೊಡನೆ ಕೊಟ್ಟನು. ರಾಣಿಗೆ ' ಧರ್ಮವರ್ಧಿನಿ' ಎಂಬ ಬಿರುದು ಏಕೆ ಕೊಡಲ್ಪಟ್ಟಿತು ಎಂಬುದನ್ನು ಇಲ್ಲಿ ಸ್ವಲ್ಪ ವಿವರಿಸುವೆನು, ತಿರುವಾಂಕೂರು ರಾಜ್ಯಕ್ಕೆ ಅನಂತ ಶಯನ (ತ್ರಿವೇಂಡ)ವು ರಾಜಧಾನಿಯು, ಈ ನಗರವು ಮುಖ್ಯವಾದ ಕ್ಷೇತ್ರಗಳ ಲೊಂದಾಗಿದೆ. ಇಲ್ಲಿ ಪದ್ಮನಾಭಸ್ವಾಮಿಯು ಶೇಷಶಯನನಾಗಿರುವನು. ಈ ಪದ್ಮನಾಭಸ್ವಾಮಿಯು ತಿರುವಾಂಕೂರು ರಾಜರ ಕುಲದೇವರು, ರಾಣಿಯವರ ಪೂರ್ವಿಕನಾದ ಮಾರ್ತಾಂಡವರ್ಮನು ಒಂದು ದಿವಸ ತನ್ನ ರಾಜ್ಯವನ್ನೆಲ್ಲ ಈ ದೇವರಿಗೆ ಸಮರ್ಪಿಸಿದನಂತೆ! ಆಗಿನಿಂದಲೂ ಈ ರಾಜರು ಪದ್ಮನಾಭಸೇವಕ) ರೆಂತಲೂ, ' ಧರ್ಮವರ್ಧಕ' ರೆಂತಲೂ ತನಗೆ ಬಿರುದುಗಳನ್ನು ಉಂಟುಮಾಡಿ ಕೊಂಡರು. ಇವರ ರಾಜ ಮುದ್ರೆಯಲ್ಲಿ 'ಧರ್ಮೊಸ್ಮತುಲದೈವತಂ' ಎಂಬ